ಮದುವೆಗೆ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ ಶ್ರೀದೇವಿ, ಜಾನ್ವಿ ಕಪೂರ್‌ ಹುಟ್ಟಿನ ಬಗ್ಗೆ ಮೌನ ಮುರಿದ ಬೋನಿ ಕಪೂರ್‌

First Published | Oct 3, 2023, 3:55 PM IST

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿ ಹೇಗೆ ಸತ್ತರು ಎಂಬುದನ್ನು ಬಹಿರಂಗಪಡಿಸಿರುವುದರ ಜೊತೆಗೆ ಮದುವೆಗೂ ಮುನ್ನ  ಶ್ರೀದೇವಿ ಗರ್ಭಿಣಿಯಾಗಿದ್ದಾರೋ ಇಲ್ಲವೋ ಎಂಬ ಬಗ್ಗೆ ಕೂಡ  ಸಂದರ್ಶನದಲ್ಲಿ ಮೌನ ಮುರಿದಿದ್ದಾರೆ. 

ಬೋನಿ ಕಪೂರ್ ತನ್ನ ಮದುವೆಯ ಬಗ್ಗೆ ಮಾತನಾಡುತ್ತಾ, ಮದುವೆಯ ನಂತರವೇ ಜಾನ್ವಿ ಕಪೂರ್‌ಗೆ ಶ್ರೀದೇವಿ ಗರ್ಭಿಣಿಯಾಗಿದ್ದಳು ಎಂದು ಬಹಿರಂಗಪಡಿಸಿದ್ದಾರೆ.  ನನ್ನ ಎರಡನೇ ಮದುವೆ ಶ್ರೀ ಜೊತೆ  ಶಿರಡಿಯಲ್ಲಿ ನಡೆಯಿತು. ನಾವು ಜೂನ್ 2 ರಂದು ಮದುವೆಯಾದೆವು.  ನಾವು ಪ್ರತಿಜ್ಞೆ ವಿನಿಮಯ ಮಾಡಿಕೊಂಡು ಮದುವೆಯಾದೆವು, ನಾವು ಅಲ್ಲಿ ಒಂದು ರಾತ್ರಿ ಜೊತೆಯಲ್ಲೇ ಕಳೆದೆವು.

ಜನವರಿಯಲ್ಲಿ ಮಾತ್ರ ಆಕೆ ಗರ್ಭಿಣಿಯೆಂದು ಗೊತ್ತಾದಾಗ ನಮಗೆ ಬೇರೆ ದಾರಿಯಿಲ್ಲ, ನಾವು ಸಾರ್ವಜನಿಕವಾಗಿ ಜನವರಿಯಲ್ಲಿ (1997) ಮದುವೆಯಾಗಿದ್ದೇವೆ.   ಶಿರಡಿಯಲ್ಲಿ  ಇದಕ್ಕೂ ಮುನ್ನ  ಜೂನ್ 2 ರಂದು ಆಗಿದ್ದೆವು. ಅದಕ್ಕಾಗಿಯೇ ಕೆಲವು ಲೇಖಕರು  ಜಾನ್ವಿ  ಮದುವೆಗೆ ಮುಂಚೆಯೇ ಗರ್ಭಿಣಿಯಾಗಿ ಜನಿಸಿದಳು ಎಂದು ಬರೆಯುತ್ತಾರೆ ಎಂದಿದ್ದಾರೆ.

Tap to resize

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ ಅವರು ಫೆಬ್ರವರಿ 24, 2018 ರಂದು ತಮ್ಮ 54 ನೇ ವಯಸ್ಸಿನಲ್ಲಿ ದುಬೈನಲ್ಲಿ ಹಠಾತ್ ನಿಧನರಾದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದರು. 

ಶ್ರೀದೇವಿ ಸಾವಿನ ಬಳಿಕ ಕುಟುಂಬದ ಯಾರೂಬ್ಬರೂ ಕೂಡ ಅವಳ ಸಾವಿನ ಬಗ್ಗೆ ಮಾತನಾಡಿಲ್ಲ. ಐದು ವರ್ಷಗಳ ನಂತರ, ಆಕೆಯ ಪತಿ ಬೋನಿ ಕಪೂರ್  ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ ಆಕೆಯ ಸಾವಿನ ಬಗ್ಗೆ ಮೌನವನ್ನು ಮುರಿದಿದ್ದಾರೆ. ದುರದೃಷ್ಟಕರ ಸಾವಿನ ಬಗ್ಗೆ ಮಾತನಾಡುವಾಗ, ಬೋನಿ,  ಇದು ಸಹಜ ಸಾವಲ್ಲ; ಅದು ಆಕಸ್ಮಿಕ ಸಾವು ಎಂದಿದ್ದಾರೆ.
 

ನಾನು ಈ ಸಾವಿನ  ಬಗ್ಗೆ ಮಾತನಾಡದಿರಲು ನಿರ್ಧರಿಸಿದೆ. ಏಕೆಂದರೆ ನನ್ನನ್ನು 48 ಗಂಟೆಗಳ ಕಾಲ  ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ವಾಸ್ತವವಾಗಿ, ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾವು ಈ ಕೆಲಸ ಮಾಡಲೇಬೇಕಾಯ್ತು ಎಂದು ವಿಚಾರಣಾಧಿಕಾರಿಗಳು ಹೇಳಿದರು. ಮತ್ತು ಯಾವುದೇ ತಪ್ಪು ಇಲ್ಲ ಎಂದು ತಿಳಿಯಿತು. ನಾನು ಸುಳ್ಳು ಪತ್ತೆ ಪರೀಕ್ಷೆಗಳು ಮತ್ತು ಎಲ್ಲಾ ವಿಷಯಗಳನ್ನು ಒಳಗೊಂಡಂತೆ ಬೇಕಾದ ಪ್ರತಿಯೊಂದು ಪರೀಕ್ಷೆಗಳ ಮೂಲಕ ತಿಳಿಯಲು ಮುಂದಾದೆ. ತದನಂತರ ಬಂದ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಸ್ಪಷ್ಟವಾಗಿ ಹೇಳಿದೆ. 

ಶ್ರೀ ದೇವಿ  ಆಗಾಗ ಉಪವಾಸ ಮಾಡುತ್ತಿದ್ದಳು.  ಶ್ರೀದೇವಿ ತುಂಬಾ ಧಾರ್ಮಿಕರಾಗಿದ್ದರು ಮತ್ತು ಅವರು ಎಂದಿಗೂ ತಮ್ಮ ಧಾರ್ಮಿಕ ಗುರುತಿನಿಂದ ದೂರ ಸರಿಯಲಿಲ್ಲ ಎಂದಿದ್ದಾರೆ. ಶ್ರೀದೇವಿ ಮಾತ್ರವಲ್ಲ ಮಗಳು ಜಾನ್ವಿ ಕೂಡ ತುಂಬಾ ಧಾರ್ಮಿಕ ನಂಬಿಕೆ ಹೊಂದಿದ್ದಾಳೆ  ಜಾನ್ವಿ ಪ್ರತಿ ಮೂರು ತಿಂಗಳಿಗೊಮ್ಮೆ ತಿರುಪತಿಗೆ ಹೋಗುತ್ತಾಳೆ. ನನ್ನ ಪತ್ನಿ ಶ್ರೀದೇವಿ ಅವರ ಪ್ರತಿ ಜನ್ಮದಿನದಂದು ತಿರುಪತಿಗೆ ನಡೆದುಕೊಂಡು ಹೋಗುತ್ತಿದ್ದರು. ನಾನು ಕಷ್ಟದಲ್ಲಿದ್ದಾಗ ಜುಹುವಿನಿಂದ ಸಿದ್ಧಿ ವಿನಾಯಕನಿಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋಗಿದ್ದರು ಎಂದಿದ್ದಾರೆ.

ಶ್ರೀದೇವಿ ಸುಂದರಿಯಾಗಿ ಕಾಣಬೇಕೆಂದು ಬಯಸಿದ್ದಳು. ದೇಹವನ್ನು ಉತ್ತಮ ಆಕಾರದಲ್ಲಿಡಲು ಅವಳು ಬಯಸಿದ್ದಳು, ಆದ್ದರಿಂದ ಆನ್-ಸ್ಕ್ರೀನ್, ಅವಳು ಚೆನ್ನಾಗಿ ಕಾಣುತ್ತಿದ್ದಳು. ಅವಳು ನನ್ನನ್ನು ಮದುವೆಯಾದ ಸಮಯದಿಂದ, ಕ್ರ್ಯಾಶ್​ ಡಯೆಟ್​ನಲ್ಲಿದ್ದಳು ಅವಳು ಒಂದೆರಡು ಸಂದರ್ಭಗಳಲ್ಲಿ ಮೂರ್ಚೆ ಹೋಗಿದ್ದಳು ಮತ್ತು ಅವಳಿಗೆ  ಲೋ ಬಿಪಿ ಸಮಸ್ಯೆ ಇದೆ ಎಂದು ನಮ್ಮ  ವೈದ್ಯರು ಹೇಳುತ್ತಲೇ ಇದ್ದರು ಎಂದಿದ್ದಾರೆ.

ಪ್ರತೀ ವರ್ಷವೂ ಅವರು ತಮ್ಮ  ಮದುವೆ ವಾರ್ಷಿಕೋತ್ಸವವನ್ನು ಶ್ರೀದೇವಿ ಜೊತೆಗೆ ಜೂನ್‌ 2ರಂದು ಆಚರಿಸುತ್ತಿದ್ದರು. ಮೊದಲ ಮಗಳು ಜಾನ್ವಿ ಕಪೂರ್ ಮಾರ್ಚ್‌ 6, 1997ರಲ್ಲಿ ಜನಿಸಿದ್ದಾಳೆ. ಎರಡನೇ ಮಗಳು ಖುಷಿ ಕಪೂರ್ ನವೆಂಬರ್ 5, 2000 ನೇ ಇಸವಿಯಲ್ಲಿ ಹುಟ್ಟಿದ್ದಾಳೆ. 

ಇದಕ್ಕೂ ಮುನ್ನ 1983 ಮೋನಾ ಶೌರಿ ಕಪೂರ್ ಅವರನ್ನು ಬೋನಿ ಮದುವೆಯಾಗಿದ್ದರು. ಇವರಿಂದ ನಟ ಅರ್ಜುನ್‌ ಕಪೂರ್ ಮತ್ತು ಅಂಶುಲಾ ಕಪೂರ್ ಅವರನ್ನು ಪಡೆದಿದ್ದಾರೆ. 1996 ರಲ್ಲಿ ಇವರಿಂದ ಬೋನಿ ವಿಚ್ಚೇಧನ ಪಡೆದು ಶ್ರೀದೇವಿಯನ್ನು ಮದುವೆಯಾದರು. 2012ರಲ್ಲಿ ಕ್ಯಾನ್ಸರ್‌ನಿಂದ ಮೋನಾ ಶೌರಿ ಕಪೂರ್ ಮೃತಪಟ್ಟರು. ಬೋನಿ ಕಪೂರ್‌ ನಾಲ್ವರು ಮಕ್ಕಳೊಂದಿಗೆ ಈಗ ಖುಷಿಯಿಂದ ಇದ್ದಾರೆ.

Latest Videos

click me!