Published : Dec 24, 2021, 12:07 AM ISTUpdated : Dec 24, 2021, 12:26 AM IST
ಮುಂಬೈ(ಡಿ. 23) ಬಾಲಿವುಡ್ (Bollywood) ನಟಿ ಆಲಿಯಾ ಭಟ್ ಗೆ (Alia Bhatt)ದೊಡ್ಡದೊಂದು ರಿಲೀಫ್ ಸಿಕ್ಕಿದೆ. 'ಗಂಗೂಬಾಯಿ ಕಥಿಯಾವಾಡಿ' (Gangubai Kathiawadi)ಚಿತ್ರಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಲೇಖಕರಾದ ಎಸ್ ಹುಸೇನ್ ಜೈದಿ ಮತ್ತು ಜೇನ್ ಬೋರ್ಗೆಸ್ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದ ತಡೆಯಾಜ್ಞೆ ವಿಸ್ತರಿಸಿದೆ
ನ್ಯಾಯಮೂರ್ತಿ ಎಸ್.ಕೆ ಶಿಂಧೆ ಪೀಠಆಗಸ್ಟ್‌ನಲ್ಲಿ ನೀಡಿದ್ದ ಮಧ್ಯಂತರ ತಡೆಯನ್ನು ವಿಸ್ತರಿಸಿತು.ಗಂಗೂಬಾಯಿ ಕಾಠಿವಾಡಿ ಅವರ ದತ್ತುಪುತ್ರ ಎಂದು ಹೇಳಿಕೊಳ್ಳುವ ಬಾಬೂಜಿ ಷಾ ಚಿತ್ರದ ಕೆಲವು ಭಾಗಗಳು ಮಾನಹಾನಿಕರ ಮತ್ತು ಅವರ ಪ್ರತಿಷ್ಠೆಗೆ ಕಳಂಕ ತರುವಂತಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು.
ಆರಂಭದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಮ್ಮ ವಿರುದ್ಧ ಹೊರಡಿಸಿದ ಸಮನ್ಸ್‌ನ ವಿರುದ್ಧ ಭಟ್ ಮತ್ತು ಇತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮುಂಬೈನ ಕಾಮಾಟಿಪುರದ ಕತೆ ಇದರಲ್ಲಿದೆ ಎನ್ನುವುದು ಮಾಹಿತಿ.
35
ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಹಲವು ಮಾತುಗಳನ್ನು ಹೇಳಿತು. ಕಾಠಿವಾಡಿಯ ಕಾನೂನುಬದ್ಧವಾಗಿ ದತ್ತುಪುತ್ರ ಎಂದು ಸಾಬೀತುಪಡಿಸಲು ಶಾ ವಿಫಲರಾಗಿದ್ದಾರೆ ಎಂದು ಹೇಳಿತು.
45
ಇಂಥ ವಿಚಾರದಲ್ಲಿ ಅವರ ಕುಟುಂಬದವರು ಮಾತ್ರ ತಕರಾರು ಅರ್ಜಿ ಸಲ್ಲಿಸಬಹುದು. ಸಂಬಂಧವೇ ಇಲ್ಲದ ವ್ಯಕ್ತಿ ಈ ರೀತಿ ಅರ್ಜಿ ದಾಖಲಿಸಿದರೆ ಅದನ್ನು ಮನ್ನಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು.
55
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ದಾಂಪತ್ಯಕ್ಕೆ ಕಾಲಿಟ್ಟಿದ್ದರೆ. ರಣಬೀರ್ ಮತ್ತು ಆಲಿಯಾ ಯಾವಾಗ ಮದುವೆಯಾಗಲಿದ್ದಾರೆ ಎನ್ನುವುದು ಬಾಲಿವುಡ್ ನಲ್ಲಿ ಸ್ಯಕ್ಕೆ ಹರಿದಾಡುತ್ತಿರುವ ದೊಡ್ಡ ಪ್ರಶ್ನೆ '