ಬಾಲಿವುಡ್‌ ಅತಿದೊಡ್ಡ ಫ್ಲಾಪ್ ಚಿತ್ರ, ಟ್ರೋಲಾಗಿ ಬರೋಬ್ಬರಿ 225 ಕೋಟಿ ರೂ. ಕಳ್ಕೊಂಡ ಸಿನ್ಮಾ ಯಾವ್ದು?

First Published Sep 13, 2023, 9:35 AM IST

ಕೋಟಿ ಕೋಟಿ ಖರ್ಚು ಮಾಡಿದ್ರೂ, ಬಜೆಟ್‌ ಮರಳಿ ತರದ ಅದೆಷ್ಟೋ ಬಾಲಿವುಡ್ ಸಿನಿಮಾಗಳಿವೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಫ್ಲಾಪ್ ಸಿನಿಮಾ ಭರ್ತಿ 225 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ. ಆ ಸಿನಿಮಾ ಯಾವುದು?

ಬಾಲಿವುಡ್‌, ಸಿನಿಮಾ ನಿರ್ಮಾಣಕ್ಕಾಗಿ ಕೋಟಿ ಕೋಟಿ ಖರ್ಚು ಮಾಡುತ್ತೆ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷ್ಯ. ಕೆಲವೊಮ್ಮೆ ಹೀಗೆ ಕೋಟಿ ವ್ಯಯಿಸಿದ ಸಿನಿಮಾಗಳು ಸೂಪರ್ ಹಿಟ್ ಆದರೆ ಇನ್ನು ಕೆಲವೊಮ್ಮೆ ಸಂಪೂರ್ಣ ಫ್ಲಾಪ್‌ ಆಗಿ ಬಿಡುತ್ತವೆ. ಹಾಗೆ ಹಾಕಿರೋ ಬಜೆಟ್‌ ಮರಳಿ ತರದ ಅದೆಷ್ಟೋ ಬಾಲಿವುಡ್ ಸಿನಿಮಾಗಳಿವೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಫ್ಲಾಪ್ ಸಿನಿಮಾ ಭರ್ತಿ 225 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದೆ. ಆ ಸಿನಿಮಾ ಯಾವುದು?

ದುಬಾರಿ ಚಿತ್ರಗಳ ನಿರ್ಮಿಸುವುದರಿಂದ ಆಗೋ ಅಪಾಯವೆಂದರೆ ಆ ವೆಚ್ಚವನ್ನು ಮರುಪಡೆಯಲು ಇನ್ನಷ್ಟು ಕಠಿಣವಾಗುತ್ತದೆ. ಅದಕ್ಕಾಗಿಯೇ ಬ್ರಹ್ಮಾಸ್ತ್ರ ವಿಶ್ವಾದ್ಯಂತ 400 ಕೋಟಿ ಗಳಿಸಿದ ನಂತರವೂ, ಅದರ ನಿರ್ಮಾಣದ ಬಜೆಟ್ ಹೆಚ್ಚಾಗಿರುವ ಕಾರಣ ಇದನ್ನು ಹಿಟ್ ಎಂದು ಕರೆಯಲು ಹಿಂಜರಿಯುತ್ತಾರೆ. ಇದೇ ರೀತಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೋಟಿ ಕೋಟಿ ಹಣವನ್ನು ಚಿತ್ರ ನಿರ್ಮಾಣಕ್ಕೆ ಬಳಸಿ, ಚಿತ್ರ ಫ್ಲಾಪ್‌ ಆಗಿ ನಷ್ಟವನ್ನು ಅನುಭವಿಸಿದವರಿದ್ದಾರೆ.

ಭಾರತದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡ ಚಿತ್ರ ಆದಿಪುರುಷ. ಸುಮಾರು 550 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಆದಿಪುರುಷ ಭಾರತದಲ್ಲಿ 288 ಕೋಟಿ ನಿವ್ವಳ ಗಳಿಸಿತು. ಇದು ವಿಶ್ವಾದ್ಯಂತ ಸುಮಾರು 325 ಕೋಟಿ ರೂಪಾಯಿಗಳ ನಿವ್ವಳ ಲಾಭವನ್ನು ನೀಡುತ್ತದೆ, ಅಂದರೆ ಚಿತ್ರವು 225 ಕೋಟಿ ರೂಪಾಯಿಗಳ ನಿವ್ವಳ ನಷ್ಟವನ್ನು ಹೊಂದಿದೆ.

ಆದಿಪುರುಷ ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಸಿನಿಮಾವಾಗಿದೆ. ಆದರೆ ಇದರ ಪೂವರ್ ಮೇಕಿಂಗ್‌ನಿಂದಾಗಿ ತೀವ್ರವಾಗಿ ಟೀಕಿಸಲ್ಪಟ್ಟಿತು. ಚಲನಚಿತ್ರವನ್ನು ವಿಮರ್ಶಾತ್ಮಕವಾಗಿಯೂ ನಿಷೇಧಿಸಲಾಯಿತು.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ನಿರ್ಮಾಪಕರು, ನಿರ್ದೇಶಕ ಓಂ ರಾವುತ್ ಮತ್ತು ಸಂಭಾಷಣೆ ಬರೆಯುವ ಮನೋಜ್ ಮುಂತಾಶಿರ್ ವಿರುದ್ಧ ಹಲವಾರು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿವೆ. ಚಿತ್ರದಲ್ಲಿ ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಫ್ಲಾಪ್ ದಾಖಲೆಯ ನಂತರದ ಸ್ಥಾನದಲ್ಲಿ ರಾಧೆ ಶ್ಯಾಮ್‌ ಚಿತ್ರವಿದೆ. ಇದು ಸಹ ಬಾಕ್ಸ್ ಆಫೀಸ್‌ನಲ್ಲಿ ಸರಿಸುಮಾರು 170 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿತು. ಚಿತ್ರದಲ್ಲಿ ಪೂಜಾ ಹೆಗ್ಡೆ ಜೊತೆಗೆ ಪ್ರಭಾಸ್ ಕೂಡ ನಾಯಕನಾಗಿ ನಟಿಸಿದ್ದರು. ಫ್ಲಾಪ್‌ ಮೂವಿ ಲಿಸ್ಟ್‌ನ ನಂತರದ ಸ್ಥಾನದಲ್ಲಿ ಸಾಮ್ರಾಟ್ ಪೃಥ್ವಿರಾಜ್ (ರೂ. 140 ಕೋಟಿ) ಸಿನಿಮಾವಿದೆ. 

ಶಂಶೇರಾ (ರೂ. 100 ಕೋಟಿ), ತೆಲುಗು ಚಿತ್ರ ಆಚಾರ್ಯ (ರೂ. 80 ಕೋಟಿ), ಕನ್ನಡ ಚಿತ್ರ ಕಬ್ಜಾ (ರೂ. 80 ಕೋಟಿ), ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಹಣವನ್ನು ಕಳೆದುಕೊಂಡ ಇತರ ದೊಡ್ಡ ಚಿತ್ರಗಳು. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ (ರೂ. 70 ಕೋಟಿ), ಮತ್ತು ಥಗ್ಸ್ ಆಫ್ ಹಿಂದೂಸ್ತಾನ್ (ರೂ. 60 ಕೋಟಿ) ಕಳೆದುಕೊಂಡಿದೆ. 

click me!