ನಟ ವಿಂದು ದಾರಾ ಸಿಂಗ್ (Vindu Dara Singh) ಹುಟ್ಟಿದ್ದು ಮೇ 6, 1964ರಲ್ಲಿ. ಇಂದು 58ರ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ.
27
ಕುಸ್ತಿಪಟು ದಾರಾ ಸಿಂಗ್ ಮುದ್ದಿನ ಪುತ್ರ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಿ-ಟೌನ್‌ನಲ್ಲಿ ಡಿಫರೆಂಟ್ ನಟನಾಗಿ ಗುರುತಿಸಿಕೊಂಡರು. ಆದರೆ ಸಿನಿಮಾಗಿಂತ ಹೆಚ್ಚಿಗೆ ಪರ್ಸನಲ್ ಲೈಫ್ ಬ್ರೇಕಿಂಗ್ ನ್ಯೂಸ್ ನೀಡಿತ್ತು
37
ಫರಾ ನಾಜ್‌ನ ಪ್ರೀತಿಸಿದ ವಿಂದು ಹಲವು ವರ್ಷಗಳ ಕಾಲ ಲಿವಿಂಗ್ ಟುಗೆದರ್‌ನಲ್ಲಿದ್ದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು, ಆದರೆ ವರ್ಕೌಟ್ ಆಗದ ಕಾರಣ ಡಿವೋರ್ಸ್ ನೀಡಿ ಎರಡನೇ ಮದುವೆ ಮಾಡಿಕೊಂಡರು.
47
ನಟಿ ತಬು (Tabu) ಸಹೋದರಿ ಫರಾ ನಾಜ್‌ರನ್ನು ವಿಂದು 1996ರಲ್ಲಿ ಮದುವೆಯಾದರು. ಇಬ್ಬರಿಗೂ ಫಾತೇಹಿ ಎಂದ ಮಗನಿದ್ದಾನೆ. 6 ವರ್ಷಗಳ ನಂತರ ಇಬ್ಬರು ಡಿವೋರ್ಸ್ ಪಡೆದುಕೊಳ್ಳುತ್ತಾರೆ.
57
' ಜೀವನದ ಕೆಲವೊಂದು ಸಹಿ ಸತ್ಯಗಳು ತಡವಾಗಿ ಬೆಳಕಿಗೆ ಬರುತ್ತದೆ. ಆದರೆ ವಿಧಿ ಬೇರೆ ಬರೆದಿರುವ ಕಾರಣ ನಾನು ಹಾಗೆ ಜೀವನ ಸಾಗಿಸಬೇಕು' ಎಂದು ವಿಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದರು.
67
ರಷ್ಯ ಮಾಡೆಲ್ ದಿನಾ ಉಮಾರೋವರ್ ಜೊತೆ ವಿಂದು ಎರಡನೇ ಮದುವೆ ಮಾಡಿಕೊಳ್ಳುತ್ತಾರೆ. 'ಎರಡನೇ ಮದುವೆಯಲ್ಲೂ ಸಣ್ಣ ಪುಟ್ಟ ಜಗಳ ಇರುತ್ತದೆ ಆದರೆ ನಾವು ಬೇಗ ಸರಿ ಮಾಡಿಕೊಳ್ಳುತ್ತೀವಿ' ಎಂದಿದ್ದಾರೆ.
77
ರಾಮಾಯಣ ಧಾರಾವಾಹಿಯಲ್ಲಿ ಹನುಮಾನ್ ಪಾತ್ರದಲ್ಲಿ ವಿಂದು ಕಾಣಿಸಿಕೊಂಡ ನಂತರ ಅನೇಕರು ಇದೇ ರೀತಿ ಪಾತ್ರಗಳನ್ನು ನೀಡಲು ಮುಂದಾಗುತ್ತಿದ್ದರಂತೆ.