IND vs PAK ಕಳೆದುಹೋದ ಐಫೋನ್ ಹುಡುಕಿಕೊಟ್ಟವರಿಗೆ ಬಹುಮಾನ ಘೋಷಿಸಿದ ಊರ್ವಶಿ!

First Published | Oct 19, 2023, 2:09 PM IST

ಐಸಿಸಿ ವಿಶ್ವಕಪ್ ಟೂರ್ನಿಯ ಭಾರತ ಹಾಗೂ ಪಾಕಿಸ್ತಾನ ಪಂದ್ಯ ವೀಕ್ಷಿಸಲು ಅಹಮ್ಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ತೆರಳಿದ್ದ ಬಾಲಿವುಡ್ ನಟಿ ಊರ್ವಶಿ ರೌಟೆಲಾ ತಮ್ಮ 24 ಕ್ಯಾರೆಟ್ ಗೋಲ್ಡ್ ಐಫೋನ್ ಕಳೆದುಕೊಂಡಿದ್ದರು. ಇದೀಗ ಐಫೋನ್ ಹುಡುಕಿಕೊಟ್ಟವರಿಗೆ ಊರ್ವಶಿ ಭರ್ಜರರಿ ಬಹುಮಾನ ಘೋಷಿಸಿದ್ದಾರೆ.

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಭಾರತ ಭರ್ಜರಿ ಗೆಲವನ್ನು ದೇಶಾದ್ಯಂತ ಸಂಭ್ರಮಿಸಲಾಗಿತ್ತು. ಆದರೆ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಸಂಭ್ರಮದ ಜೊತೆ ಬೇಸರವೂ ಆಗಿತ್ತು. 
 

ಕಾರಣ ರೌಟೆಲಾ ತನ್ನ ದುಬಾರಿ 24 ಕ್ಯಾರೆಟ್ ಗೋಲ್ಡ್ ಐಫೋನ್‌ ಕಳೆದುಕೊಂಡಿದ್ದರು. ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಚಾನಕ್ಕಾಗಿ ಫೋನ್ ಮಿಸ್ ಆಗಿತ್ತು.

Tap to resize

ಪಂದ್ಯದ ನಡುವೆ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದ ಊರ್ವಶಿ, ಪಂದ್ಯ ಮುಗಿದ ಬೆನ್ನಲ್ಲೇ ತಮ್ಮ ಫೋನ್ ಕಳೆದುಹೋಗಿರುವ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. 

ಇದೀಗ ಊರ್ವಶಿ ರೌಟೆಲಾ ತಮ್ಮ ಫೋನ್ ಕಳೆದುಹೋಗಿರುವ ಕುರಿತು ದೂರು ದಾಖಲಿಸಿದ್ದಾರೆ. ದೂರಿನ ಪ್ರತಿಯನ್ನೂ ಊರ್ವಶಿ ರೌಟೆಲಾ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.

ಇದೀಗ ಊರ್ವಶಿ ತಮ್ಮ ಫೋನ್‌ಗಾಗಿ ಪರಿತಪಿಸುತ್ತಿದ್ದಾರೆ. ಆ್ಯಡ್ರಾಂಯ್ಡ್ ಫೋನ್ ಬಳಕೆ ಮಾಡುತ್ತಿರುವ ಊರ್ವಶಿ, ಹುಡುಕಿಕೊಟ್ಟವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 

ತಮ್ಮ ಫೋನ್ ಕಳೆದುಹೋದ ಸ್ಥಳ, ಸೇರಿದಂತೆ ಇತರ ಮಾಹಿತಿಗಳನ್ನು ಊರ್ವಶಿ ಹಂಚಿಕೊಂಡಿದ್ದಾರೆ. ಪೊಲೀಸ್ ದೂರು ದಾಖಲಿಸಿದ ಬಳಿಕ ಇದೀಗ ಅಭಿಮಾನಿಗಳ ಬಳಿ ಫೋನ್ ಹುಡುಕಿ ಕೊಡಲು ಮನವಿ ಮಾಡಿದ್ದಾರೆ.
 

ಇದೇ ವೇಳೆ ಊರ್ವಶಿ ರೌಟೆಲಾಗೆ ಇಮೇಲ್ ಒಂದು ಬಂದಿದೆ. ನಿಮ್ಮ ಕಳೆದುಹೋದ ಫೋನ್ ನನಗೆ ಸಿಕ್ಕಿದೆ. ಈ ಫೋನ್ ನಿಮಗೆ ಮರಳಿಬೇಕಾದರೆ ನನ್ನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಸಹೋದರನಿಗೆ ನೆರವು ನೀಡಿ ಎಂದು ಇಮೇಲ್‌ನಲ್ಲಿ ಹೇಳಲಾಗಿದೆ.

ಈ ಇಮೇಲ್‌ಗೆ ಥಂಬ್ಸ್ ಅಪ್ ಇಮೋಜಿ ಮೂಲಕ ಊರ್ವಶಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಊರ್ವಶಿಗೆ ತಮ್ಮ 25 ಕ್ಯಾರೆಟ್ ಗೋಲ್ಡ್ ಐಫೋನ್ ಮರಳಿ ಸಿಗುವ ಸಣ್ಣ ಆಸೆಯೊಂದು ಚಿಗುರೊಡೆದಿದೆ.

Latest Videos

click me!