ಚಿನ್ನ ಮತ್ತು ವಜ್ರದಿಂದ ಮಾಡಿರುವ ಒಡುಪಿನಲ್ಲಿ ಕನ್ನಡದ ನಟಿ; ಬೆಲೆ ಎಷ್ಟು?

First Published | Jan 31, 2022, 5:12 PM IST

ಊರ್ವಶಿ ರೌಟೇಲಾ ದುಬಾರಿ ಉಡುಪು ಧರಿಸಿದ್ದರೂ, ಕಾಲೆಳೆಯುವುದು ಬಿಟ್ಟಿಲ್ಲ ನೆಟ್ಟಿಗರು. ಮೈ ತುಂಬಾ ಬಟ್ಟೆ ಬರ್ತಿತ್ತು ಅಂದಿದ್ದಾರೆ......

'ಐರಾವತ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇದೀಗ ಹೊಸ ಫ್ಯಾಷನ್ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಕಣ್ಣಿಗೆ ಕುಕ್ಕುವ ಗೋಲ್ಡನ್ ಬಣ್ಣದ ಉಡುಪು ಧರಿಸಿ ಇದೀಗ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ.

ದುಬೈನಲ್ಲಿ ನಡೆಯುವ ಅರಬ್ ಫ್ಯಾಷನ್ ವೀಕ್ ಶೋ ಕಾರ್ಯಕ್ರಮದಲ್ಲಿ ಶೋ ಸ್ಟಾಪರ್ ಆಗಿ ಊರ್ವಶಿ ರೌಟೆಲ್ಲಾ ಭಾಗವಹಹಿಸಿದ್ದರು. ವೇದಿಕೆ ಮೇಲೆ ಊರ್ವಶಿ ಬರುತ್ತಿದ್ದಂತೆ ಎಲ್ಲರ ಕಣ್ಣು ಕುಕ್ಕಿದೆ. 

Tap to resize

ಚಿನ್ನ ಮತ್ತು ವಜ್ರಗಳು ತುಂಬಿರುವ ಗೋಲ್ಡನ್ ಬಣ್ಣದ ಸಿಂಗಲ್ ಪೀಸ್‌ ಡ್ರೆಸ್‌ ಧಿರಿಸದ್ದಾರೆ. ನೋಡಲು ವಿಚಿತ್ರವಾಗಿರುವ ಈ ಉಡುಪಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಹೌದು! ಈ ಬಟ್ಟೆಯ ಬೆಲೆ ಬರೋಬ್ಬರಿ 40 ಕೋಟಿ ರುಪಾಯಿಗಳು ಎನ್ನಲಾಗಿದೆ. ಈ ಉಡುಪನ್ನು ಫುರ್ನೊ ಒನ್‌ ಅಮಾಟೋ ಡಿಸೈನ್ ಮಾಡಿದ್ದಾರೆ. 

ಊರ್ವಶಿ ಮುಡಿಯಿಂದ ಅಡಿವರೆಗೂ ಶುದ್ಧ ಚಿನ್ನವನ್ನು ಬಳಸಿ ಈ ಬಟ್ಟೆ ಮಾಡಲಾಗಿದೆ ಎಂದಿದ್ದಾರೆ. ಕಿರೀಟ ಕೂಡ ಚಿನ್ನದ್ದು ಎನ್ನಲಾಗಿದೆ. ಈ ವಿಶೇಷ ಲುಕ್‌ನ ಫೋಟೋ ಮತ್ತು ವಿಡಿಯೋಗಳನ್ನು ಊರ್ವಶಿ ಹಂಚಿಕೊಂಡಿದ್ದಾರೆ.

 ಊರ್ವಶಿ ಇಷ್ಟು ದುಬಾರಿ ಉಡುಪು ಧರಿಸುತ್ತಿರುವುದು ಇದೇನೂ ಮೊದಲಲ್ಲ,  ಅರಬ್‌ನ ಮೊಹಮ್ಮದ್ ರಮಾದಾನ್‌ ಮಾಡಿದ ವರ್ಸೆಸ್ ಬೇಬಿ ಹಾಡಿಗೆ ಹೆಜ್ಜೆ ಹಾಕಿದ್ದು, ಅದಕ್ಕೆ 15 ಕೋಟಿ ರೂಪಾಯಿ ಬೆಲೆಯ ಉಡುಗೆ ತೊಟ್ಟಿದ್ದರು.

ಮಾಡ್ರನ್ ಬಟ್ಟೆ ಮಾತ್ರ ಇಷ್ಟು ಹಣ ಕೊಡುತ್ತಾರೆ ಅಂದುಕೊಳ್ಳಬೇಡಿ,  58ಲಕ್ಷ ಮೌಲ್ಯದ ಪಟೋಲಾ ಸೀರೆಯನ್ನು ಧರಿಸಿದ್ದರು. ಈ ಸೀರೆ 300 ವರ್ಷವಾದರೂ ಹಾಳಾಗುವುದಿಲ್ಲ.

Latest Videos

click me!