ಮುಂಬೈ(ಸೆ. 30) ಬಾಲಿವುಡ್ ಬಾದ್ ಷಾ, ಬಿಗ್ ಬಿ ಅಮಿತಾಭ್ ಬಚ್ಚನ್ ದೊಡ್ಡ ನಿರ್ಧಾರವೊಂದನ್ನು ಗತೆಗೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಮೂಲಕ ಘೋಷಣೆ ಮಾಡಿದ್ದಾರೆ. ತಮ್ಮ ಅಂಗಾಂಗ ದಾನ ಮಾಡುವುದಾಗಿ ಅಮಿತಾಭ್ ಬಚ್ಚನ್ ಘೋಷಿಸಿದ್ದಾರೆ. ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ... ಈ ಮೂಲಕ ಅಂಗಾಂಗ ದಾನ ಘೋಷಣೆ ಮಾಡುತ್ತಿದ್ದೇನೆ ಎಂದು ಟ್ವಿಟರ್ ಮೂಲಕ ತಿಳಿಸಿದ್ದಾರೆ. ತಮ್ಮದೇ ಪೋಟೋ ಹಾಕಿರುವ ಬಚ್ಚನ್ ಕ್ರಮಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ. ಈ ಮೂಲಕ ಅಂಗಾಗ ದಾನದ ಪ್ರತಿಜ್ಞೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕೊರೋನಾ ಸೋಂಕಿಗೂ ತುತ್ತಾಗಿದ್ದ ಬಿಗ್ ಬಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಂಡಿದ್ದರು. ಕೌನ್ ಬನೇಗಾ ಕರೋಡ್ ಪತಿ ಮೂಲಕ ಮತ್ತೆ ಮನೆ ಮನೆಗೆ ಪ್ರವೇಶ ಪಡೆದಿದ್ದಾರೆ. ಹಸಿರು ರಿಬ್ಬನ್ ತೊಟ್ಟು ವಿಚಾರವನ್ನು ಜಗತ್ತಿಗೆ ಸಾರಿದ್ದಾರೆ . Big B Amitabh Bachchan has revealed that he has pledged to donate his organs. ಅಂಗಾಂಗ ದಾನ್ ಮಾಡ್ತೇನೆ ಎಂದು ಅಮಿತಾಬ್ ಬಚ್ಚನ್ ಘೋಷಣೆ