ತಮ್ಮ ಜೀವನದ ಏಕೈಕ ರಿಲೆಷನ್‌ಶಿಪ್‌ ಬಗ್ಗೆ ಬಹಿರಂಗಪಡಿಸಿದ ಸಲ್ಮಾನ್‌ ಖಾನ್‌!

Suvarna News   | Asianet News
Published : Sep 26, 2021, 03:58 PM IST

ಸಲ್ಮಾನ್ ಖಾನ್ (Salman Khan) ಅವರ ಅತ್ಯಂತ ವಿವಾದಾತ್ಮಕ ಟಿವಿ ಶೋ ಬಿಗ್ ಬಾಸ್‌  15ರ ಸೀಸನ್ ಅಕ್ಟೋಬರ್ 2 ರಿಂದ ಆರಂಭವಾಗಲಿದೆ. ಈ ಬಾರಿ ಬಿಗ್ ಬಾಸ್ ಅನ್ನು ಜಂಗಲ್ ಥೀಮ್‌ನಲ್ಲಿ ಇರಿಸಲಾಗಿದೆ ಮತ್ತು  ಪೆಂಚ್ ನ್ಯಾಷನಲ್ ಪಾರ್ಕ್‌ನಲ್ಲಿ ಕಾರ್ಯಕ್ರಮದ ಪ್ರಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿದ. ಸಲ್ಮಾನ್ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಾಸ್ತವವಾಗಿ, ಈ ದಿನಗಳಲ್ಲಿ ಅವರು ಆಸ್ಟ್ರಿಯಾದಲ್ಲಿ ನಡೆಯುತ್ತಿರುವ ತನ್ನ ಟೈಗರ್ 3 ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ, ಅವರು ಸಂದರ್ಶನದಲ್ಲಿ ಅನೇಕ ವಿಷಯಗಳನ್ನು ಮಾತನಾಡಿದರು ಮತ್ತು ಅವರ ಸಂಬಂಧದ ಬಗ್ಗೆ ಮತ್ತು ಇನ್ನೂ ಮದುವೆಯಾಗದಿರುವ ಬಗ್ಗೆಯೂ ಬಹಿರಂಗಪಡಿಸಿದರು. ವಿವರಕ್ಕಾಗಿ ಕೆಳಗೆ ಓದಿ.

PREV
17
ತಮ್ಮ ಜೀವನದ ಏಕೈಕ ರಿಲೆಷನ್‌ಶಿಪ್‌ ಬಗ್ಗೆ  ಬಹಿರಂಗಪಡಿಸಿದ ಸಲ್ಮಾನ್‌ ಖಾನ್‌!

ಬಾಲಿವುಡ್‌ ನಟ ಸಲ್ಮಾನ್ ಖಾನ್ ತಮ್ಮ 55 ನೇ ವಯಸ್ಸಿನಲ್ಲಿಯೂ ಮದುವೆಯಾಗದೆ ಉಳಿದಿದ್ದಾರೆ. ಅವರ ಮದುವೆಗಾಗಿ ಅಭಿಮಾನಿಗಳು ಇನ್ನೂ ಕಾಯುತ್ತಿದ್ದಾರೆ. ಹಲವು ನಟಿಯರ ಜೊತೆ ಸಲ್ಮಾನ್‌ನ ಹೆಸರು ಕೇಳಿಬಂದಿದೆ ಆದರೂ  ಅವರ ಯಾವುದೇ ಸಂಬಂಧ ಮದುವೆಯ ವರೆಗೆ ಉಳಿಯಲಿಲ್ಲ. 

 

https://kannada.asianetnews.com/sandalwood/salman-khan-full-marks-for-kiccha-sudeep-vikrant-rona-mah-qyx95k

27

ಈಗ ನಟ ತನ್ನ ಜೀವನದ ಏಕೈಕ ಸಂಬಂಧದ ಬಗ್ಗೆ ಮಾತನಾಡುತ್ತಿದ್ದಾರೆ.  ಸಂದರ್ಶನದಲ್ಲಿ ತನ್ನ ಸಂಬಂಧದ ಬಗ್ಗೆ ಮಾತನಾಡುತ್ತಾ, 'ನನ್ನ ಜೀವನದಲ್ಲಿ ಬಿಗ್ ಬಾಸ್ ಒಂದೇ ಒಂದು ಸಂಬಂಧ, ಅದು ಇಷ್ಟು ದಿನ ನಡೆದಿದೆ' ಎಂದು  ಸಲ್ಮಾನ್ ಖಾನ್ ಹೇಳಿದರು.

https://kannada.asianetnews.com/cine-world/bollywood-actor-salman-khan-to-get-350-crore-rs-remuneration-for-biggboss-15-dpl-qzmnvr
 

37

ಬಿಗ್ ಬಾಸ್ ಮತ್ತು ನನ್ನ ನಡುವೆ ನಮ್ಮಿಬ್ಬರಿಗೂ ಮದುವೆಯಾಗಿಲ್ಲ ಎಂಬ ಸಾಮ್ಯತೆ ಇದೆ ಎಂದ ಅವರು, ಯಾರ ಹಸ್ತಕ್ಷೇಪವೂ ಇಲ್ಲದೆ ನಾವು ಇಂದಿಗೂ ನಮ್ಮನ್ನು ಬಾಸ್ ಎಂದು ಪರಿಗಣಿಸಬಹುದು ಎಂದು ಇಂಟರ್‌ವ್ಯೂವ್‌ನಲ್ಲಿ ಸಲ್ಮಾನ್‌ ಹೇಳಿದರು.

https://kannada.asianetnews.com/gallery/cine-world/salman-khan-and-katrina-kaif-meet-turkish-minister-spotted-at-lunch-after-tiger-3-shoot-mah-qyx39j

47

ಸಂದರ್ಶನದ ಸಮಯದಲ್ಲಿ, ಅವರು ತಮ್ಮ ಫೀಸ್‌  ಬಗ್ಗೆ ಮಾತನಾಡಿದರು.'ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಮತ್ತು ಅವರು ನನ್ನ ಶುಲ್ಕವನ್ನು ಹೆಚ್ಚಿಸಲು ಯೋಚಿಸಬೇಕು  ಎಂದು ನಾನು ಯಾವಾಗಲೂ ತಯಾರಕರಿಗೆ ಹೇಳುತ್ತಲೇ ಇರುತ್ತೇನೆ. ಆದರೆ ಅವರು ನನ್ನ ಮಾತನ್ನು ಕೇಳುವುದಿಲ್ಲ ಅವರು ತಮಾಷೆಯಾಗಿ ಹೇಳಿದರು.

https://kannada.asianetnews.com/video/cine-world/cisf-officer-stops-salman-khan-at-airport-vcs-qy8jve

57

ಚಾನೆಲ್‌ನವರು ನನ್ನ ಫೀಸ್‌ ಹೆಚ್ಚಿಸುವುದಾಗಿ ಹೇಳಿದಾಗ, ಬೇಡ ಇರಲಿ ಪರವಾಗಿಲ್ಲ ಎಂದು ನಾನು ಹೇಳುವ ಒಂದು ದಿನ ಬರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಆದರೆ ಇದು ನಿಜವಾಗಿಯೂ ಸಾಧ್ಯ ಎಂದು ನೀವು ಭಾವಿಸುತ್ತೀರಾ' ಎಂದು ಸಲ್ಮಾನ್ ಖಾನ್ ಮತ್ತಷ್ಟು ತಮಾಷೆಯಾಗಿ ಹೇಳಿದರು.

https://kannada.asianetnews.com/cine-world/chandigarh-police-summon-salman-khan-sister-alvira-and-7-others-in-alleged-fraud-case-dpl-qvylq1  

67

ಬಿಗ್ ಬಾಸ್ 15 ರ ಬಗ್ಗೆ ಮಾತನಾಡುತ್ತಾ, 'ಈ ಬಾರಿ ಸ್ಪರ್ಧಿಗಳಿಗೆ ಶೋನಲ್ಲಿ ಸರ್ವೈವಲ್‌ ಕಿಟ್ ಮಾತ್ರ ಸಿಗುತ್ತದೆ' ಎಂದು ಸಲ್ಮಾನ್ ಹೇಳಿದರು. ಇಲ್ಲಿಯವರೆಗೆ ಬಿಗ್ ಬಾಸ್‌ನಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂದು ಎಲ್ಲ ಸ್ಪರ್ಧಿಗಳ ಹೆಸರನ್ನು ಪ್ರಕಟಿಸಿಲ್ಲ .

77

ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದೇವೋಲೀನಾ ಭಟ್ಟಾಚಾರ್ಯ ಮತ್ತು ಆರತಿ ಸಿಂಗ್ 4 ಸದಸ್ಯರ ಹೆಸರನ್ನು ಬಹಿರಂಗಪಡಿಸಿದರು. ಈ 4 ಜನರು ಟಿವಿ ನಟಿ ಡೊನಾಲ್ ಬಿಶ್ತ್, ಬಿಗ್ ಬಾಸ್ 13 ರ ಮೊದಲ ರನ್ನರ್ ಅಪ್ ಅಸಿಮ್ ರಿಯಾಜ್ ಅವರ ಸಹೋದರ ಉಮರ್ ರಿಯಾಜ್, ಶಮಿತಾ ಶೆಟ್ಟಿ ಮತ್ತು ನೃತ್ಯ ನಿರ್ದೇಶಕ ನಿಶಾಂತ್ ಭಟ್.

click me!

Recommended Stories