ಸಮಂತಾ ಪತಿ ನಾಗ ಚೈತನ್ಯಗೆ ಸ್ವೀಟ್‌ ಹಾರ್ಟ್‌ ಎಂದ ಸಾಯಿ ಪಲ್ಲವಿ!

Suvarna News   | Asianet News
Published : Sep 25, 2021, 02:39 PM IST

ಕಳೆದ ಕೆಲವು ವಾರಗಳಿಂದ, ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ವಿಚ್ಛೇದನ ವದಂತಿಗಳು ಸುದ್ದಿಯಲ್ಲಿವೆ. ಇದರ ನಡುವೆ ನಾಗ ಚೈತನ್ಯರ ಲವ್ ಸ್ಟೋರಿ ಕೋಸ್ಟಾರ್‌ ಸಾಯಿ ಪಲ್ಲವಿ ನಟನನ್ನು ಸ್ವೀಟ್‌ ಹಾರ್ಟ್‌ ಎಂದು ಕರೆದಿದ್ದಾರೆ ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಹೇಗೆ ಎಂಜಾಯ್‌ ಮಾಡಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ ಸಾಯಿ ಪಲ್ಲವಿ. ಇಲ್ಲಿದೆ ವಿವರ.  

PREV
18
ಸಮಂತಾ ಪತಿ ನಾಗ ಚೈತನ್ಯಗೆ ಸ್ವೀಟ್‌ ಹಾರ್ಟ್‌ ಎಂದ ಸಾಯಿ ಪಲ್ಲವಿ!
Love Story

ಪ್ರಸ್ತುತ ಲವ್‌ ಸ್ಟೋರಿ (Love Story) ಸಿನಿಮಾದ ನಟರಾದ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮೋಡಗಳಲ್ಲಿ ತೇಲುತ್ತಿದ್ದಾರೆ. ಅವರ ಸಿನಿಮಾ ಉತ್ತಮ ವಿಮರ್ಶೆಗಳೊಂದಿಗೆ ಬಿಡುಗಡೆಯಾಗಿದೆ. ಈ ಜೋಡಿಯ ಅನ್‌ಸ್ಕ್ರೀನ್‌ ಕೆಮಿಸ್ಟ್ರಿ (Onscreen Chemistry) ಮತ್ತು ಎಮೋಷನಲ್‌ ಕನೆಕ್ಷನ್‌ (Emotional Connection) ಅನ್ನು ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ.
 

 

28

ಸಿನಿಮಾದಲ್ಲಿ, ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಇಬ್ಬರೂ ವಿಭಿನ್ನ ಜಾತಿಗೆ ಸೇರಿದವರು ಮತ್ತು ಇಬ್ಬರೂ ಪ್ರೀತಿ (Love)ಯಲ್ಲಿ ಬೀಳುತ್ತಾರೆ. ನಂತರ ಸಿನಿಮಾದಲ್ಲಿ ಈ ಜೋಡಿ ಲೈಫ್‌ನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸುತ್ತದೆ. ಕೆಲವು ದಿನಗಳ ಹಿಂದೆ, ಸಿನಿಮಾದ ಪ್ರಮೋಷನ್‌ ಇವೆಂಟ್‌ನಲ್ಲಿ ನಾಗ ಚೈತನ್ಯ ಮತ್ತು ಲವ್ ಸ್ಟೋರಿ ತಂಡದ ಸದಸ್ಯರನ್ನು ಸಪೋರ್ಟ್‌ ಮಾಡಲು ಆಮೀರ್ ಖಾನ್ ಹೈದರಾಬಾದ್‌ಗೆ (Hyderabad) ಬಂದಿದ್ದರು.  

38

ನಾಗ ಚೈತನ್ಯ ಅವರ  ಅಭಿಮಾನಿಗಳು (Fans) ಸಾಯಿ ಪಲ್ಲವಿಯೊಂದಿಗೆ ಅವರ ಜೋಡಿಯನ್ನು ಸಕ್ಕತ್‌ ಇಷ್ಷಪಟ್ಟಿದ್ದಾರೆ. ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಜೀವನದಲ್ಲಿ ಎಲ್ಲ ಸರಿಯಿಲ್ಲದಿರುವ ಸುದ್ದಿಯ ನಂತರ ನಾಗ ಮತ್ತು ಪಲ್ಲವಿಯನ್ನು ಮುಂಬರುವ ಹಿಟ್ ಜೋಡಿ ಎಂದು ಹೊಗಳಲು ಪ್ರಾರಂಭಿಸಿದ್ದಾರೆ, 

48

 ಒಂದು ಮನರಂಜನಾ ವೆಬ್ ಪೋರ್ಟಲ್‌ಗೆ ನೀಡಿದ ಸಂದರ್ಶನದಲ್ಲಿ, ಸಾಯಿ ಪಲ್ಲವಿ ತನ್ನ ಸಹನಟ ನಾಗ ಚೈತನ್ಯ  ಅವರನ್ನು ಸ್ವೀಟ್‌ ಹಾರ್ಟ್ ಎಂದು ಕರೆದರು ಮತ್ತು  ಡ್ಯಾನ್ಸ್‌ ಮೂವ್‌ಗಳನ್ನು ಸರಿಯಾಗಿ ಪಡೆಯಲು ನಾಗ ಹೇಗೆ ಹಾರ್ಡ್‌ ವರ್ಕ್‌ ಮಾಡಿದ್ದರು ಎಂದೂ ಸಾಯಿ ಪಲ್ಲವಿ ಹೇಳಿದರು. 

58

ಅಭಿಮಾನಿಗಳು ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅವರ  ಡ್ಯಾನ್ಸ್‌ ಮೂವ್ಸ್ ಮತ್ತು ಜೊತೆಯಾಗಿರುವ ಸೀನ್ಸ್‌ಗೆ ಫುಲ್‌ ಫಿದಾ ಆಗಿದ್ದಾರೆ. ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ನಾಗ ತನಗೆ ಸಂಪೂರ್ಣವಾಗಿ ಮ್ಯಾಚ್‌ ಆಗಿದ್ದಾರೆ  ಮತ್ತು ಈ ಸಿನಿಮಾದಲ್ಲಿ ಇಬ್ಬರೂ ಅದ್ಭುತ ಕೆಲಸ ಮಾಡಿದ್ದೇವೆ ಎಂದು ಸಾಯಿ ಹೇಳಿದರು. 

68

ಲವ್ ಸ್ಟೋರಿ ಸಿನಿಮಾವನ್ನು ಶೇಖರ್ ಕಮ್ಮುಲ ಅವರು ಬರೆದು ನಿರ್ದೇಶಿಸಿದ್ದಾರೆ. ಈಗಗಾಲೇ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಓಡುತ್ತಿದೆ. ಸಿನಿಮಾದ ಪ್ರಮೋಷನ್‌ಗಾಗಿ ಆಮೀರ್ ಖಾನ್‌ ಹೈದರಾಬಾದ್‌ಗೆ ಬಂದಾಗ, ನಾಗ ಚೈತನ್ಯ ಸರಳತೆಯನ್ನು ಹಾಡಿ ಹೊಗಳಿದ್ದರು.

78

'ಈ ಮನುಷ್ಯ (ನಾಗ) ನೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಯಿತು, ಇವರು ಕೇವಲ ಒಬ್ಬ Actor ಮತ್ತು ಕ್ರಿಯೇಟರ್‌ ಮಾತ್ರವಲ್ಲ. ತನ್ನ  ಹೃದಯದಿಂದ ಯಾರ ಹೃದಯವನ್ನಾದರೂ ಸ್ಪರ್ಶಿಸುವ ಸ್ವಭಾವ ಹೊಂದಿರುವ   ಮನುಷ್ಯ' ಎಂದು ಆಮೀರ್‌ ಖಾನ್ (Aamir Khan) ಹೇಳಿದ್ದಾರೆ.

88

ಕರೀನಾ ಕಪೂರ್ ಹಾಗೂ ಆಮೀರ್ ಖಾನ್ ಅವರ ಮುಂಬರುವ ಚಿತ್ರ ಲಾಲ್ ಸಿಂಗ್ ಚಡ್ಡಾದಲ್ಲಿ ನಾಗ ಚೈತನ್ಯ ಕಾಣಿಸಿಕೊಳ್ಳಲಿದ್ದಾರೆ. ಇದು ಬಾಲಿವುಡ್‌ಗೆ ನಾಗ ಅವರ ಡೆಬ್ಯೂ ಫಿಲ್ಮ್‌. ತನ್ನ ಕಷ್ಟದ ಸಮಯದಲ್ಲಿ ಅಮೀರ್ ಖಾನ್ ತನ್ನ ಬೆಂಬಲವನ್ನು ಹೇಗೆ  ನೀಡಿದ್ದಾರೆ ಎಂಬುದನ್ನು ನಾಗ ಒಮ್ಮೆ ಬಹಿರಂಗಪಡಿಸಿದ್ದಾರೆ.
 

click me!

Recommended Stories