ಭಾರತದಲ್ಲಿ ಸೂಪರ್‌ಹಿಟ್ ಆದ್ರೂ ಪಾಕ್‌ನಲ್ಲಿ ಬ್ಯಾನ್ ಆದ ಸಿನಿಮಾಗಳಿವು

First Published Aug 31, 2023, 7:38 PM IST

ಸಿನಿಮಾಗಳಿಗೆ ಭಾಷೆಯ ಹಂಗಿಲ್ಲ. ಸ್ಟೋರಿ ಚೆನ್ನಾಗಿದ್ದರೆ ರಾಜ್ಯ, ದೇಶಗಳ ಗಡಿಯನ್ನೂ ಮೀರಿ ಮೂವಿ ಜನಮೆಚ್ಚುಗೆ ಪಡೆಯುತ್ತದೆ. ಭಾರತದ ಸಿನಿಮಾಗಳಿಗೆ ಪಾಕಿಸ್ತಾನದಲ್ಲೂ ಅಭಿಮಾನಿಗಳಿದ್ದಾರೆ. ಹೀಗಿದ್ದೂ ಕೆಲವೊಂದು ಸಿನಿಮಾಗಳು ಪಾಕ್‌ನಲ್ಲಿ ಬ್ಯಾನ್‌ ಆಗಿವೆ. ಅವು ಯಾವುದು?

ಗದರ್
ಭಾರತೀಯ ಸಿನಿರಂಗದಲ್ಲಿ ದಾಖಲೆ ಬರೆದ ಸಿನಿಮಾಗಳಲ್ಲೊಂದು ಗದರ್. ಸನ್ನಿ ಡಿಯೋಲ್, ಅಮೀಶಾ ಪಟೇಲ್ ಅಭಿನಯದ ಈ ಚಿತ್ರ ಎಲ್ಲರ ಮನಗೆದ್ದಿದೆ. 2001ರಲ್ಲಿ ಬಂದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. ಆದರೆ ಇಂಡೋ-ಪಾಕ್‌ ಯುದ್ಧ ಹಾಗೂ ಹಿಂದೂ-ಮುಸ್ಲಿಂ ಜೋಡಿಯ ಪ್ರೇಮಕಥೆಯನ್ನು ಇರುವ ಕಾರಣ ಇದನ್ನು ಪಾಕ್‌ನಲ್ಲಿ ಬ್ಯಾನ್ ಮಾಡಲಾಗಿದೆ.

ರಾಝಿ
ಭಾರತೀಯ ಸೇನೆಯ ಸೀಕ್ರೆಟ್ ಮಿಷನ್ ಕಥೆಯನ್ನು ಒಳಗೊಂಡಿರುವ ಸಿನಿಮಾ ರಾಝಿ. ಆಲಿಯಾ ಭಟ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಭಾರತದ 'ರಾ' ಏಜೆಂಟ್ ಯುವತಿಯೊಬ್ಬಳು ಪಾಕಿಸ್ತಾನದ ವ್ಯಕ್ತಿಯನ್ನು ಮದ್ವೆಯಾಗುವ ಮೂಲಕ ದೇಶದ ಪರವಾಗಿ ಕೆಲಸ ಮಾಡುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಮೂವಿಯನ್ನು ಪಾಕಿಸ್ತಾನದಲ್ಲಿ ಪ್ರದರ್ಶಿಸಲು ಅನುಮತಿಯಿಲ್ಲ.
 

Latest Videos


ಫ್ಯಾಂಟಮ್‌
ಉಗ್ರ ದಾಳಿಯ ಕಥಾಹಂದರವನ್ನು ಒಳಗೊಂಡಿರುವ ಸಿನಿಮಾ ಫ್ಯಾಂಟಮ್‌. ಸೈಫ್ ಆಲಿಖಾನ್, ಕತ್ರಿನಾ ಕೈಫ್ ಅಭಿನಯದ ಈ ಚಲನಚಿತ್ರ ಪಾಕ್‌ನಲ್ಲಿ ಬ್ಯಾನ್ ಮಾಡಲಾಗಿದೆ. ಈ ಚಿತ್ರದಲ್ಲಿ 26/11 ಉಗ್ರ ಕೃತ್ಯದ ಮಾಸ್ಟರ್ ಮೈಂಡ್ ಹಫೀಸ್ ಸಯೀದ್ ಅವರನ್ನು ಸಿನಿಮಾದ ಕಥೆಯಲ್ಲಿ ನೆಗೆಟಿವ್ ಶೇಡ್‌ನಲ್ಲಿ ತೋರಿಸಲಾಗಿದೆ. ಈ ಕಾರಣದಿಂದ ಪಾಕ್ ಸೆನ್ಸಾರ್ ಬೋರ್ಡ್ ಇದರ ಮೇಲೆ ಬ್ಯಾನ್ ವಿಧಿಸಿದೆ. 

ಪ್ಯಾಡ್‌ ಮ್ಯಾನ್‌
ಪ್ಯಾಡ್‌ ಮ್ಯಾನ್ ಸಿನಿಮಾ ಸಾಮಾಜಿಕ ಸಂದೇಶವನ್ನು ಸಾರುವ ಅತ್ಯುತ್ತಮ ಸಿನಿಮಾ. 2018ರಲ್ಲಿ ರಿಲೀಸ್ ಆದ ಈ ಸಿನಿಮಾ ಮುಟ್ಟಿನ ಕುರಿತು ಅರಿವನ್ನು ಮೂಡಿಸುತ್ತದೆ. ಆದರೆ ಪಾಕ್‌ನಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿದೆ.
 

ಭಾಗ್‌ ಮಿಲ್ಕಾ ಭಾಗ್‌
'ಭಾಗ್‌ ಮಿಲ್ಕಾ ಭಾಗ್‌' ಸಿನಿಮಾ ಬಾಲಿವುಡ್‌ನಲ್ಲಿ ಭರ್ಜರಿ ಸದ್ದು ಮಾಡಿದ ಸಿನಿಮಾ. ಭಾರತದ ರನ್ನರ್ ಮಿಲ್ಕಾ ಸಿಂಗ್ ಜೀವನ ಕಥೆಯನ್ನು ಒಳಗೊಂಡಿದೆ. ಈ ಸ್ಪೂರ್ತಿದಾಯಕ ಸಿನಿಮಾದಲ್ಲಿ ಫರ್ಹಾನ್ ಅಖ್ತರ್ ಮಿಲ್ಕಾ ಸಿಂಗ್ ಪಾತ್ರದಲ್ಲಿ ಅಭಿನಯಿಸಿದ್ದರು. ಹೀಗಾಗಿ ಈ ಚಿತ್ರವನ್ನು ಪಾಕ್‌ನಲ್ಲಿ ಬ್ಯಾನ್ ಮಾಡಲಾಗಿದೆ. 

ಬೇಬಿ
ಅಕ್ಷಯ್‌ ಕುಮಾರ್ ಅಭಿನಯದ ಚಿತ್ರ ಬೇಬಿ. ಭಯೋತ್ಪಾದಕರು ಮತ್ತು ಅವರ ಸಂಚುಗಳನ್ನು ಪತ್ತೆಹಚ್ಚಲು ಗುಪ್ತಚರ ಇಲಾಖೆ ಆಫೀಸರ್ ಒಬ್ಬರು ಮಿಷನ್‌ನ್ನು ಲೀಡ್ ಮಾಡುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಈ ಕಾರಣಕ್ಕೆ ಕಾರಣ ಇದನ್ನು ಪಾಕ್‌ನಲ್ಲಿ ಬ್ಯಾನ್ ಮಾಡಲಾಗಿದೆ.

click me!