20 ಕೋಟಿ ಕೊಡ್ತೀನಿ ನನ್ನ ಮದುವೆಯಾಗು ಎಂದ ಮಹಿಳಾ ಅಭಿಮಾನಿಗೆ ನಟ ಕಾರ್ತಿಕ್‌ ಕೊಟ್ಟ ಉತ್ತರ ವೈರಲ್!

First Published | Mar 10, 2022, 2:45 PM IST

ನನ್ನ ಮದುವೆಯಾದರೆ ನಿನಗೆ  20 ಕೋಟಿ ರೂಪಾಯಿ ಕೊಡ್ತೀನಿ ಎಂದು ಹೇಳಿದ ಅಭಿಮಾನಿಗೆ ಉತ್ತರ ಕೊಟ್ಟ ಕಾರ್ತಿಕ್ ಆರ್ಯನ್ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ.

ಬಾಲಿವುಡ್ ಸಿಂಪಲ್ ಮತ್ತು ಹಂಬಲ್ ನಟ ಕಾರ್ತಿಕ್ ಆರ್ಯನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್, ತಪ್ಪದೆ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ.

 ಕಾರ್ತಿಕ್ ಆರ್ಯನ್ ನಟನೆಯ Dhamaka ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ. ಕಾರ್ತಿಕ್ ಪ್ರೀತಿಸುವ ರೀತಿಗೆ ವಿಶ್ವಾದ್ಯಂತ ಹುಡುಗಿಯರು ಫಿದಾ ಆಗಿ ಈಗ ಮದುವೆಗೆ ಆಫರ್ ಮಾಡುತ್ತಿದ್ದಾರೆ. 
 

Tap to resize

ಧಮಾಕ ಸಿನಿಮಾದಲ್ಲಿ ಆರ್ಯನ್ ಹೊಡೆದಿರುವ ಪಂಚ್ ಡೈಲಾಗ್‌ನ ಮಹಿಳಾ ಅಭಿಮಾನಿಗಳು ಮಿಮಿಕ್‌ ಮಾಡಿದ್ದಾರೆ. ಇದನ್ನು ಹಂಚಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ.

ಮತ್ತೊಂದು ಫೋಟೋ ಹಂಚಿಕೊಂಡ ನಟ 'ನನ್ನನ್ನು ಮದುವೆಯಾದರೆ ನಿನಗೆ  20 ಕೋಟಿ ರೂಪಾಯಿ ಕೊಡ್ತೀನಿ' ಅಂತ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಮಹಿಳಾ ಅಭಿಮಾನಿಗಳು ಕೇಳಿರುವ ಪ್ರಶ್ನೆಗೆ ಒಂದು ಸೆಕೆಂಡ್ ಕೂಡ ಯೋಚನೆ ಮಾಡದೆ ನಾನು ರೆಡಿ ಯಾವತ್ತು ಎಂದು ಆರ್ಯನ್ ಮರು ಉತ್ತರ ನೀಡಿದ್ದಾರೆ. 

ವೀಕೆಂಡ್‌ ದಿನಗಳಲ್ಲಿ ಕಾರ್ತಿಕ್‌ನ ಭೇಟಿ ಮಾಡಲು ಮನೆ ಬಳಿ ಸಾವಿರಾರು ಮಹಿಳಾ ಅಭಿಮಾನಿಗಳು ಬರುತ್ತಾರೆ. ನಟ ಹೊರ ಬರದಿದ್ದರೆ ನಾನ್‌ ಸ್ಟಾಪ್ ಕೂಗಿ ಹೊರಗೆ ಕರೆಸಿಕೊಳ್ಳುತ್ತಾರೆ.

Latest Videos

click me!