ಮದುವೆಯ ಬಗ್ಗೆ ದೊಡ್ಡ ಸುಳ್ಳು ಹೇಳಿದ್ದ ಕಾಜೋಲ್ !

Suvarna News   | stockphoto
Published : Aug 06, 2020, 05:12 PM IST

ನಟಿ ಕಾಜೋಲ್‌ಗೆ  46ರ ಸಂಭ್ರಮ. ಆಗಸ್ಟ್ 5, 1974 ರಂದು ಮುಂಬೈನಲ್ಲಿ ಜನಿಸಿದ ಕಾಜೋಲ್ ಬಾಲಿವುಡ್‌ನಲ್ಲಿ 28 ವರ್ಷಗಳ ಅನುಭವ ಹೊಂದಿದ್ದಾರೆ. ಸಹನಟ ಕಮಲ್ ಸದನಾ ಜೊತೆ 1992 ರಲ್ಲಿ ಬಿಡುಗಡೆಯಾದ ಬೆಕುದಿ ಚಿತ್ರದೊಂದಿಗೆ  ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ ಕಾಜೋಲ್, 1999 ರಲ್ಲಿ ಅಜಯ್ ದೇವಗನನ್‌ರನ್ನು ವಿವಾಹವಾದರು. ದೇವಗನ್ ಹೌಸ್‌ನಲ್ಲಿ ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆ ನಡೆಯಿತು. ಆದರೆ, ಕಾಜೋಲ್ ತನ್ನ ಮದುವೆಯ ಬಗ್ಗೆ ದೊಡ್ಡ ಸುಳ್ಳು ಹೇಳಿದ್ದರಂತೆ. ಏನದು?

PREV
111
ಮದುವೆಯ ಬಗ್ಗೆ  ದೊಡ್ಡ ಸುಳ್ಳು ಹೇಳಿದ್ದ ಕಾಜೋಲ್ !

ಕಾಜೋಲ್ ಮತ್ತು ಅಜಯ್ ದೇವಗನ್ ಮದುವೆಯಾಗಿ 21 ವರ್ಷಗಳಾಗಿವೆ. ಕೆಲವು ತಿಂಗಳುಗಳ ಹಿಂದೆ, ಕಾಜೋಲ್ ತನ್ನ ಕಿರುಚಿತ್ರ 'ದೇವಿ' ಪ್ರಚಾರಕ್ಕಾಗಿ ಕಪಿಲ್ ಶರ್ಮಾ  ಕಾರ್ಯಕ್ರಮಕ್ಕೆ ಆಗಮಿಸಿದಾಗ ಮದುವೆಯ ಬಗ್ಗೆ ಇಂಟರೆಸ್ಟಿಂಗ್‌ ವಿಷಯ  ಬಹಿರಂಗಪಡಿಸಿದರು.

211

ನಿಮ್ಮ ಮದುವೆಯಲ್ಲಿ ನೀವು ಮಾಧ್ಯಮಗಳಿಗೆ ತಪ್ಪು ವಿಳಾಸವನ್ನು ಹೇಳಿದ್ದೀರಿ ಎಂಬುದು ನಿಜವೇ ಎಂದು ಕಪಿಲ್ ಕಾಜೋಲ್ ಅವರನ್ನು ಕೇಳಿದಾಗ.  'ಹೌದು! ನನ್ನ ಮದುವೆಯ ತಪ್ಪು ವಿಳಾಸವನ್ನು ಬರೆದು  ನಾನು ಮಾಧ್ಯಮಕ್ಕೆ ಇನ್ವಿಟೇಷನ್‌ ಕಳುಹಿಸಿದೆ. ಏಕೆಂದರೆ ನಾನು ಅವರಿಗೆ ಹೇಳದಿದ್ದರೆ, ಮದುವೆ ಎಲ್ಲಿ ನಡೆಯುತ್ತಿದೆ ಎಂದು ಅವರು ಹೇಗಾದರೂ ಕಂಡುಕೊಳ್ಳುತ್ತಾರೆ' ಎಂಧು ಕಾಜೋಲ್‌ ಹೇಳಿದರು.

311

ಕಾಜೋಲ್ ಮತ್ತು ಅಜಯ್ ದೇವಗನ್   'ಹಲ್‌ಚಲ್‌' ಚಿತ್ರದ ಶೂಟಿಂಗ್‌ನಲ್ಲಿ ಮೊದಲ ಭೇಟಿ ಆದರು.  ಕಾಜೋಲ್ ಮೊದಲ ಬಾರಿಗೆ ಅಜಯ್ ಅವರನ್ನು ಭೇಟಿಯಾದಾಗ, ಅವನು ಒಂದು ಕಡೆ ಏಕಾಂಗಿಯಾಗಿ ಕುಳಿತುಕೊಳ್ಳಲು ಇಷ್ಟಪಡುತ್ತಿದ್ದ ಹೆಚ್ಚು ಮಾತನಾಡುತ್ತಿರುಲಿಲ್ಲ.  ಯಾರೊಂದಿಗೂ ಮಾತಾನಾಡದೆ ಹೇಗೆ ಈ ರೀತಿ ಇರಲು ಸಾಧ್ಯ ಎಂದು ಆಗ ಕಾಜೋಲ್ ಯೋಚಿಸಿದರಂತೆ.

411

'ನಾನು ಶಾಟ್‌ಗೆ ಸಿದ್ಧಳಾಗಿದ್ದೆ. ನನ್ನ ಹೀರೊ ಎಲ್ಲಿ ಎಂದು ನಾನು ಕೇಳಿದೆ. ಯಾರೋ ಅಜಯ್ ಕಡೆಗೆ ತೋರಿಸಿದರು. ಅವನು ಬೇಸರಗೊಂಡ ವ್ಯಕ್ತಿಯಂತೆ ಮೂಲೆಯಲ್ಲಿ ಸದ್ದಿಲ್ಲದೆ ಕುಳಿತಿದ್ದನ್ನು ನಾನು ನೋಡಿದೆ' ಎಂದು ಕಾಜೋಲ್ ಸಂದರ್ಶನವೊಂದರಲ್ಲಿ ಹೇಳಿದ್ದರು

511

ಚಿತ್ರದ ಸೆಟ್‌ನಲ್ಲಿಯೇ ಅಜಯ್ ಮತ್ತು ಕಾಜೋಲ್ ನಡುವೆ ಸ್ನೇಹ ಬೆಳೆಯಿತು.  ನಂತರ ಇಬ್ಬರೂ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಕುತೂಹಲಕಾರಿ ಸಂಗತಿಯೆಂದರೆ, ಅಜಯ್ ಅಥವಾ ಕಾಜೋಲ್ ಇಬ್ಬರೂ ಪರಸ್ಪರ ಪ್ರಪೋಸ್‌ ಮಾಡಲಿಲ್ಲವಂತೆ. ಇಬ್ಬರೂ ಪರಸ್ಪರರ ಕಣ್ಣುಗಳ ಭಾಷೆಯನ್ನು ಅರ್ಥಮಾಡಿಕೊಂಡರು.

611

ಆದರೆ, ನಿಧಾನವಾಗಿ ಅಜಯ್ ದೇವಗನ್ ಕಾಜೋಲ್ ಜೊತೆ ಮಾತನಾಡಲು ಪ್ರಾರಂಭಿಸಿದರು ಮತ್ತು ಅವರು ಸ್ನೇಹಿತರಾದರು. 'ನಾವು ಡಿನ್ನರ್‌ಗೆ ಹೋಗುತ್ತಿದ್ದೆವು. ಅಜಯ್  ಜುಹು ಮತ್ತು ನಾನು ದಕ್ಷಿಣ ಬಾಂಬೆಯಲ್ಲಿ ವಾಸಿಸುತ್ತಿದ್ದೆವು, ಆದ್ದರಿಂದ ನಮ್ಮ ಅರ್ಧದಷ್ಟು ಸಮಯ  ಕಾರಿನಲ್ಲಿ ಕಳೆಯುತ್ತಿದ್ದೆವು' ಎಂದು.ಕಾಜೋಲ್  ಹೇಳಿದ್ದರು,

711

ಕಾಜೋಲ್ ಮತ್ತು ಅಜಯ್ 4 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ ನಂತರ ಮದುವೆಯಾಗಲು ನಿರ್ಧರಿಸಿದರು. ಇಬ್ಬರ ಕುಟುಂಬವು ಈ ಸಂಬಂಧವನ್ನು ಅಂಗೀಕರಿಸಿತು, ಆದರೆ ಕಾಜೋಲ್  ತಂದೆ ಮಗಳ ನಿರ್ಧಾರದಿಂದ ಸಂತೋಷವಾಗಿರಲಿಲ್ಲ.  4 ದಿನಗಳ ಕಾಲ ಕಾಜೋಲ್ ಜೊತೆ ಮಾತನಾಡಲಿಲ್ಲ. ಕಾಜೋಲ್ ತನ್ನ ಕೆರಿಯರ್‌ನತ್ತ ಗಮನ ಹರಿಸಬೇಕೆಂದು ಅವರು ಬಯಸಿದರು. ನಂತರ ಅವರು ಕೂಡ ಒಪ್ಪಿದರು.

811

ಮದುವೆಯ ಸಮಯದಲ್ಲಿ ಸಹ, ಅಜಯ್ ಅಥವಾ ಕಾಜೋಲ್ ಪರಸ್ಪರ ಪ್ರಪೋಸ್‌ ಮಾಡಲಿಲ್ಲ. ಇಬ್ಬರು ಒಟ್ಟಿಗೆ ಇರಬೇಕೆಂದು ಬಯಸಿದ್ದರು. ಕಾಜೋಲ್ ಮತ್ತು ಅಜಯ್ ದೇವಗನ್  ಮದುವೆ ಪಂಜಾಬಿ ಮತ್ತು ಮರಾಠಿ ಪದ್ಧತಿಗಳಂತೆ ನೆಡೆಯಿತು.

911

ಈ ಕಪಲ್‌  ನ್ಯಾಸಾ ಮತ್ತು  ಯುಗ್ ಎಂಬ ಮಕ್ಕಳನ್ನು ಹೊಂದಿದ್ದಾರೆ . ಯುಗ್‌ ಶಾಲೆಯಲ್ಲಿ ಓದುತ್ತಿದ್ದಾನೆ ಮತ್ತು ನ್ಯಾಸಾ ಸಿಂಗಾಪುರದಲ್ಲಿ ತನ್ನ ಅಧ್ಯಯನವನ್ನು ಮುಂದುವರಿಸುತ್ತಿದ್ದಾಳೆ.

1011

ಕಭಿ ಖುಷಿ ಕಭಿ ಗಮ್' ಸಮಯದಲ್ಲಿ, ಗರ್ಭಿಣಿಯಾಗಿದ್ದ ಕಾಜೋಲ್‌ಗೆ ಮಿಸ್‌ ಕ್ಯಾರೇಜ್‌ ಆಗಿತ್ತು. 'ಸಿನಿಮಾ  ಉತ್ತಮವಾಗಿ ಗಳಿಸುತ್ತಿತ್ತು. ಆದರೆ ನನ್ನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ' ಎಂದು ಕಾಜೋಲ್ ಹೇಳಿದ್ದರು.

1111

'ಇಷ್ಕ್', 'ಪ್ಯಾರ್ ತೋ ಹೋನಾ ಹಿ ತಾ', 'ದಿಲ್ ಕ್ಯಾ ಕರೇ', 'ರಾಜು ಚಾಚಾ' ಮತ್ತು 'ಯು ಮಿ ಔರ್ ಹಮ್' ಮೊದಲಾದ ಅನೇಕ ಚಿತ್ರಗಳಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದ್ದಾರೆ.

click me!

Recommended Stories