ಸಲ್ಮಾನ್ ಅದೃಷ್ಟ ಬದಲಿಸಿದ ಚಿತ್ರ ಇದು ಆದರೆ ಸಂಭಾವನೆ ಹೆಚ್ಚು ಪಡೆದಿದ್ದು ಮಾಧುರಿ ದೀಕ್ಷಿತ್

First Published Aug 6, 2020, 4:59 PM IST

ಬಾಲಿವುಡ್‌ನ ಸೂಪುರ್‌ ಹಿಟ್‌ ಹಮ್ ಅಪ್ಕೆ ಹೈ ಕೌನ್‌ ಸಿನಿಮಾ  ಫ್ಯಾನ್ಸ್‌ಗಳ ಆಲ್‌ ಟೈಮ್‌ ಫೇವರೇಟ್‌. ರಾಜಶ್ರೀ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ, ಹಮ್ ಅಪ್ಕೆ ಹೈ ಕೌನ್ ಚಿತ್ರ ಬಿಡುಗಡೆಯಾಗಿ 26 ವರ್ಷಗಳನ್ನು ಪೂರೈಸಿದೆ. ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ನಟಿಸಿರುವ ಈ ಚಿತ್ರದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಲಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಕೆಲವು ಕಥೆಗಳು ಇಲ್ಲಿವೆ.

'ಹಮ್ ಅಪ್ಕೆ ಹೈ ಕೌನ್' ಆಗಸ್ಟ್ 5, 1994 ರಂದು ಬಿಡುಗಡೆಯಾಯದ . ಸೂರಜ್ ಬರ್ಜತ್ಯ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಜೊತೆಗೆ ಮೋಹನೀಶ್ ಬಹಲ್‌, ರೇಣುಕಾ ಶಹಾನೆ, ಅನುಪಮ್ ಖೇರ್, ಅಲೋಕ್ ನಾಥ್, ರೀಮಾ ಲಗೂ ಮತ್ತು ಲಕ್ಷ್ಮೀಕಾಂತ್ ಬರ್ಡೆ ನಟಿಸಿದ್ದಾರೆ.
undefined
ಈ ಸೂಪರ್‌ ಹಿಟ್‌ ಸಿನಿಮಾ ದಕ್ಷಿಣ ಮುಂಬೈನ ಲಿಬರ್ಟಿ ಚಿತ್ರಮಂದಿರದಲ್ಲಿ ಮೊದಲು ಪ್ರದರ್ಶನಗೊಂಡು ಅಲ್ಲಿ 125 ವಾರಗಳ ಕಾಲ ನೆಡೆಯಿತು. ಈ ಒಂದು ಸಿನೆಮಾ ಹಾಲ್‌ನಲ್ಲಿ ಫಿಲ್ಮ್‌ ನೋಡಿದವರ ಸಂಖ್ಯೆ ಸುಮಾರು 20 ಲಕ್ಷ ಎಂದು ಹೇಳಲಾಗುತ್ತದೆ.
undefined
'ಸ್ಕ್ರಿಪ್ಟ್ ಸಿದ್ಧವಾದ ನಂತರ ಸೂರಜ್ ನನ್ನ ಬಳಿಗೆ ಬಂದರು. ಅವರು ಸ್ಕ್ರಿಪ್ಟ್ ಅನ್ನು 3 ಗಂಟೆ 15 ನಿಮಿಷಗಳ ಕಾಲ ಹೇಳುತ್ತಲೇ ಇದ್ದರು. ಅವರು ನನಗಾಗಿ ಹಾಡುಗಳನ್ನು ನುಡಿಸಿದರು ಮತ್ತು ರೆಕಾರ್ಡ್ ಮಾಡಿದ ಹಾಡುಗಳನ್ನು ಹಾಡಿದರು. ಉಳಿದವರು ಇದ್ದರು' ಎಂದು ಮಾಧುರಿ ಸಂದರ್ಶನದಲ್ಲಿ ಹೇಳಿದರು. ಸಮಯ ಸುಮಾರು 223 ನಿಮಿಷಗಳ ಈ ಸಿನಿಮಾದಲ್ಲಿ 14 ಹಾಡುಗಳಿವೆ.
undefined
ಸಲ್ಮಾನ್ ಖಾನ್ ಭವಿಷ್ಯವನ್ನು ಬದಲಿಸಿದ ಈ ಚಿತ್ರಕ್ಕೆ ಮಾಧುರಿ ಹೆಚ್ಚು ಸಂಭಾವನೆ ಪಡೆದರು ಎಂದು ವರದಿಗಳು ಹೇಳುತ್ತವೆ. ಸುಮಾರು 2.75 ಕೋಟಿ ರೂ ಮಾಧುರಿ ಆ ಸಮಯದಲ್ಲಿ, ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಲಿಸ್ಟ್‌ನಲ್ಲಿ ಸೇರಿಕೊಂಡರು.
undefined
ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಪ್ರಪಂಚದಾದ್ಯಂತ ಗಳಿಕೆಯಾಗಿದೆ. 1975 ರಲ್ಲಿ ಬಿಡುಗಡೆಯಾದ 'ಶೋಲೆ' ದಾಖಲೆಯನ್ನು ಮುರಿದು ಬಾಲಿವುಡ್‌ನ ಅತಿ ಹೆಚ್ಚು ಗಳಿಕೆಯ ಚಿತ್ರವೆಂದು ಸಾಬೀತಾಯಿತು.
undefined
ಈ ಚಿತ್ರದಲ್ಲಿ ಅನುಪಮ್ ಖೇರ್ ಒಂದು ದೃಶ್ಯದಲ್ಲಿ ಶೋಲೆಯ ವೀರು (ಧರ್ಮೇಂದ್ರ) ಸೀನ್‌ ರಿಕ್ರಿಯೇಟ್‌ ಮಾಡಿದ್ದಾರೆ. ದೃಶ್ಯದ ಚಿತ್ರೀಕರಣದ ಸಮಯದಲ್ಲಿ ಖೇರ್‌ ಮುಖ ಬಹುತೇಕ ಪಾರ್ಶ್ವವಾಯುವಿಗೆ ಒಳಗಾಯಿತಂತೆ ಹಾಗಾಗಿ ಪಾಸಿಂಗ್‌ ದಿ ಬಾಲ್‌ ಆಟದ ಸೀನ್‌ನಲ್ಲಿ ಅವರು ಧರ್ಮೇಂದ್ರರನ್ನು ನಕಲು ಮಾಡಿದ್ದಾರೆ.
undefined
इस फिल्म में लता मंगेशकर ने 10 गाने गाए थे। लेकिन वो कोई भी अवॉर्ड लेना नहीं चाहती थी। वो चाहती थी कि नई सिंगर्स को मौका मिले। पर पब्लिक के डिमांड पर उन्हें फिल्म के गाने दीदी तेरा देवर दीवाना... के लिए एक स्पेशल अवॉर्ड से नावाजा गया था।
undefined
ಲಂಡನ್‌ನ ವೆಲ್‌ವ್ಯೂ ಥಿಯೇಟರ್‌ನಲ್ಲಿ 50 ವಾರಗಳ ಕಾಲ ಪ್ರದರ್ಶನಗೊಂಡಿತ್ತು ಹಮ್ ಅಪ್ಕೆ ಹೈ ಕೌನ್ ಸಿನಿಮಾ. ಥಿಯೇಟರ್ ಅನ್ನು ಮೂರು ವಾರಗಳಿಗೆ ಮಾತ್ರ ಬುಕ್‌ ಮಾಡಲಾಗಿತ್ತು. ಕಾರಣ ನಂತರ ಅದು ನವೀಕರಣಗೊಳ್ಳಲಿತ್ತು. ಆದರೆ ಸಿನಿಮಾದ ಕಲೆಕ್ಷನ್‌ ನೋಡಿದ ನಂತರ ಥಿಯೇಟರ್‌ನ ರಿನವೇಶನ್‌ ಅನ್ನು ಮುಂದೂಡಲಾಯಿತು.
undefined
ಈ ಚಿತ್ರಕ್ಕೆ 10 ಹಾಡುಗಳನ್ನು ಹಾಡಿರುವ ಲತಾ ಮಂಗೇಶ್ಕರ್‌ ಯಾವುದೇ ಪ್ರಶಸ್ತಿ ತೆಗೆದುಕೊಳ್ಳಲು ಇಷ್ಟಪಡಲಿಲ್ಲ. ಹೊಸ ಗಾಯಕರಿಗೆ ಅವಕಾಶ ಸಿಗಬೇಕೆಂದು ಬಯಸಿದ್ದರು. ಆದರೆ ಸಾರ್ವಜನಿಕರ ಬೇಡಿಕೆಯ ಮೇರೆಗೆ ದೀದಿ ತೇರಾ ದೇವಾರ್ ದಿವಾನಾ ಚಲನಚಿತ್ರ ಗೀತೆಗಾಗಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.
undefined
ಮೊದಲು ಮಾಧುರಿ ಎದುರು ಅಮೀರ್ ಖಾನ್‌ರನ್ನು ಆಯ್ಕೆ ಮಾಡಲಾಗಿತ್ತು ಆದರೆ ಅಮೀರ್ ಈ ಸ್ಕ್ರಿಪ್ಟ್ ಸರಿಯಾಗಿಲ್ಲ ಎಂದು ಭಾವಿಸಿದರು. ನಂತರ ಆ ಪಾತ್ರವನ್ನು ಪಡೆದ ಸಲ್ಮಾನ್‌ರನ್ನು ಸಿನಿಮಾ ಸೂಪರ್‌ಸ್ಟಾರ್‌ ಮಾಡಿತು.
undefined
ಚಿತ್ರದ 26 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಸಲ್ಮಾನ್ ಜೊತೆಯ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ 'ಹಮ್ ಅಪ್ಕೆ ಹೈ ಕೌನ್'ಗೆ 26 ವರ್ಷಗಳಾಗಿದೆ ಎಂದು ನಂಬಲಾಗುವುದಿಲ್ಲ. ಆ ಮೋಜಿನ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ತಂಡದ ಕಠಿಣ ಪರಿಶ್ರಮದಿಂದಾಗಿ ಚಿತ್ರದ ಪ್ರತಿಯೊಂದು ದೃಶ್ಯವೂ ಪರ್ಫೇಕ್ಟ್‌ ಆಗಿದೆ. ಇಂದಿಗೂ ಈ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸುತ್ತಾರೆ ಮತ್ತು ಆನಂದಿಸುತ್ತಾರೆ. ಬಹಳಷ್ಟು ಧನ್ಯವಾದಗಳು ಮತ್ತು ಸಾಕಷ್ಟು ಪ್ರೀತಿ' ಎಂದು ಫೋಟೋಗೆ ಕ್ಯಾಪ್ಷನ್‌ ನೀಡಿದ್ದಾರೆ ಈ ಚಿತ್ರದಲ್ಲಿ ನಿಶಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ದಿವಾ.
undefined
click me!