ಬಾಲಿವುಡ್ ನಟ ಸೈಫ್ ತಂಗಿ 41 ವರ್ಷದ ಸೋಹಾ ಪ್ರಸ್ತುತ ಚಲನಚಿತ್ರಗಳಿಂದ ದೂರವಿದ್ದು ಫ್ಯಾಮಿಲಿ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.
ಅವರು ಕೊನೆಯ ಬಾರಿಗೆ 2018 ರ ಸಾಹೇಬ್ ಬಿವಿ ಔರ್ ಗ್ಯಾಂಗ್‌ಸ್ಟರ್ 3 ಚಿತ್ರದಲ್ಲಿ ಕಾಣಿಸಿಕೊಂಡರು.
ಸೋಹಾ ತನ್ನ ಪತಿ ಕುನಾಲ್ ಖೇಮು ಮತ್ತು ಮಗಳು ಇನಯಾ ನೌಮಿ ಜೊತೆ ಲಿಕಿಂಗ್ ರೋಡ್‌ನ ಸುಂದರ ವಿಲ್ಲಾ ಅಪಾರ್ಟ್‌ಮೆಂಟ್‌ನ 9 ನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.
ಸಹೋದರ ಸೈಫ್‌ನಂತೆ ಓದುವುದನ್ನೂ ಇಷ್ಟಪಡುವ ಸೋಹಾ ಮನೆಯಲ್ಲಿ ಸಾಕಷ್ಟು ಪುಸ್ತಕಗಳಿವೆ.
ಅವರು ಪುಸ್ತಕಗಳಿಗಾಗಿ ಪ್ರತ್ಯೇಕ ಬುಕ್ ರ್ಯಾಕ್ ಹೊಂದಿದ್ದಾರೆ.
ಮನೆಯ ಒಂದು ಗೋಡೆ ಗಾಜಿನಿಂದ ಮಾಡಲ್ಪಟ್ಟಿದ್ದು, ಅದರಿಂದ ಹೊರಗಿನ ನೋಟವನ್ನು ನೋಡಬಹುದು.
ದೊಡ್ಡ ಸೋಫಾಗಳು ಮತ್ತು ಕೌಚ್‌ಗಳನ್ನು ಕಾಣಬಹುದು.
ಅತ್ಯಂತ ಕಲಾತ್ಮಕ ರೀತಿಯಲ್ಲಿ ಅಲಂಕರಿಸಿರುವ ಮನೆ ಅವರ ಅಭಿರುಚಿಗೆ ಸಾಕ್ಷಿಯಾಗಿದೆ.
ಇಂಟೀರಿಯರ್ ಡಿಸೈನರ್ ಸಹಾಯದಿಂದ ಸೋಹಾ ತನ್ನ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ.
ಮನೆಯ ಗೋಡೆಗಳನ್ನು ಪೋಷಕರ ಮತ್ತು ಕುಟುಂಬದ ಫೋಟೋಗಳು ಅಲಂಕರಿಸಿದೆ.
ಮಗಳು ಇನಾಯಾಗಾಗಿ ಆಡಲು ಇರುವ ಪ್ರತ್ಯೇಕ ಕೋಣೆ ತುಂಬಾ ಕಲರ್‌ಫುಲ್ ರೂಮ್ ಆಗಿ ಡಿಸೈನ್ ಮಾಡಿದ್ದಾರೆ ಸೋಹಾ ಆಲಿ ಖಾನ್.
Suvarna News