ದುರ್ಗಾ ಪೂಜೆಯಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು

First Published | Oct 12, 2024, 12:32 PM IST

ಬಾಲಿವುಡ್ ನಟಿಯರಾದ ಕಾಜೋಲ್ ಮತ್ತು ರಾಣಿ ಮುಖರ್ಜಿ ಮುಂಬೈನಲ್ಲಿ ಪೆಂಡಾಲ್ ಹಾಕಿ ದುರ್ಗಾ ಪೂಜೆ ಆಯೋಜಿಸಿದ್ದರು. ಅವರ ಈ ನವರಾತ್ರಿ ದುರ್ಗಾ ಪೂಜೆ ಸಂಭ್ರಮದಲ್ಲಿ ಬಾಲಿವುಡ್ ನಟಿಯರು ಭಾಗಿಯಾಗಿದ್ದರು. ಅವರ ಸುಂದರ ಫೋಟೋಗಳು ಇಲ್ಲಿವೆ. 

ದುರ್ಗಾ ಪೂಜೆಯಲ್ಲಿ ಜಯಾ ಬಚ್ಚನ್ ಮತ್ತು ಕಾಜೋಲ್ ನಡುವಿನ ವಿಶೇಷ ಬಾಂಧವ್ಯ ಎದ್ದು ಕಾಣುತ್ತಿತ್ತು. ಜಯಾ ಅವರು ಕಾಜೋಲ್‌ರನ್ನು ಅಪ್ಪಿಕೊಂಡು ಮುದ್ದಾಡಿದರು.

ಜಯಾ ಬಚ್ಚನ್ ಹಳದಿ ಸೀರೆಯಲ್ಲಿ ಮತ್ತು ಕಾಜೋಲ್ ಪೀಚ್ ಬಣ್ಣದ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡರು, ಇವರಿಬ್ಬರ ಒಡನಾಟ ಎಲ್ಲರ ಗಮನ ಸೆಳೆದಿದೆ.

Tap to resize

ಸಿಡುಕಿಗೆ ಹೆಸರಾಗಿರುವ ಜಯಾ ಬಚ್ಚನ್  ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಎಲ್ಲರ ಜೊತೆ ನಗುನಗುತ್ತಾ ಮಾತನಾಡಿದ್ದು ವಿಶೇಷವಾಗಿತ್ತು

ಕಾಜೋಲ್ ತಮ್ಮ ಚಿಕ್ಕಪ್ಪ ದೇಬ್ ಮುಖರ್ಜಿ ಜೊತೆ ಮಾತನಾಡುತ್ತಾ ಓಡಾಡುತ್ತಿರುವ ದೃಶ್ಯ ಗಮನ ಸೆಳೆದವು. ದೇಬ್, ಅಯಾನ್ ಮುಖರ್ಜಿ ಅವರ ತಂದೆ.

ರಣಬೀರ್ ಕಪೂರ್ ಕೂಡ ಪೆಂಡಾಲ್‌ಗೆ ಹಾಜರಾಗಿದ್ದರು. ಅವರು ಬೂದು ಶರ್ಟ್ ಮತ್ತು ಕಂದು ಪ್ಯಾಂಟ್ ಧರಿಸಿದ್ದರು ಮತ್ತು ರಾಣಿ ಮತ್ತು ಕಾಜೋಲ್ ಜೊತೆ ಪೋಸ್ ಕೊಟ್ಟರು. 

ಕಾಜೋಲ್ ಪುತ್ರ ಯುಗ್ ಕೂಡ ದುರ್ಗಾ ಪೂಜೆಯಲ್ಲಿ ಭಾಗವಹಿಸಲು ಆಗಮಿಸಿದ್ದರು. ಪೈಜಾಮ ಕುರ್ತಾ ಧರಿಸಿದ್ದ ಯುಗ್ ತಾಯಿಯೊಂದಿಗೆ ಕಾಣಿಸಿಕೊಂಡರು.

Latest Videos

click me!