Published : Dec 14, 2021, 08:29 PM ISTUpdated : Dec 14, 2021, 08:46 PM IST
ಮುಂಬೈ(ಡಿ. 14) ಮದುವೆ ಸಂಭ್ರಮದ ಪೋಟೋ ಮತ್ತು ವಿಡಿಯೋವನ್ನು ಕೋಟಿ ಮೊತ್ತಕ್ಕೆ ಶೇರ್ ಮಾಡಿಕೊಂಡಿದ್ದ ಜೊಡಿ ಮದುವೆಯ ನಂತರ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನ (Bollywood) ಜೋಡಿ ವಿಕ್ಕಿ ಕೌಶಲ್ (Vicky Koushal) ಮತ್ತು ಕತ್ರಿನಾ (Katrina Kaif) ಪೋಟೋಗಳ ವೈರಲ್ ಆಗುತ್ತಿವೆ.
ಸತಿ-ಪತಿಗಳಾದ ನಂತರ ವಿಕ್ಕಿ-ಕತ್ರಿನಾ ಮೊದಲ ಸಾರಿ ಅಭಿಮಾನಿಗಳ ಮುಂದೆ ಒಟ್ಟಾಗಿ ಕಾಣಿಸಿಕೊಂಡರು. ಜೋಡಿಯ ಮದುವೆ ವಿಡಿಯೋ ಮತ್ತು ಪೋಟೋಗಳನ್ನು ಸಂಸ್ಥೆಯೊಂದು ಕೋಟಿ ಮೊತ್ತಕ್ಕೆ ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು.
ಹನಿಮೂನ್ ಮುಗಿಸಿದ ಜೋಡಿ ದೇಶಕ್ಕೆ ವಾಪಸಾಗಿದ್ದು ಮುಂಬೈನ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕರು. ಜೋಡಿಯ ಫ್ರಿ ವೆಡ್ಡಿಂಗ್ ಪೋಟೋ ಶೂಟ್ ಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
36
ಒಬ್ಬರಕೈಯನ್ನು ಒಬ್ಬರು ಹಿಡಿದಿದ್ದು ಆತ್ಮೀಯತೆ ಎದ್ದು ಕಾಣುತ್ತಿತ್ತು. ರಾಜಸ್ಥಾನದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
46
ಜೋಡಿ ರಹಸ್ಯವಾಗಿ ಮದುವೆಯಾಗುತ್ತಿದ್ದಾರಂತೆ, ಮಾಧ್ಯಮಗಳಿಗೆ ಪ್ರವೇಶ ಇಲ್ವಂತೆ.. ಆಮಂತ್ರಿತರ ಪಟ್ಟಿಯನ್ನು ಕಡಿತ ಮಾಡಲಾಗಿದೆಯಂತೆ.. ಹೌದು ಎಲ್ಲದಕ್ಕೂ ಉತ್ತರ ಸಿಕ್ಕಿತ್ತು.
56
ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಬಾಲಿವುಡ್ ನಟ-ನಟಿ ಹೊಸ ಜೋಡಿ ಸೋಶಿಯಲ್ ಮೀಡಿಯಾ ಮೂಲಕ ಪೋಟೋಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳ ಆಶೀರ್ವಾದ ಪಡೆದುಕೊಂಡಿದ್ದರು.
66
ನಮ್ಮ ಹೃದಯದಲ್ಲಿ ಮನೆ ಮಾಡಿದ್ದ ಪ್ರೀತಿ ಇಂಥದ್ದೊಂದು ಶುಭ ಘಳಿಗೆಗೆ ವೇದಿಕೆ ಮಾಡಿಕೊಟ್ಟಿದೆ. ನಮ್ಮಿಬ್ಬರ ಜೋಡಿಯ ಈ ಹೊಸ ಜೀವನಕ್ಕೆ ನಿಮ್ಮೆಲ್ಲರ ಹಾರೈಕೆ ಇರುತ್ತದೆ ಎಂದು ನಂಬಿದ್ದೇವೆ ಎಂದು ವಿಕ್ಕಿ ಕೌಶಲ್ ಬರೆದುಕೊಂಡಿದ್ದರು. ಡಿಸೆಂಬರ್ 9 ರಂದು ಮದುವೆ ನೆರವೇರಿತ್ತು.