ಕ್ರಿಶ್ಚಿಯನ್ ಆದರೆ ಏನು? ಪತಿ ರಿತೇಶ್‌ ಜೊತೆ ಶ್ರೀರಾಮನ ದರ್ಶನ ಪಡೆದ ನಟಿ ಜೆನಿಲಿಯಾ

First Published | Apr 24, 2024, 4:47 PM IST

ಈ ವರ್ಷದ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದಾಗಿನಿಂದಲೂ ದೇಶದ ಮೂಲೆ ಮೂಲೆಯಿಂದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ರಾಮಲಲ್ಲಾನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಈ ವರ್ಷದ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯಾದಾಗಿನಿಂದಲೂ ದೇಶದ ಮೂಲೆ ಮೂಲೆಯಿಂದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ರಾಮಲಲ್ಲಾನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಅದೇ ರೀತಿ ಈಗ ಬಾಲಿವುಡ್ ನಟಿ ಜೆನಿಲಿಯಾ ಹಾಗೂ ಪತಿ ನಟ ರಿತೇಶ್ ದೇಶ್‌ಮುಖ್ ಅವರು ಜೊತೆಯಾಗಿ ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

Tap to resize

ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್ ಬಾಲಿವುಡ್‌ನ ಪವರ್‌ ಕಪಲ್‌ಗಳಲ್ಲಿ ಒಬ್ಬರು ಸದಾ ಜೊತೆ ಜೊತೆಯಾಗಿ ಇರುವ ಈ ಜೋಡಿಯನ್ನು ಮೆಚ್ಚದವರೇ ಇಲ್ಲ

ಧರ್ಮ ಬೇರೆ ಬೇರೆಯಾದರೂ ಧೈರ್ಯವಾಗಿ  ಪ್ರೀತಿಸಿ ಮದುವೆಯಾಗಿ ಇಬ್ಬರು ಮುದ್ದು ಮಕ್ಕಳೊಂದಿಗೆ ಸುಖಿ ಜೀವನ ನಡೆಸುತ್ತಿರುವ ಜೆನಿಲಿಯಾ ಹಾಗೂ ರಿತೇಶ್ ದೇಶ್‌ಮುಖ್ ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆದರು. 

ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಜೋಡಿ ನಿನ್ನ ನಾಮವೂ ಮಂತ್ರಕ್ಕಿಂತಲೂ ಹೆಚ್ಚು ಜೈಶ್ರೀರಾಮ್ ಎಂದು ಬರೆದುಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ. 

Genilia ritesh

ಜೆನಿಲಿಯಾ ಬಿಳಿ ಬಣ್ಣದ ಚೂಡಿಧಾರ್ ಧರಿಸಿದ್ದರೆ ಮಕ್ಕಳಿಬ್ಬರು ಬಿಳಿ ಬಣ್ಣದ ಶೆರ್ವಾನಿ ಹಾಗೂ ನಟ ರಿತೇಶ್ ಹಳದಿ ಬಣ್ಣದ ಜುಬ್ಬಾ ಧರಿಸಿದ್ದಾರೆ.  ರಾಮಲಲ್ಲಾನ ದರ್ಶನ ಪಡೆದ ಬಳಿಕ ದೇಗುಲದ ಪುರೋಹಿತರಾದ ಸಂತೋಷ್ ತಿವಾರಿ ಅವರೊಂದಿಗೆ ಈ ಕುಟುಂಬ ಫೋಟೋ ತೆಗೆಸಿಕೊಂಡಿದೆ. 

ರಿತೇಶ್ ದೇಶ್‌ಮುಖ್ (Riteish Deshmukh) ಮತ್ತು ಜೆನಿಲಿಯಾ ಡಿಸೋಜಾ (Genelia Dsouza) ಬಾಲಿವುಡ್‌ನ  (Bollywood) ಕ್ಯುಟ್‌ ಜೋಡಿಗಳಲ್ಲಿ ಒಂದಾಗಿದ್ದು, ಫೆಬ್ರವರಿ 3, 2012 ರಂದು ಮುಂಬೈನಲ್ಲಿ ಮರಾಠಿ ಸಂಪ್ರದಾಯದ ಪ್ರಕಾರ ತುಂಬಾ ಗ್ರ್ಯಾಂಡ್‌ ಆಗಿ ಇವರು ವಿವಾಹವಾಗಿದ್ದು,ಇಬ್ಬರು ಮಕ್ಕಳಿದ್ದಾರೆ.

Latest Videos

click me!