ಅಧಿಕಾರಿಯಾಗಿದ್ದ ಬಾಲಿವುಡ್ ನಟಿ ದಿಶಾ ಪಟಾನಿ ಅಕ್ಕ ಖುಷ್ಬೂ ಭಾರತೀಯ ಸೇನೆ ಬಿಟ್ಟಿದ್ದೇಕೆ?

First Published | Apr 24, 2024, 4:21 PM IST

ಬಾಲಿವುಡ್‌ನ ಮೋಸ್ಟ್‌ ಫಿಟ್‌ ನಟಿಯರಲ್ಲಿ ಒಬ್ಬರಾದ ದಿಶಾ ಪಟಾನಿ ಯಾರಿಗೆ ಗೊತ್ತಿಲ್ಲ ಹೇಳಿ? ಆದರೆ ಇವರ ಸಹೋದರಿ ಮಾಜಿ ಭಾರತೀಯ ಸೇನಾ ಅಧಿಕಾರಿ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ನಟಿ ದಿಶಾ ಪಟಾನಿ ಅವರ ಸಹೋದರಿ ಖುಷ್ಬೂ ಪಟಾನಿ ಅವರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.
 

ಬಾಲಿವುಡ್ ನಟಿ ದಿಶಾ ಪಟಾನಿ ಅವರಿಗೆ ಖುಷ್ಬೂ ಪಟಾನಿ ಎಂಬ ಹಿರಿಯ ಸಹೋದರಿ ಒಬ್ಬರಿದ್ದಾರೆ, ಅವರು ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ.

ಖುಷ್ಬೂ ಅವರು  ಆರ್ಮಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂದರೆ ಇವರು  ಕೂಡ ತಂಗಿ ಹಾಗೂ ನಟಿ ದಿಶಾ ಪಟಾನಿಯಂತೆ ತನ್ನ ಫಿಟ್‌ನೆಸ್ ಬಗ್ಗೆ ತುಂಬಾ ಜಾಗರೂಕರಾಗಿದ್ದಾರೆ ಎಂದು ಹೇಳಬೇಕಾಗಿಲ್ಲ.

Tap to resize

ಇತ್ತೀಚೆಗೆ, ಖುಷ್ಬೂ ಪಟಾನಿ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಸೈನ್ಯದಲ್ಲಿನ ತನ್ನ ದಿನಗಳ ಸರಣಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

32 ವರ್ಷ ವಯಸ್ಸಿನ ಖುಷ್ಬೂ ಪಟಾನಿ 'ನನ್ನ ಸೇನಾ ಜೀವನದ ಒಂದು ನೋಟ. ಮೇರಾ ಪೂರಾ ಯುವ ಫೌಜ್ ಕೇ ನಾಮ್' ಎಂಬ ಶೀರ್ಷಿಕೆಯ ಜೊತೆ ಫೋಟೋಗಳನ್ನು ಶೇರ್‌ಮಾಡಿದ್ದಾರೆ

ಸೇನೆಗೆ ಸೇರುವುದು ಅನೇಕರ ಕನಸಾಗಿರುವುದರಿಂದ ನೀವು ಸೈನ್ಯವನ್ನು ಏಕೆ ತೊರೆದಿದ್ದೀರಿ ಎಂದು ಕಾಮೆಂಟ್ ವಿಭಾಗದಲ್ಲಿ ಹಲವರು ಖುಷ್ಬೂ ಅವರನ್ನು ಕೇಳಿದ್ದಾರೆ.
 

'ಸೇನೆಗೆ ಸೇರುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದೆ, ಅದು ಏಕೆ ಎಂದು ನನಗೆ ತಿಳಿದಿಲ್ಲ, ಅದು ಕನಸಲ್ಲ, ನನಗೆ ಯಾವುದೇ ಕನಸುಗಳಿಲ್ಲ. ನಾನು ನನ್ನ ಜೀವನವನ್ನು ಕರ್ತವ್ಯದ ಮೇಲೆ ಬದುಕುತ್ತೇನೆ' ಎಂದು ಖುಷ್ಬೂ ಉತ್ತರಿಸಿದ್ದಾರೆ

1991 ರಲ್ಲಿ ಜನಿಸಿದ  ಖುಷ್ಬೂ  ಪ್ರಸ್ತುತ ಸರ್ಟೀಫೈಡ್‌ ತರಬೇತುದಾರ ಮತ್ತು ಪೌಷ್ಟಿಕ ತಜ್ಞರಾಗಿದ್ದಾರೆ. ಆಕೆಯ ತಂದೆ ಜಗದೀಶ್ ಸಿಂಗ್ ಪಟಾನಿ ಪೊಲೀಸ್ ಅಧಿಕಾರಿ ಮತ್ತು ತಾಯಿ ಹೆಲ್ತ್‌ ಇನ್ಸೆಪೆಕ್ಟರ್‌.

Latest Videos

click me!