ಕಾಂಜುರಿಂಗ್ ಸಿನಿಮಾಕ್ಕಿಂತಲೂ ಹೆಚ್ಚು ಭಯ ಹುಟ್ಟಿಸುತ್ತೆ ಈ ದೇಸಿ ಹಾರರ್ ಮೂವೀಸ್!

First Published Jun 26, 2024, 5:59 PM IST

ನಾವು ಹಾರರ್ ಸಿನಿಮಾಗಳ ಬಗ್ಗೆ ಮಾತನಾಡಿದಾಗಲೆಲ್ಲಾ, ಇಂಗ್ಲೀಷ್ ಹೆಸರುಗಳೇ ನೆನಪಿಗೆ ಬರುತ್ತೆ ಅಲ್ವಾ?, ಆದರೆ ಭಾರತದಲ್ಲಿ ತಯಾರಾದ ಹಲವಾರು ಸಿನಿಮಾಗಳಿವೆ, ಅವುಗಳನ್ನು ನೋಡಿದ್ರೆ ಖಂಡಿತವಾಗಿಯೂ ಭಯ ಹುಟ್ಟುತ್ತೆ. 
 

ಅನೇಕರು ಸಾಹಸಕ್ಕಾಗಿ ಹಾರರ್ ಚಲನಚಿತ್ರಗಳನ್ನು (Horror films) ನೋಡುತ್ತಾರೆ. ಭಯಾನಕ ಚಲನಚಿತ್ರಗಳು ಪ್ರಪಂಚದಾದ್ಯಂತ ಇವೆ. ಆದರೆ ಕಥೆಯೇ ಭಯಾನಕವಾಗಿರುವ ಚಿತ್ರಗಳು ಕಡಿಮೆಯೇ. ನಾವು ಹೆಚ್ಚಾಗಿ ಹಾಲಿವುಡ್ ಹಾರರ್ ಚಿತ್ರಗಳ ಬಗ್ಗೆ ಮಾತನಾಡುತ್ತೇವೆ, ಆದರೆ ಭಾರತದಲ್ಲಿ ನಿರ್ಮಿಸಲಾದ ಅನೇಕ ಚಲನಚಿತ್ರಗಳಿವೆ. ಅದರ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಕಾಂಜರಿಂಗ್ ಕ್ಕಿಂತಲೂ ಹೆಚ್ಚು ಭಯ ಹುಟ್ಟಿಸುವ ಭಾರತದ ಹಾರರ್ ಸಿನಿಮಾಗಳ ಬಗ್ಗೆ ತಿಳಿಯಿರಿ. 
 

ಕುಮಾರಿ (Kumari)
ಭಾಷೆ - ಮಲಯಾಲಂ

ಈ ಚಿತ್ರದ ಸ್ಕ್ರಿಪ್ಟ್ ಸ್ವಲ್ಪ ಮಟ್ಟಿಗೆ 'ತುಂಬದ್' ನಂತೆ ಇದೆ, ಇದರಲ್ಲಿ ದೇವಿಯ ಮಗ ರಾಕ್ಷಸನಾಗುತ್ತಾನೆ. ಇಲ್ಲಿಯೂ ದೇವಿಯ ಇಬ್ಬರು ಪುತ್ರರು ಮತ್ತು ಶಾಪದ ಕಥೆ ಇದೆ. ಜಾನಪದ ಕಥೆಗಳನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಲಾಗಿದೆ ಮತ್ತು ಕುಮಾರಿ ತನ್ನ ಮನೆಯ ಸುತ್ತಲಿನ ಘಟನೆಗಳನ್ನು ಕಂಡುಹಿಡಿಯಲು ಹೇಗೆ ಪ್ರಯತ್ನಿಸುತ್ತಾಳೆ ಎಂಬುದು ಕಥೆ. ಈ ಚಿತ್ರದ ಪ್ರತಿಯೊಂದು ಪಾತ್ರವೂ ನಿಮ್ಮನ್ನು ಹೆದರಿಸದೇ ಇರದು. ನೀವೂ ಸಹ ಅಜ್ಜಿಯ ರಾಕ್ಷಸ ಕಥೆಗಳಿಗೆ ಹೆದರುತ್ತಿದ್ದರೆ, ಖಂಡಿತವಾಗಿಯೂ ಈ ಚಲನಚಿತ್ರವನ್ನು ನೋಡಿ ಭಯ ಪಡ್ತೀರಿ.

ಲಪಾಚಾಪಿ (Lapacchappi)
ಭಾಷೆ- ಮರಾಠಿ

ನುಶ್ರತ್ ಭರೂಚಾ ಅವರ ಚಿತ್ರ 'ಚೋರಿ' ಈ ಚಿತ್ರದ ರಿಮೇಕ್ ಆಗಿದೆ. ಯಾವುದೋ ಕಾರಣಗಳಿಗಾಗಿ ತಮ್ಮ ನಗರ ಮನೆಯಿಂದ ಹಳ್ಳಿಗೆ ಸ್ಥಳಾಂತರಗೊಳ್ಳುವ ದಂಪತಿಗಳ ಚಿತ್ರ ಇದಾಗಿದೆ. ಕಬ್ಬಿನ ಗದ್ದೆಗಳ ನಡುವೆ ನಿರ್ಮಿಸಲಾದ ಈ ಮನೆ ಸ್ವತಃ ಭಯಾನಕವಾಗಿ ಕಾಣುತ್ತದೆ, ಆದರೆ ಈ ಚಿತ್ರದಲ್ಲಿ ಸಂಭವಿಸುವ ಘಟನೆಗಳು ಇನ್ನೂ ಭಯಾನಕವಾಗಿವೆ. ಅಂತಿಮವಾಗಿ, ದೆವ್ವಗಳು ಮತ್ತು ರಹಸ್ಯವನ್ನು ಎದುರಿಸಿದಾಗ, ಇನ್ನೆನೋ ಕಥೆ ತೆರೆದುಕೊಳ್ಳುತ್ತೆ. 
 

ಪಿಜ್ಜಾ (Pizza)
ಭಾಷೆ- ತಮಿಳು

ದೆವ್ವಗಳನ್ನು ನಂಬದ ಪಿಜ್ಜಾ ಡೆಲಿವರಿ ಬಾಯ್ ದೆವ್ವದ ಬಂಗಲೆಯೊಳಗೆ ಹೊಕ್ಕು, ಅಲ್ಲಿ ವಿಚಿತ್ರ ಸಮಸ್ಯೆಗಳನ್ನು ಎದುರಿಸುತ್ತಾನೆ. ಅವನು ಹೇಗೋ ಆ ಬಂಗಲೆಯಿಂದ ಹೊರಬರುತ್ತಾನೆ, ಆದರೆ ನಂತರ ಅವನ ಜೀವನದಲ್ಲಿ ವಿಚಿತ್ರ ಘಟನೆಗಳು ಸಂಭವಿಸಲು ಪ್ರಾರಂಭಿಸುತ್ತವೆ. ಈ ಚಿತ್ರದಲ್ಲಿ ನೀವು ಯೋಚಿಸದ ಕೆಲವು ದೃಶ್ಯಗಳಿವೆ, ತುಂಬಾನೆ ಇಂಟ್ರೆಸ್ಟಿಂಗ್ ಆಗಿರುವ ಈ ಕಥೆ ನಿಮ್ಮನ್ನು ಆಕರ್ಷಿಸದೇ ಇರದು. 

ಕಾಂಚನಾ (Kanchana)
ಭಾಷೆ- ತಮಿಳು

ಅಕ್ಷಯ್ ಕುಮಾರ್ ಅವರ 'ಲಕ್ಷ್ಮಿ' ಚಿತ್ರವು ಈ ಚಿತ್ರದ ರಿಮೇಕ್ ಆಗಿದೆ, ಆದರೆ ಮೂಲ ಚಿತ್ರವು ಗ್ಲಾಮರಸ್ ಆಗಿ ಏನನ್ನೂ ತೋರಿಸೋದೆ ಇಲ್ಲ. ಆದರೆ ನಿಜವಾದ ಭಯವನ್ನು ಹುಟ್ಟಿಸುತ್ತೆ. ಈ ಚಿತ್ರದ ಕಥೆಯು ತನಗೆ ಮಾಡಿದ ಮೋಸ ಮತ್ತು ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಸಾವಿನ ನಂತರವೂ ತೃತೀಯ ಲಿಂಗಿಯ ಆತ್ಮ ಹುಡುಗನೊಬ್ಬನ ದೇಹದಲ್ಲಿ ಸೇರಿ ಹೇಗೆ ಸೇಡು ತೀರಿಸಿಕೊಳ್ಳುತ್ತೆ ಅನ್ನೋದು ಕಥೆ. 

ಅರುಂಧತಿ (Arundhathi)
ಭಾಷೆ- ತೆಲುಗು

ಈ ಚಿತ್ರ ಐತಿಹಾಸಿಕ ಹಾರರ್ ಮತ್ತು ಜಾನಪದ ಎರಡರ ಸಂಗಮವನ್ನು ಹೊಂದಿದೆ. ದುಷ್ಟಶಕ್ತಿಯು ಬಂಧನದಿಂದ ಮುಕ್ತವಾಗಿ, ಮೂರು ತಲೆಮಾರಿನ ನಂತರವೂ ಆ ಆತ್ಮ ಜನರನ್ನು ಕೊಲ್ಲುತ್ತಲೇ ಇರುತ್ತದೆ. ಅವನನ್ನು ತಡೆಯುವ ಏಕೈಕ ಶಕ್ತಿ ಅರುಂಧತಿಯಲ್ಲಿದೆ. ಅರುಂಧತಿ ಮತ್ತೆ ಹೇಗೆ ಹುಟ್ಟಿ ಬರುತ್ತಾಳೆ. ಬೊಮ್ಮಾಲಿಯ ಕೊನೆಯಾಗೋದು ಹೇಗೆ ಅನ್ನೋದನ್ನು ತೋರಿಸುವ ಅದ್ಭುತ ಚಿತ್ರವಿದು.

ಎರ್ಜಾ (Ezra)
ಭಾಷೆ- ಮಲಯಾಳಂ

ಪ್ರಿಯಾ ಮತ್ತು ಅವಳ ಪತಿ ಹೊಸ ನಗರಕ್ಕೆ ಬಂದಿರುತ್ತಾರೆ. ಆದರೆ ಪ್ರಿಯಾಳಿಗೆ ತನ್ನ ಹೊಸ ಮನೆಗೆ ಹೊಂದಿಕೊಳ್ಳಲು ಸಾಧ್ಯವಾಗೋದೇ ಇಲ್ಲ. ಒಂದು ದಿನ ಶಾಪಿಂಗ್ ಮಾಡುವಾಗ, ಆಕೆ ತನ್ನ ಮನೆಗೆ ಪ್ರಾಚೀನ ಪೆಟ್ಟಿಗೆಯೊಂದನ್ನ ತರುತ್ತಾಳೆ. ಈ ಪೆಟ್ಟಿಗೆಯನ್ನು ತೆರೆದ ತಕ್ಷಣ, ಅವಳ ಸುತ್ತಲೂ ವಿಷಯಗಳು ಬದಲಾಗುತ್ತವೆ. ಈ ಪೆಟ್ಟಿಗೆಯಲ್ಲಿ ಎರ್ಜಾನ ಭೂತವಿರುತ್ತದೆ. ಇದು ಹೇಗೆ ಅವರಿಬ್ಬರನ್ನು ಕಾಡುತ್ತದೆ ಅನ್ನೋದೆ ಕಥೆ. 

ಶಬ್ ಭುತೂರ್ (Shabh Bhuture)
ಭಾಷೆ- ಬಂಗಾಳಿ
ಅನಿಕೇತ್ ಎಂಬ ಯುವಕನ ತಂದೆ ಮ್ಯಾಗಜಿನ್ ಒಂದನ್ನು ನಡೆಸುತ್ತಿರುತ್ತಾರೆ. ಅದರಲ್ಲಿ ಅವರು ವಿಚಿತ್ರ ಘಟನೆಗಳ ಬಗ್ಗೆ ಬರೆಯುತ್ತಾರೆ. ಅವನ ಮರಣದ ನಂತರ, ಅನಿಕೇತ್ ಪತ್ರಿಕೆಯನ್ನು ಮುಚ್ಚಲು ಪ್ರಯತ್ನಿಸುತ್ತಾನೆ, ಆದರೆ ಹಳ್ಳಿಯ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ವಿಚಿತ್ರ ಘಟನೆಗಳ ಬಗ್ಗೆ ಅನಿಕೇತ್ ಬಳಿ ಹೇಳ್ತಾಳೆ. ಇವೆಲ್ಲದರ ಹಿಂದೆ ಏನೋ ನಿಗೂಢವಾದದ್ದು ಇದೆ ಎಂದು ಅನಿಕೇತ್ ಅರ್ಥ ಮಾಡಿಕೊಳ್ಳುತ್ತಾನೆ. ಇದೇ ಕಥೆಯ ಮೂಲ.

ಯು-ಟರ್ನ್ (U turn)
ಭಾಷೆ- ಕನ್ನಡ

ಈ ಚಿತ್ರದ ರಿಮೇಕ್ ಅನ್ನು ಬಾಲಿವುಡ್, ಟಾಲಿವುಡ್, ಕಾಲಿವುಡ್ ನಲ್ಲೂ ಮಾಡಲಾಗಿದೆ. ಇದರಲ್ಲಿ ಶ್ರದ್ಧಾ ಶ್ರೀನಾಥ್ ಮುಖ್ಯ ಪಾತ್ರದಲ್ಲಿದ್ದಾರೆ. ಈ ಚಿತ್ರವು ರಸ್ತೆ ಅಪಘಾತದ ಕಥೆಯನ್ನು ಹೊಂದಿದೆ, ಅದು ಕೆಲವು ವಿಚಿತ್ರ ತಿರುವುಗಳನ್ನು ತೆಗೆದುಕೊಳ್ಳುತ್ತದೆ. ಎಲ್ಲಾ ಅಪಘಾತಗಳು ಈ ಚಿತ್ರದಲ್ಲಿ ಯು-ಟರ್ನ್ ಗೆ ಸಂಬಂಧಿಸಿವೆ, ಆದರೆ ಇದು ಏಕೆ ನಡೆಯುತ್ತಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇರೋದಿಲ್ಲ. ಇದೊಂದು ಸಸ್ಪೆನ್ಸ್ ಚಿತ್ರವಾಗಿದೆ. 

Latest Videos

click me!