ಬಾಲಿವುಡ್ ಆಪ್ತಮಿತ್ರರು… ಇವರ ಡಿವೋರ್ಸ್ ಆಗಿದ್ದು ಜೊತೆಗೆ… ಇಹಲೋಕ ತ್ಯಜಿಸಿದ್ದು ಒಂದೇ ದಿನ!

Published : Apr 30, 2025, 05:11 PM ISTUpdated : Apr 30, 2025, 05:25 PM IST

ಬಾಲಿವುಡ್ ಸೂಪರ್‌ಸ್ಟಾರ್ ವಿನೋದ್ ಖನ್ನಾ ಮತ್ತು ಫಿರೋಜ್ ಖಾನ್ ಅವರ ಸ್ನೇಹ ಎಲ್ಲರಿಗು ತಿಳಿದದ್ದೇ, ಆದರೆ ಇವರ ಜೀವನದಲ್ಲಿ ಒಂದೇ ರೀತಿಯ ಘಟನೆಗಳು ಸಹ ಒಟ್ಟೊಟ್ಟಿಗೆ ನಡೆಯಿತು ಅಂದ್ರೆ ನಂಬ್ತೀರಾ?   

PREV
17
ಬಾಲಿವುಡ್ ಆಪ್ತಮಿತ್ರರು… ಇವರ ಡಿವೋರ್ಸ್ ಆಗಿದ್ದು ಜೊತೆಗೆ… ಇಹಲೋಕ ತ್ಯಜಿಸಿದ್ದು ಒಂದೇ ದಿನ!

ಕೆಲವು ಬೆಸ್ಟ್ ಫ್ರೆಂಡ್ಸ್ ಗಳ  (best friends)ಜೀವನದಲ್ಲಿ ಹೇಗಿರುತ್ತೆ ಅಂದ್ರೆ, ಅವರ ಹುಟ್ಟುಹಬ್ಬ ಒಂದೇ ದಿನ ಆಗಿರುತ್ತೆ,  ಅವರ ಹೆಸರುಗಳು ಸಹ ಒಂದೇ ಆಗಿರುತ್ತೆ, ಆದರೆ ಎಲ್ಲಾದರು ನೀವು ಬೆಸ್ಟ್ ಫ್ರೆಂಡ್ಸ್ ಗಳು ಒಂದೇ ದಿನ ಸಾವನ್ನಪ್ಪಿರೋದನ್ನು ಕೇಳಿದ್ದೀರಾ? ಇದು ಕಾಕತಾಳೀಯ. ಕೆಲವೊಮ್ಮೆ ಕಾಕತಾಳೀಯವು ತುಂಬಾ ವಿಚಿತ್ರವಾಗಿರುತ್ತದೆ. ತಮ್ಮ ಸಾವು ಮತ್ತು ವಿಚ್ಛೇದನದ ದಿನವನ್ನು ಒಟ್ಟಿಗೆ ಆಯ್ಕೆ ಮಾಡಿದ ಬಾಲಿವುಡ್‌ನ ಬೆಸ್ಟ್ ಫ್ರೆಂಡ್ಸ್ ಬಗ್ಗೆ ಇಲ್ಲಿದೆ ಮಾಹಿತಿ. 
 

27

ಬಾಲಿವುಡ್ ಬೆಸ್ಟ್ ಫ್ರೆಂಡ್ಸ್
ವಿನೋದ್ ಖನ್ನಾ (Vinod Khanna) ಮತ್ತು ಫಿರೋಜ್ ಖಾನ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ - ಶಂಕರ್ ಶಂಭು, ಕುರ್ಬಾನಿ, ದಯಾವಾನ್ ಇತ್ಯಾದಿ. ಇವರಿಬ್ಬರು ಜೊತೆಯಾಗಿ ನಟಿಸಿದ ಸಿನಿಮಾಗಳು . ಈ ಸೂಪರ್‌ಸ್ಟಾರ್‌ಗಳು ಕೇವಲ ಒಟ್ಟಿಗೆ ಸಿನಿಮಾ ಮಾಡಿರೋದು ಮಾತ್ರವಲ್ಲ, ಉತ್ತರ ಸ್ನೇಹಿತರೂ ಕೂಡ ಆಗಿದ್ದರು. ಇಬ್ಬರೂ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. 
 

37

ಡಿವೋರ್ಸ್ ಪಡೆದದ್ದು ಒಂದೇ ವರ್ಷ
1985 ರಲ್ಲಿ ವಿನೋದ್ ಖನ್ನಾ ಗೀತಾಂಜಲಿಯಿಂದ ವಿಚ್ಛೇದನ ಪಡೆದರು. ಕಾಕತಾಳೀಯವೆಂಬಂತೆ, ಫಿರೋಜ್ ಖಾನ್ (Firoz Khan) ಕೂಡ ಅದೇ ವರ್ಷದಲ್ಲಿ ತನ್ನ ಪತ್ನಿ ಸುಂದರಿಗೆ ವಿಚ್ಛೇದನ ನೀಡಿ ಹೊಸ ಜೀವನವನ್ನು ಪ್ರಾರಂಭಿಸಿದರು.

47

ಸಾವನ್ನಪ್ಪಿದ್ದೂ ಕೂಡ ಒಂದೇ ದಿನ
ವರ್ಷಗಳು ಬೇರೆ ಬೇರೆಯಾಗಿದ್ದರೂ  ವಿನೋದ್ ಖನ್ನಾ ಮತ್ತು ಫಿರೋಜ್ ಖಾನ್ ಎನ್ನುವ ಇಬ್ಬರು ಬೆಸ್ಟ್ ಫ್ರೆಂಡ್ಸ್  ಒಂದೇ ದಿನಾಂಕ ಮತ್ತು ತಿಂಗಳಲ್ಲಿ ನಿಧನರಾದರು.  ಇದು ಅಚ್ಚರಿ ಪಡುವಂತಹ ವಿಷಯವೇ ಸರಿ. 

57

ಸೂಪರ್‌ಸ್ಟಾರ್ ವಿನೋದ್ ಖನ್ನಾ
ವಿನೋದ್ ಖನ್ನಾ ಅವರ ಕಾಲದಲ್ಲಿ ಆಕರ್ಷಕ ವ್ಯಕ್ತಿಯಾಗಿದ್ದರು, ಜನರು ಅವರ ನಟನೆಯನ್ನು ಮೆಚ್ಚಿದ್ದಲ್ಲದೆ, ಅಭಿಮಾನಿಗಳು ಅವರ ಮೋಡಿಗೆ ಹುಚ್ಚರಾಗಿದ್ದರು. 1986 ರಲ್ಲಿ ಸುನಿಲ್ ದತ್ ನಿರ್ಮಿಸಿದ ಅದುರ್ಥಿ ಸುಬ್ಬಾ ರಾವ್ ಅವರ ರೊಮ್ಯಾಂಟಿಕ್ ಥ್ರಿಲ್ಲರ್ 'ಮನ್ ಕಾ ಮೀತ್‌'ನಲ್ಲಿ ವಿನೋದ್ ಖನ್ನಾ ಪೋಷಕ ಪಾತ್ರದಲ್ಲಿ ಪಾದಾರ್ಪಣೆ ಮಾಡಿದರು. ನಂತರ ಅವರು ಸೂಪಾರ್ ಸ್ಟಾರ್ (Super Star) ಆಗಿ ಹೊರ ಹೊಮ್ಮಿದರು. 

67

ಫಿರೋಜ್ ಖಾನ್  
ಮತ್ತೊಂದೆಡೆ, ಫಿರೋಜ್ ಖಾನ್ 1960 ರಲ್ಲಿ ದೀದಿ ಚಿತ್ರದಲ್ಲಿ ಎರಡನೇ ನಾಯಕನಾಗಿ ಪಾದಾರ್ಪಣೆ ಮಾಡಿದರು ಮತ್ತು ಅವರು ಕ್ಯಾಮೆರಾ ಮುಂದೆ ಮತ್ತು ಹಿಂದೆ ಕೆಲಸ ಮಾಡಿ ಸ್ವತಃ ತಾರಾಪಟ್ಟವನ್ನು ಗಳಿಸಿದರು.
 

77

ಏಪ್ರಿಲ್ 27 ರಂದು ನಿಧನ
ಫಿರೋಜ್ ಖಾನ್ ಮತ್ತು ವಿನೋದ್ ಖನ್ನಾ ಇಬ್ಬರೂ ಒಂದೇ ದಿನ, ಏಪ್ರಿಲ್ 27 ರಂದು ನಿಧನರಾದರು ಎಂಬುದು ಕಾಕತಾಳೀಯ. ಫಿರೋಜ್ ಖಾನ್ 2009 ರಲ್ಲಿ ಶ್ವಾಸಕೋಶದ ಕ್ಯಾನ್ಸರ್ (lungs cancer)ನಿಂದ ನಿಧನರಾದರು, ಮತ್ತು ವಿನೋದ್ ಖನ್ನಾ 2017 ರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುತ್ತಾ ನಿಧನರಾದರು. ವರ್ಷಗಳು ಬೇರೆ ಬೇರೆಯಾಗಿದ್ದವು, ಆದರೆ ಇಬ್ಬರೂ ಒಂದೇ ದಿನವನ್ನು ಆರಿಸಿಕೊಂಡರು.
 

Read more Photos on
click me!

Recommended Stories