Malaika Arora: ಚಳಿಗಾಲದಲ್ಲೂ ಟೆಂಪರ್‌ ಹೆಚ್ಚಿಸಿತು ಮಲೈಕಾ ಹಾಟ್‌ ಬ್ಯೂಟಿ: ಕಂಗಾಲಾದ ಪಡ್ಡೆಹೈಕ್ಳು!

Published : Nov 27, 2023, 03:00 AM IST

ಮಾಡೆಲ್, ನಟಿ ಮಲೈಕಾ ಅರೋರಾ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ ಅನಿಸುತ್ತೆ. ಬಾಲಿವುಡ್‌ ಹಾಟ್‌ ಡಿವಾ ಬಿ-ಟೌನ್‌ನಲ್ಲಿ ತಮ್ಮ ಸೌಂದರ್ಯದಿಂದಲೇ ಗಮನಸೆಳೆಯುತ್ತಿದ್ದಾಳೆ. ಇದೀಗ ಮಲೈಕಾ ಹಾಟ್‌ ಫೋಟೋಸ್‌ ಇಂಟರ್‌ನೆಟ್‌ ಅನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ.

PREV
16
Malaika Arora: ಚಳಿಗಾಲದಲ್ಲೂ ಟೆಂಪರ್‌ ಹೆಚ್ಚಿಸಿತು ಮಲೈಕಾ ಹಾಟ್‌ ಬ್ಯೂಟಿ: ಕಂಗಾಲಾದ ಪಡ್ಡೆಹೈಕ್ಳು!

ಮಲೈಕಾ ಅರೋರಾ ಅವರು ಬಾಲಿವುಡ್​ನಲ್ಲಿ ಅತ್ಯಂತ ಬೇಡಿಕೆಯ ನಟಿ ಹಾಗೂ ಮಾಡೆಲ್. ಮಾಡೆಲ್, ನಟಿ, ಯೋಗ ಪಟುವಾಗಿ ಗುರುತಿಸಿಕೊಂಡಿರುವ ಈ ಫಿಟ್ನೆಸ್ ಫ್ರೀಕ್ ಬ್ಯೂಟಿ ದಿನ ಹೋದಂತೆ ಹೆಚ್ಚುತ್ತಿದೆ.

26

ಇತ್ತೀಚೆಗೆ ಮಲೈಕಾ ಗೋಲ್ಡನ್ ಕಲರ್ ಹೈಸ್ಲಿಟ್ ಡ್ರೆಸ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಶೂಟ್​ನಲ್ಲಿ ಕಂಪ್ಲೀಟ್ ಗ್ಲಾಮರ್ ಶೋ ರಿವೀಲ್ ಆಗಿದೆ. ಸದ್ಯ ಈ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

36

ಫೋಟೋಸ್ ನೋಡಿದ ನೆಟ್ಟಿಗರು ಫೈರ್ ಎಮೋಜಿ ಕಮೆಂಟ್ ಮಾಡುತ್ತಿದ್ದು, ಅಷ್ಟರ ಮಟ್ಟಿಗೆ ಮಲೈಕಾ ಅವರು ಸೌಂದರ್ಯದಿಂದ ಪ್ರೇಕ್ಷಕರನ್ನು ಪ್ರಭಾವಿಸುತ್ತಾರೆ. ಅವರ ಫೋಟೋಗಳು ಪೋಸ್ಟ್ ಮಾಡಿದ ತಕ್ಷಣ ವೈರಲ್ ಆಗುತ್ತವೆ.

46

50 ವರ್ಷದಲ್ಲಿರುವ ಮಲೈಕಾ ಅರೋರಾ ಅವರ ವಯಸ್ಸನ್ನು ಯಾರೂ ನಂಬಲಾರರು. ಬಹಳಷ್ಟು ಯುವನಟಿಯರಿಗೇ ಸೆಡ್ಡು ಹೊಡೆಯುವಂತಿದ್ದಾರೆ ಈ ಬ್ಯೂಟಿ. ತನಗಿಂತ ಕಿರಿಯ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

56

ಮಲೈಕಾ ಅರೋರಾ ಈಗ ಸಿನಿಮಾಗಳಿಗಿಂತಲೂ ಅರ್ಜುನ್ ಕಪೂರ್ ವಿಚಾರದಲ್ಲಿಯೇ ಹೆಚ್ಚು ಸುದ್ದಿಯಲ್ಲಿ ಇರುತ್ತಾರೆ. ಹೊಸ ರೀತಿಯ ಫೋಟೋ ಶೂಟ್ ಮೂಲಕವೂ ಎಲ್ಲರ ದಿಲ್ ಅಲ್ಲಿ ಹಲ್ ಚಲ್‌ ಎಬ್ಬಿಸುತ್ತಲೇ ಇರುತ್ತಾರೆ.

66

ಮಲೈಕಾ ಅರೋರಾ ಅವರು ಮಾಡೆಲಿಂಗ್ ಹಾಗೂ ನಟನೆಯನ್ನು ಬಿಟ್ಟು ರಿಯಾಲಿಟಿ ಶೋಗಳ ಜಡ್ಜ್ ಆಗಿಯೂ ಭಾಗವಹಿಸುತ್ತಿದ್ದಾರೆ. ಅವರು ಡ್ಯಾನ್ಸ್ ಶೋಗಳಿಗೆ ತೀರ್ಪುಗಾರರಾಗಿ ಭಾಗವಹಿಸಿ ಉತ್ತಮ ಸಂಭಾವನೆ ಗಳಿಸುತ್ತಾರೆ.

Read more Photos on
click me!

Recommended Stories