ಬಾಲಿವುಡ್ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಜೊತೆ ಆಕ್ಟ್ ಮಾಡೋಕೆ ನೋ ಎಂದ ನಟಿಯರಿವರು!

First Published | Oct 7, 2023, 12:49 PM IST

ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ನಟರಲ್ಲಿ ಒಬ್ಬರು. ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಲು ಯಾರೂ ಸಹ ಬಯಸುವುದಿಲ್ಲ. ಆದ್ರೆ ಬಾಲಿವುಡ್‌ನ ಕೆಲವು ನಟಿಯರು ಸಲ್ಮಾನ್ ಜೊತೆ ನಟಿಸೋಕೆ ನೋ ಅಂದಿದ್ರು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ಹೆಚ್ಚು ಬೇಡಿಕೆಯಿರುವ ನಟರಲ್ಲಿ ಒಬ್ಬರು. ಅವರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಲು ಯಾರೂ ಸಹ ಬಯಸುವುದಿಲ್ಲ. ಅದರಲ್ಲೂ ಹೊಸಬರು ಸಲ್ಮಾನ್‌ ಸಿನಿಮಾದಲ್ಲಿ ಅಭಿನಯಿಸೋಕೆ ಕಾತುರದಿಂದ ಕಾಯ್ತಿರ್ತಾರೆ. ಆದ್ರೆ ಬಾಲಿವುಡ್‌ನ ಕೆಲವು ನಟಿಯರು ಸಲ್ಮಾನ್ ಜೊತೆ ನಟಿಸೋಕೆ ನೋ ಅಂದಿದ್ರು ಅನ್ನೋದು ನಿಮ್ಗೆ ಗೊತ್ತಿದ್ಯಾ?

ಕೇವಲ ನಟನೆ ಮಾತ್ರವಲ್ಲದೆ ಸಲ್ಮಾನ್ ಖಾನ್ ಹಲವು ವಿವಾದಗಳಲ್ಲೂ ಸಿಲುಕಿ ಹಾಕಿಕೊಂಡಿದ್ದಾರೆ. ಹಿಟ್ ಆಂಡ್ ರನ್ ಕೇಸ್‌, ಕೃಷ್ಣಮೃಗ ಬೇಟೆ ಪ್ರಕರಣದಲ್ಲೂ ನಟನ ಹೆಸರು ಕೇಳಿ ಬಂದಿತ್ತು. ಹಲವು ನಟಿಯರ ಜೊತೆ ಸಹ ಬ್ಯಾಡ್‌ ಬಾಯ್ ಹೆಸರು ಥಳುಕು ಹಾಕಿಕೊಂಡಿತ್ತು.

Tap to resize

ಐಶ್ವರ್ಯಾ ರೈ
ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಬಾಲಿವುಡ್‌ನ ಪ್ರಸಿದ್ಧ ಜೋಡಿ ಎಂದು ಕರೆಯಲ್ಪಡುತ್ತಿದ್ದರು. 1999ರಲ್ಲಿ ಅವರು 'ಹಮ್ ದಿಲ್ ದೇ ಚುಕೆ ಸನಮ್' ಎಂಬ ಮೂವಿಯಲ್ಲಿ ಜೊತೆಯಾಗಿ ನಟಿಸಿದ ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆದ್ರೆ 2002ರಲ್ಲಿ ಕೆಟ್ಟದಾದ ಘಟನೆ ನಡೆದು ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಘಟನೆಯಿಂದ ತುಂಬಾ ನೊಂದಿದ್ದ ಐಶ್ವರ್ಯಾ ರೈ ಮುಂದಿನ ಯಾವುದೇ ಯೋಜನೆಗಳಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದೀಪಿಕಾ ಪಡುಕೋಣೆ
ದೀಪಿಕಾ ಮತ್ತು ಸಲ್ಮಾನ್ ಅವರ ಅಭಿಮಾನಿಗಳು ಅನೇಕ ವರ್ಷಗಳಿಂದ ಸಿನಿಮಾದಲ್ಲಿ ಇವರಿಬ್ಬರ ಸಿಜ್ಲಿಂಗ್ ಕೆಮಿಸ್ಟ್ರಿಯನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ದೀಪಿಕಾ ಮತ್ತು ಸಲ್ಮಾನ್ ನಾಯಕ-ನಾಯಕಿಯಾಗಿ ಹಲವಾರು ಪ್ರಾಜೆಕ್ಟ್‌ಗಳನ್ನು ಮಾಡಲು ನಿರ್ಮಾಪಕರು ಮುಂದೆ ಬಂದಿದ್ದರು. ಆದರೆ ದೀಪಿಕಾ ಪಡುಕೋಣೆ ಎಲ್ಲಾ ಸಿನಿಮಾಗಳನ್ನು ರಿಜೆಕ್ಟ್ ಮಾಡುತ್ತಾ ಬಂದಿದ್ದಾರೆ. ವರದಿಯ ಪ್ರಕಾರ, ದೀಪಿಕಾ ಸಲ್ಮಾನ್ ಖಾನ್ ವಿರುದ್ಧದ  5 ಚಿತ್ರಗಳನ್ನು ತಿರಸ್ಕರಿಸಿದ್ದಾರೆ ಎನ್ನಲಾಗ್ತಿದೆ. ಅದರಲ್ಲಿ 'ಸುಲ್ತಾನ್' ಸಿನಿಮಾ ಕೂಡಾ ಸೇರಿದೆ.

ಕಂಗನಾ ರಣಾವತ್‌
ವಿವಾದಗಳ ರಾಣಿ ಕಂಗನಾ ರಣಾವತ್ ಇದುವರೆಗೆ ಬಾಲಿವುಡ್‌ನ ಯಾವುದೇ ಖಾನ್ ಜೊತೆ ಕೆಲಸ ಮಾಡಿಲ್ಲ. ಖಾನ್‌ಗಳ ಜೊತೆ ಕೆಲಸ ಮಾಡಿದರೆ ಚಿತ್ರರಂಗದಲ್ಲಿ ಯಾವುದೇ ಭವಿಷ್ಯವಿಲ್ಲ ಎಂದು ಅವರು ಒಮ್ಮೆ ಹೇಳಿದ್ದರು. 
 

ಊರ್ಮಿಳಾ ಮಾತೋಂಡ್ಕರ್
ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ 'ಜನಮ್ ಸಂಜಾ ಕರೋ' ಚಿತ್ರದಲ್ಲಿ ಊರ್ಮಿಳಾ ಮತ್ತು ಸಲ್ಮಾನ್ ಕಾಣಿಸಿಕೊಂಡರು. ವಿವಿಧ ವರದಿಗಳ ಪ್ರಕಾರ, ಆ ನಂತರ ಊರ್ಮಿಳಾ ಸ್ವತಃ ಸೂಪರ್‌ಸ್ಟಾರ್‌ನೊಂದಿಗೆ ಕೆಲಸ ಮಾಡಲು ನಿರಾಕರಿಸುತ್ತಾ ಬಂದರು ಎನ್ನಲಾಗುತ್ತಿದೆ.

ಸೋನಾಲಿ ಬೇಂದ್ರೆ
ಸಲ್ಮಾನ್ ಖಾನ್ ಮತ್ತು ಸೋನಾಲಿ ಬೇಂದ್ರೆ ಅವರ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಗಿತ್ತು. ವಿವಾದಾತ್ಮಕ ಕೃಷ್ಣಮೃಗ ಬೇಟೆಯ ಪ್ರಕರಣದ ನಂತರ ಸೋನಾಲಿ ಬೇಂದ್ರೆ ಸಲ್ಮಾನ್‌ ಖಾನ್‌ರೊಂದಿಗೆ ಯಾವುದೇ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡಲ್ಲಿಲ್ಲ.

Latest Videos

click me!