ಅರೆರೆ... ನಟಿ ತಮನ್ನಾಗೆ ಏನಾಯ್ತು: ಜೀವಂತ ಸಮಾಧಿ ಸ್ಥಿತಿಯಲ್ಲಿ ಮಿಲ್ಕಿ ಬ್ಯೂಟಿ!

Published : Oct 07, 2023, 08:27 AM IST

ಬಹುಭಾಷಾ ನಟಿ ತಮನ್ನಾ ಭಾಟಿಯಾ ರಜೆಯ ಮಜಾ ಅನುಭವಿಸುತ್ತಿದ್ದಾರೆ. ಕಾವಾಲಯ್ಯ ಸಾಂಗ್‌ ಮೂಲಕ ಸದ್ದು ಮಾಡಿದ್ದ ಮಿಲ್ಕಿ ಬ್ಯೂಟಿ ಏಕಾಎಕಿ ಜೀವಂತ ಸಮಾಧಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

PREV
18
ಅರೆರೆ... ನಟಿ ತಮನ್ನಾಗೆ ಏನಾಯ್ತು: ಜೀವಂತ ಸಮಾಧಿ ಸ್ಥಿತಿಯಲ್ಲಿ ಮಿಲ್ಕಿ ಬ್ಯೂಟಿ!

ನಟಿ ತಮನ್ನಾ ಭಾಟಿಯಾ ಸಿನಿಮಾದಿಂದ ಸ್ವಲ್ಪ ಬಿಡುವು ತೆಗೆದುಕೊಂಡಿದ್ದು, ರಜೆಯ ಮಜಾ ಅನುಭವಿಸುತ್ತಿದ್ದಾರೆ. ಜಿಮ್‌, ಸ್ವಿಮ್‌, ಫನ್‌ ಅಂತ ರಜೆಯನ್ನು ಆನಂದಿಸುತ್ತಿದ್ದಾರೆ. ಅಲ್ಲದೆ, ಈ ಕುರಿತು ತಮ್ಮ ಫ್ಯಾನ್ಸ್‌ ಜೊತೆ ಚಿತ್ರಗಳನ್ನು ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

28

ಇದೀಗ ಜಿಮ್ ಲುಕ್‌ಗಳ ಜೊತೆಗೆ ಬೀಚ್ ಲೊಕೇಶನ್ ಸ್ಟಿಲ್‌ಗಳನ್ನು ತಮನ್ನಾ ಹಂಚಿಕೊಂಡಿದ್ದಾರೆ. ತನ್ನ ಹಾಲಿನ ಸೌಂದರ್ಯವನ್ನು ಕಡಲತೀರದ ಮರಳಿನಲ್ಲಿ ಬಚ್ಚಿಟ್ಟು ವಿವಿಧ ಭಂಗಿಗಳಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. 

38

ದಕ್ಷಿಣ ಭಾರತದ ಚಿತ್ರಗಳ ಮೂಲಕವೇ ಪ್ರಸಿದ್ಧಿ ಪಡೆದುಕೊಂಡ ತಾರೆ ತಮನ್ನಾ ಭಾಟಿಯಾ. ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಈಕೆ ದೊಡ್ಡ ಸ್ಟಾರ್‌.

48

ಇದರ ನಡುವೆ ಮಿಲ್ಕಿ ಬ್ಯೂಟಿ ಬಾಲಿವುಡ್‌ನಲ್ಲಿ ಹಲವು ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಅಲ್ಲಿ ಯಶಸ್ಸು ಕಾಣಲು ಮಾತ್ರ ತಮನ್ನಾ ಪರದಾಡುತ್ತಿದ್ದಾರೆ.

58

ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ ಚಿತ್ರಗಳಿಗಿಂತ ಹೆಚ್ಚಾಗಿ ತಮನ್ನಾ ಭಾಟಿಯಾ ವೆಬ್‌ ಸಿರೀಸ್‌ಗಳಲ್ಲಿ ನಟನೆ ಮಾಡುತ್ತಿದ್ದಾರೆ. ವೆಬ್‌ ಸಿರೀಸ್‌ಗಳಲ್ಲಿ ಅವರ ಮಾದಕ ಸೀನ್‌ಗಳು ವೈರಲ್‌ ಆಗಿವೆ.

68

ತಮನ್ನಾ ಕೊನೆಯ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಆಕ್ರಿ ಸಚ್‌ ಎನ್ನುವ ವೆಬ್‌ ಸಿರೀಸ್‌ನಲ್ಲಿ, ಈ ನಡುವೆ ಅವರ ಬಾಂದ್ರಾ ಮಲಯಾಳಂ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗುತ್ತಿದೆ.

78

ಅದರೊಂದಿಗೆ ಸಿ. ಸುಂದರ್‌ ಅವರ ಅರಮನೈ-4 ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಹಿಂದಿ ಚಿತ್ರ ವೇದಾದಲ್ಲೂ ಅವರು ಹೀರೋಯಿನ್‌ ಆಗಿದ್ದಾರೆ. 

88

ಬಾಂದ್ರಾ ತಮನ್ನಾ ಭಾಟಿಯಾ ಅವರ ಮೊದಲ ಮಲಯಾಳಂ ಸಿನಿಮಾ ಆಗಿದ್ದು, ಅರುಣ್‌ ಗೋಪಿ ಇದರ ನಿರ್ದೇಶಕರಾಗಿದ್ದಾರೆ. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ.

Read more Photos on
click me!

Recommended Stories