ಸಲ್ಮಾನ್ ಮತ್ತು ಐಶ್ವರ್ಯಾ “ಹಮ್ ದಿಲ್ ದೇ ಚುಕೆ ಸನಮ್” ಸಿನಿಮಾದಲ್ಲಿ ನಟಿಸಿದ್ರು. ಆಮೇಲೆ ಲವ್, ಬ್ರೇಕಪ್. ಬ್ರೇಕಪ್ ಆದ್ಮೇಲೆ ಐಶ್ವರ್ಯಾ ಸಲ್ಮಾನ್ ಜೊತೆ ಸಿನಿಮಾ ಮಾಡಿಲ್ಲ.
“ಹಮ್ ಸಾಥ್ ಸಾಥ್ ಹೈ” ಸಿನಿಮಾದಲ್ಲಿ ಸಲ್ಮಾನ್ & ಸೋನಾಲಿ ಜೋಡಿ ಸೂಪರ್ ಹಿಟ್. ಆದ್ರೆ ಕಪ್ಪು ಜಿಂಕೆ ಪ್ರಕರಣದ ನಂತರ ಸೋನಾಲಿ, ಸಲ್ಮಾನ್ ಜೊತೆ ನಟಿಸೋಕೆ ನಿರಾಕರಿಸಿದ್ರು.
ನಟಿ ಟ್ವಿಂಕಲ್ ಖನ್ನಾಗೆ “ಪ್ಯಾರ್ ಕಿಯಾ ತೋ ಡರ್ನಾ ಕ್ಯಾ” ಆಫರ್ ಬಂತು. ಆದ್ರೆ ಟ್ವಿಂಕಲ್ ಆ ಸಿನಿಮಾ ಮಾಡೋಕೆ ನೋ ಅಂದ್ರು.
ಪ್ರಿಯಾಂಕಾಗೆ “ಭಾರತ್” ಸಿನಿಮಾದಲ್ಲಿ ನಟಿಸೋಕೆ ಆಫರ್ ಬಂತು. ಮೊದಲಿಗೆ ಯೆಸ್ ಅಂದ್ರು, ಆಮೇಲೆ ನೋ ಅಂದ್ರು. ಕಾರಣ ಏನು ಅಂತ ಯಾರಿಗೂ ಗೊತ್ತಿಲ್ಲ.
ದೀಪಿಕಾ ಮತ್ತು ಸಲ್ಮಾನ್ ಒಟ್ಟಿಗೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ದೀಪಿಕಾ ಸಲ್ಮಾನ್ ಅವರ 5 ಸಿನಿಮಾಗಳನ್ನ ರಿಜೆಕ್ಟ್ ಮಾಡಿದ್ದಾರಂತೆ.
“ಜಾನಂ ಸಮ್ಜಾ ಕರೋ” ಸಿನಿಮಾದಲ್ಲಿ ಉರ್ಮಿಳಾ & ಸಲ್ಮಾನ್ ನಟಿಸಿದ್ರು. ಆ ಸಿನಿಮಾ ಫ್ಲಾಪ್ ಆಯ್ತು. ಅದಕ್ಕೆ ಉರ್ಮಿಳಾ ಸಲ್ಮಾನ್ ಜೊತೆ ಸಿನಿಮಾ ಮಾಡೋಕೆ ನೋ ಅಂದ್ರಂತೆ.
Govindaraj S