ಹೀರೋಯಿನ್ ಬಾಡಿ ಶೇಮಿಂಗ್ ಮಾಡಿ ಕೆಣಕಿದ್ದಕ್ಕೆ ಸಿಕ್ಸ್ ಪ್ಯಾಕ್ ಮಾಡಿಕೊಂಡ ಅಲ್ಲು ಅರ್ಜುನ್!

Published : May 03, 2025, 07:20 PM ISTUpdated : May 03, 2025, 07:32 PM IST

ಟಾಲಿವುಡ್‌ನಲ್ಲಿ ಮೊದಲ ಸಿಕ್ಸ್ ಪ್ಯಾಕ್ ಮಾಡ್ಕೊಂಡ ಹೀರೋ ಅಲ್ಲು ಅರ್ಜುನ್. ಬಾಡಿ ಬಿಲ್ಡಿಂಗ್, ಸಿಕ್ಸ್ ಪ್ಯಾಕ್ ಕೇವಲ ಬಾಲಿವುಡ್ ಹೀರೋಗಳಿಗೆ ಮಾತ್ರ ಸೀಮಿತ ಎಂದ ಹೀರೋಯಿನ್ ಮಾತಿನಿಂದ ಅಲ್ಲು ಸಿಕ್ಸ್ ಪ್ಯಾಕ್ ಮಾಡಿಕೊಂಡು ಸಿನಿಮಾಗೆ ಬಂದರು. ಆದರೆ, ಅಲ್ಲು ಅರ್ಜುನ್ ಕೆಣಕಿದ ಹೀರೋಯಿನ್ ಯಾರು?

PREV
15
ಹೀರೋಯಿನ್ ಬಾಡಿ ಶೇಮಿಂಗ್ ಮಾಡಿ ಕೆಣಕಿದ್ದಕ್ಕೆ ಸಿಕ್ಸ್ ಪ್ಯಾಕ್ ಮಾಡಿಕೊಂಡ ಅಲ್ಲು ಅರ್ಜುನ್!

ಕಳೆದ ಒಂದೂವರೆ ದಶಕದ ಹಿಂದೆ ದಕ್ಷಿಣ ಬಾರತದಲ್ಲಿ ದೇಹವನ್ನು ದಂಡಿಸಿ, ಸಿಕ್ಸ್ ಪ್ಯಾಕ್ ಮಾಡಿಕೊಂಡ ಹೀರೋಗಳೇ ಇರಲಿಲ್ಲ. ಆದರೆ, ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್ ಸೇರಿದಂತೆ ಹಲವು ನಟರು ಸಿಕ್ಸ್ ಪ್ಯಾಕ್ ಆಬ್ಸ್ ಮಾಡಿಕೊಂಡಿದ್ದರು. ಹೀಗಾಗಿ, ಮೊದಲು ಬಾಲಿವುಡ್ ಸಿನಿಮಾಗಳನ್ನೇ ಸಿನಿಮಾ ಅಂತ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿದ್ದರು. ದಕ್ಷಿಣದ ಸಿನಿಮಾಗಳನ್ನ ಇಡ್ಲಿ ಸಾಂಬಾರ್ ಸ್ಟೋರಿ ಅಂತ ಕಾಮೆಂಟ್ ಮಾಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ತೆಲುಗು, ತಮಿಳು ಸಿನಿಮಾಗಳ ಹೊಡೆತಕ್ಕೆ ಬಾಲಿವುಡ್ ಮೂಲೆಗುಂಪಾಗಿದೆ.

25

ಇನ್ನು ನಟಿಯೊಬ್ಬರು ಅಲ್ಲು ಅರ್ಜುನ್ ಬಳಿ ಬಂದು ಸಿಕ್ಸ್ ಪ್ಯಾಕ್ ಬಾಡಿ ಏನಿದ್ದರೂ ಬಾಲಿವುಡ್‌ಗೆ ಮಾತ್ರ ಸೀಮಿತ, ತೆಲಗು-ತಮಿಳು ಸೇರಿ ದಕ್ಷಿಣ ಭಾರತದ ನಟರು ಮಾಡಿಕೊಳ್ಳಲ್ಲ ಎಂದು ಕೆಣಕಿದ್ದರು.  ಟಾಲಿವುಡ್ ಹೀರೋಗಳಿಗೆ ಸಿಕ್ಸ್ ಪ್ಯಾಕ್ ಮಾಡೋಕೆ ಆಗಲ್ಲ ಎಂದು ಕಾಲೆಳೆದಿದ್ದರು. ಒಟ್ಟಾರೆ ಬಾಲಿವುಡ್ ಹೀರೋಗಳ ತರ ಬಾಡಿ ಬಿಲ್ಡ್ ಮಾಡೋಕೆ ಆಗಲ್ಲ ಅಂತ ಕಾಮೆಂಟ್ ಮಾಡಿದ್ದರು. ಇದರಿಂದ ಕೆಣಕಿದ ನಟಿಗೆ ತಿರುಗೇಟು ಕೊಡಲೆಂದೇ ಛಲ ತೊಟ್ಟು ಅಲ್ಲು ಅರ್ಜುನ್ ದೇಶಮುದುರು ಸಿನಿಮಾ ಟೈಮ್‌ ವೇಳೆಗೆ ಸಿಕ್ಸ್ ಪ್ಯಾಕ್ ಮಾಡಿ ತೋರಿಸಿದರು.

35

ಒಬ್ಬ ಹೀರೋಯಿನ್ ಕೆಣಕಿದ್ದಕ್ಕೆ ಸಿಕ್ಸ್ ಪ್ಯಾಕ್ ಮಾಡ್ಕೊಂಡೆ ಅಂತ ಐಕಾನ್ ಸ್ಟಾರ್ ಹೇಳಿದ್ದಾರೆ. 20 ವರ್ಷಗಳ ಹಿಂದೆ ಸೌತ್‌ನಲ್ಲಿ ಯಾವ ನಟನೂ ಮಾಡದ ಸಾಹಸ ಮಾಡಿದೆ ಅಂತ ನೆನಪಿಸಿಕೊಂಡಿದ್ದಾರೆ. ಇನ್ನು ನಾನು ಸಿನಿಮಾಗಾಗಿ ಯಾವುದೇ ಹೊಸ ಪ್ರಯತ್ನವನ್ನು ಮಾಡಬಲ್ಲೆ ಎಂಬುದನ್ನು ಸಾವಿರಾರು ಅಭಿಮಾನಿಗಳ ಮುಂದೆ ಹೇಳಿಕೊಂಡಿದ್ದಾರೆ.

45

ಯಾರಾದ್ರೂ ನಮ್ಮಿಂದ ಆಗಲ್ಲ ಅಂದ್ರೆ ಅದನ್ನ ಮಾಡಿ ತೋರಿಸೋ ಕಿಕ್‌ನೇ ಬೇರೆ ಅಂತ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳ ಮುಂದೆ ಹೇಳಿದ್ದಾರೆ. ಆದರೆ ಬಾಲಿವುಡ್ ನಟ ಸಿಕ್ಸ್ ಪ್ಯಾನ್ ಅನ್ನು ಹೊಗಳಿ, ದಕ್ಷಿಣದ ನಟರ ದೇಹದ ಬಗ್ಗೆ ಬಾಡಿ ಶೇಮಿಂಗ್ ಮಾಡಿದ್ದ ನಟಿ ಯಾರು ಅಂತ ಮಾತ್ರ ಅಲ್ಲು ಅರ್ಜುನ್ ರಿವೀಲ್ ಮಾಡಲಿಲ್ಲ.

55

2007ರಲ್ಲಿ ಬಿಡುಗಡೆಯಾದ ದೇಶಮುದುರು ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅಲ್ಲು ಅರ್ಜುನ್‌ರ ಹೊಸ ಲುಕ್‌ಗೆ ಜನ ಮೆಚ್ಚುಗೆ ಸೂಚಿಸಿದ್ದರು. ಗಂಗೋತ್ರಿ ಸಿನಿಮಾದಿಂದ ಇಂಡಸ್ಟ್ರಿಗೆ ಬಂದ ಬನ್ನಿ, ಪುಷ್ಪ ಸಿನಿಮಾದ ಮೂಲಕ ರಾಷ್ಟ್ರ ಪ್ರಶಸ್ತಿ ಗೆದ್ದಿದ್ದಾರೆ.

Read more Photos on
click me!

Recommended Stories