ದೀಪಾವಳಿಗೆ ಬಂದ ಮಿಂಚಿನುಡುಗೆ.. ಬಾಲಿವುಡ್ ನಟಿಯರ ದೇಸಿ-ಬೋಲ್ಡ್ ಲುಕ್‌ ಟ್ರೆಂಡ್‌ ಸೆಟ್ಟಿಂಗ್‌

Published : Oct 20, 2025, 12:58 PM IST

ಬೆಳಕಿನ ಹಬ್ಬಕ್ಕೆ ಹೊಳೆ ಹೊಳೆಯುವ ಮಾದಕ ಉಡುಗೆಗಳಲ್ಲಿ ಬಿ ಟೌನ್‌ ಬೆಡಗಿಯರ ಮೆರವಣಿಗೆ ಹೊರಟಿದೆ. ‘ದೇಸಿ ಟಚ್‌, ಬೋಲ್ಡ್‌ ಲುಕ್‌’ನ ಉಡುಗೆಗಳು ದೀಪಾವಳಿ ಹಬ್ಬಕ್ಕೆ ಮಾಲೆ ಪಟಾಕಿಯಂತೆ ಸೌಂಡ್‌ ಮಾಡ್ತಿವೆ.

PREV
16
ಬಿ ಟೌನ್‌ ಹುಡುಗಿಯರ ಲುಕ್‌

ದೀಪಾವಳಿ ಬಂದೇ ಬಿಟ್ಟಿದೆ! ಈ ದೊಡ್ಡ ಹಬ್ಬ ಬಂದರೆ ಬಿ ಟೌನ್‌ ಹುಡುಗಿಯರ ಲುಕ್‌, ಗೆಟಪ್‌ ನೋಡಿ ನೋಡಿ ಕಣ್ಣುಗಳೇ ಸುಸ್ತಾಗುತ್ತವೆ. ಅಷ್ಟು ವೆರೈಟಿಗಳು, ಸ್ಟೈಲ್‌ಗಳು.

26
ದೇಸಿ ಟಚ್‌ ಬೋಲ್ಡ್‌ ಲುಕ್‌

ಬಿ ಟೌನ್‌ನ ಜೆನ್‌ ಜೀ ಹುಡುಗಿಯರಾದ ಖುಷಿ ಕಪೂರ್‌, ಅನನ್ಯಾ ಪಾಂಡೆ, ಸುಹಾನಾ ಖಾನ್, ಶನಾಯ ಮೊದಲಾದವರು ಹಬ್ಬಕ್ಕೆಂದು ಧರಿಸಿದ ದೇಸಿ ಟಚ್‌ ಬೋಲ್ಡ್‌ ಲುಕ್‌ನ ಉಡುಗೆಗಳು ಸಖತ್‌ ಟ್ರೆಂಡಿಂಗ್‌ ಆಗಿವೆ.

36
ಬಾಲಿವುಡ್‌ನ ಖ್ಯಾತ ಡಿಸೈನರ್‌ ಮನೀಶ್‌ ಮಲ್ಹೋತ್ರ

ಈ ಹುಡುಗಿಯರ ಡ್ರೆಸ್‌ಗಳನ್ನೆಲ್ಲ ಡಿಸೈನ್‌ ಮಾಡಿರೋದು ಬಾಲಿವುಡ್‌ನ ಖ್ಯಾತ ಡಿಸೈನರ್‌ ಮನೀಶ್‌ ಮಲ್ಹೋತ್ರ. ಅನನ್ಯಾ ಪಾಂಡೆ ಗೋಲ್ಡನ್‌ ಲೆಹೆಂಗಾ ಚೋಲಿ ಸೆಟ್‌ ಬಂಗಾರದ ಬಣ್ಣದಲ್ಲಿದ್ದು, ಆಕೆಯ ಮೈ ಬಣ್ಣದೊಂದಿಗೆ ಸ್ಪರ್ಧೆಗೆ ಬಿದ್ದಂತಿದೆ.

46
ಸಾವಿರಾರು ಮುತ್ತು ರತ್ನಗಳ ವಿನ್ಯಾಸ

ಮುತ್ತು, ಮಣಿ, ಹರಳುಗಳ ದೆಸೆಯಿಂದ ಈ ಡ್ರೆಸ್‌, ಅದನ್ನು ತೊಟ್ಟ ಸುಂದರಿ; ಆಕಾಶದ ತಾರೆಯರ ಜೊತೆಗೇ ಕಾಂಪಿಟೀಶನ್‌ಗೆ ಬಿದ್ದಂತಿದೆ. ಬಾಲಿವುಡ್‌ ದಂತಕತೆ ಶ್ರೀದೇವಿ ಮಗಳು ಖುಷಿ ಕಪೂರ್‌ ಉಟ್ಟ ನಸು ಗುಲಾಬಿ ಬಣ್ಣದ ಸೀರೆಯ ತುಂಬೆಲ್ಲ ಸಾವಿರಾರು ಮುತ್ತು ರತ್ನಗಳ ವಿನ್ಯಾಸವಿದೆ.

56
ಮುತ್ತು ಮತ್ತು ಹರಳಿನ ವಿನ್ಯಾಸ

ಎಡ್ಜೀ ಎಸಿಮೆಟ್ರಿಕ್‌ ಹೆಮ್‌ ಬ್ಲೌಸ್ ಟ್ರೆಂಡಿ ಅನಿಸಿದ್ರೆ, ಕಿವಿಗೆ ಸ್ಟಡ್ಸ್‌ ಬಿಟ್ಟು ಮತ್ಯಾವ ಆಭರಣಗಳನ್ನೂ ಧರಿಸದೇ ಈ ಸುಂದರಿ ಉಡುಗೆಯಿಂದಲೇ ಗಮನಸೆಳೆಯುತ್ತಾರೆ. ಶನಾಯ ಕಪೂರ್‌ ಥರಿಸಿದ ಎನ್ಸೆಬಲ್‌ನಲ್ಲೂ ಮುತ್ತು ಮತ್ತು ಹರಳಿನ ವಿನ್ಯಾಸವಿದೆ.

66
ನೋಡುಗನ ಕಣ್ಣು, ಹೃದಯ ಕಂಗಾಲು

ಚಂದಿರ ಮಕ್ಕಳ ಹಾಗೋ, ಆಕಾಶದ ನಕ್ಷತ್ರಗಳ ಹಾಗೋ ಹೊಳೆಯುತ್ತಿರುವ ಈ ಮುಗುದೆಯ ಚೆಲುವನ್ನು ಉಡುಗೆಗಳು ಮತ್ತಷ್ಟು ಪ್ರಖರವಾಗಿಸಿ ನೋಡುಗನ ಕಣ್ಣು, ಹೃದಯ ಕಂಗಾಲಾಗುವಂತೆ ಮಾಡಿದ್ದು ಸುಳ್ಳಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories