ಕೌನ್‌ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ: ರಿಷಬ್ ಶೆಟ್ಟಿ

Published : Oct 20, 2025, 11:54 AM IST

‘ಕೌನ್‌ ಬನೇಗ ಕರೋಡ್‌ಪತಿ’ ಶೋಗೆ ರಿಷಬ್‌ ಶೆಟ್ಟಿ ತೆರಳಿದ್ದು ಅಲ್ಲಿ ಗೆದ್ದಿರುವ ಹಣವನ್ನು ದೈವ ನರ್ತಕರಿಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ. ಈ ಶೋದಲ್ಲಿ ಬರೋಬ್ಬರಿ 12.50 ಲಕ್ಷ ರು.ಗಳನ್ನು ರಿಷಬ್ ಗೆದ್ದಿದ್ದರು.

PREV
15
ಕೌನ್‌ ಬನೇಗ ಕರೋಡ್‌ಪತಿ

ಇತ್ತೀಚೆಗೆ ಅಮಿತಾಬ್‌ ಬಚ್ಚನ್ ಹೋಸ್ಟ್ ಮಾಡುವ ‘ಕೌನ್‌ ಬನೇಗ ಕರೋಡ್‌ಪತಿ’ ಶೋಗೆ ರಿಷಬ್‌ ಶೆಟ್ಟಿ ತೆರಳಿದ್ದು ಅಲ್ಲಿ ಗೆದ್ದಿರುವ ಹಣವನ್ನು ದೈವ ನರ್ತಕರಿಗೆ ಹಾಗೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದ್ದಾರೆ.

25
ರಿಷಬ್‌ ಫೌಂಡೇಶನ್‌

ಈ ಶೋದಲ್ಲಿ ಬರೋಬ್ಬರಿ 12.50 ಲಕ್ಷ ರು.ಗಳನ್ನು ರಿಷಬ್ ಗೆದ್ದಿದ್ದರು. ‘ನಾನು ರಿಷಬ್‌ ಫೌಂಡೇಶನ್‌ ಅನ್ನು ನಡೆಸುತ್ತಿದ್ದೇನೆ. ಕರೋಡ್‌ಪತಿ ಶೋದಲ್ಲಿ ಬಂದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕಾರ್ಯಕ್ಕೆ ಹಾಗೂ ದೈವ ನರ್ತಕರ ಏಳಿಗೆಗೆ ಬಳಸುತ್ತೇನೆ’ ಎಂದಿದ್ದಾರೆ.

35
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ

ಈ ವೇಳೆ ರಿಷಬ್‌ ಅವರು ಅಮಿತಾಬ್‌ ಅವರಿಗೆ ವಿಶೇಷ ಉಡುಗೊರೆಯನ್ನೂ ನೀಡಿದ್ದಾರೆ. ಅಮಿತಾಬ್‌, ‘ರಿಷಬ್‌ ಅವರೇ ನೀವು ಉಟ್ಟಿರುವಂಥಾ ಲುಂಗಿಯನ್ನು ನಾನು ಧರಿಸುವುದಕ್ಕೂ ಮುನ್ನ ಅದನ್ನು ಉಡುವುದನ್ನು ಕಲಿಯಬೇಕು. ಇಲ್ಲದೇ ಹೋದರೆ ಇಲ್ಲೇ ಏನಾದರೂ ಕಳಚಿ ಹೋದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ’ ಎಂದು ತಮಾಷೆ ಮಾಡಿದ್ದಾರೆ.

45
ಸಿನಿಮಾದ ಕಲೆಕ್ಷನ್‌ ಹೆಚ್ಚಿಸುವ ಸಾಧ್ಯತೆ

ಇನ್ನೊಂದೆಡೆ ಕಾಂತಾರ ಚಾಪ್ಟರ್‌ 1 ಸಿನಿಮಾದ ಯಶಸ್ಸಿನ ಓಟ ಮುಂದುವರಿದಿದೆ. ಸಿನಿಮಾವನ್ನು ಒಮ್ಮೆ ನೋಡಿ ಮೆಚ್ಚಿದ ಮಂದಿ ಮತ್ತೆ ಮತ್ತೆ ಥೇಟರಿಗೆ ಎಡತಾಕುತ್ತಿದ್ದಾರೆ. ಜೊತೆಗೆ ಈ ವಾರ ದೀಪಾವಳಿಯ ಭರ್ಜರಿ ರಜೆಯೂ ಸಿನಿಮಾದ ಕಲೆಕ್ಷನ್‌ ಹೆಚ್ಚಿಸುವ ಸಾಧ್ಯತೆ ಇದೆ.

55
ಕೆಜಿಎಫ್‌ 2 ದಾಖಲೆಯನ್ನೂ ಮುರಿಯುವ ಸಾಧ್ಯತೆ

ಸದ್ಯ ವಿಶ್ವಾದ್ಯಂತ ಅಂದಾಜು ರು.800 ಕೋಟಿ ಸಂಗ್ರಹಿಸಿರುವ ಸಿನಿಮಾ 1000 ಕೋಟಿ ಕ್ಲಬ್‌ ಸೇರಲು ಕ್ಷಣಗಣನೆ ಶುರುವಾಗಿದೆ. ಇದು ‘ಕೆಜಿಎಫ್‌ 2’ ದಾಖಲೆಯನ್ನೂ ಮುರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Read more Photos on
click me!

Recommended Stories