ಡೇಟಿಂಗ್ ಪ್ಲಾನ್ ಇದೆಯಾ? ಬಹುದಿನಗಳ ಬೇಡಿಕೆ ಈಡೇರಿಸಿದ ಸನ್ನಿ ಲಿಯೋನ್!

Published : Sep 14, 2023, 08:36 PM IST

ಸನ್ನಿ ಲಿಯೋನ್ ಪೋಸ್ಟ್, ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಾಗ ಹಲವರು ಸನ್ನಿ ಭೇಟಿ ಮಾಡಲು ಮಾತ್ರವಲ್ಲ ಡೇಟಿಂಗ್ ಕುರಿತು ಕೇಳಿದ್ದಾರೆ. ಬಹುದಿನಗಳ ಈ ಬೇಡಿಕೆಯನ್ನು ಸನ್ನಿ ಈಡೇರಿಸಿದ್ದಾರೆ. ಸನ್ನಿ ಲಿಯೋನ್ ಇದೀಗ ಡೇಟಿಂಗ್ ಆ್ಯಪ್‌ನಲ್ಲಿ ಸೇರಿಕೊಂಡಿದ್ದಾರೆ. ಇನ್ನೇನಿದ್ದರು ಚಾಟಿಂಗ್, ಡೇಟಿಂಗ್...!

PREV
17
ಡೇಟಿಂಗ್ ಪ್ಲಾನ್ ಇದೆಯಾ?  ಬಹುದಿನಗಳ ಬೇಡಿಕೆ ಈಡೇರಿಸಿದ ಸನ್ನಿ ಲಿಯೋನ್!

ಬಾಲಿವುಡ್ ನಟಿ ಸನ್ನಿ ಲಿಯೋನ್‌ಗೆ ಅಭಿಮಾನಿಗಳ ಬಳಗ ಹೆಚ್ಚಿದೆ. ಅದರಲ್ಲೂ ಸನ್ನಿಯನ್ನು ಆರಾಧಿಸುವ ಸಂಖ್ಯೆ ತುಸು ಹೆಚ್ಚೆ ಇದೆ. ಸನ್ನಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಾಗ ವಿಲ್ ಯು ಮ್ಯಾರಿ ಮಿ, ಡೇಟ್ ವಿಥ್ ಮಿ ಸೇರಿದಂತೆ ಹಲವು ಪ್ರಶ್ನೆಗಳು ತೂರಿ ಬಂದಿದೆ.

27

ನನ್ನ ಜೊತೆ ಡೇಟಿಂಗ್  ಮಾಡಿ, ಮದುವೆಯಾಗುತ್ತೀರಾ ಸೇರಿದಂತೆ ಹಲವು ಪ್ರಶ್ನೆಗಳನ್ನು ಸನ್ನಿ ಎದುರಿಸಿದ್ದಾರೆ. ಹೀಗಾಗಿ ಸನ್ನಿ ಈ ಕುರಿತು ಡೇಟಿಂಗ್ ಆ್ಯಪ್ ಮೂಲಕ ಚಾಟ್ ಮಾಡೋಣ ಎಂದು ಸುಮ್ಮನಾಗುತ್ತಿದ್ದರು. ಇದೀಗ ಈ ಮಾತು ನಿಜವಾಗಿದೆ.

37

ಸನ್ನಿ ಲಿಯೋನ್ ಇದೀಗ ವಿಂಗ್ ವುಮೆನ್ ಡೇಟಿಂಗ್ ಆ್ಯಪ್ ಜಾಯಿನ್ ಆಗಿದ್ದಾರೆ. ಈ ಕುರಿತು ಖುದ್ದು ಸನ್ನಿ ಲಿಯೋನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ.

47
sunny leone videos

ಹಲವು ವರ್ಷಗಳಿಂದ ನನಗೆ ಹಲವರು ಇಮೇಲ್ ಮೂಲಕ, ಮೆಸೇಜ್ ಮೂಲಕ ಹಲವು ಪ್ರಶ್ನೆಗಳು ಕೇಳಿಬಂದಿದೆ. ಇದಕ್ಕೆ ಉತ್ತರಿಸಲು ಆಗುತ್ತಿರಲಿಲ್ಲ. ಇದೀಗ ಡೇಟಿಂಗ್ ಆ್ಯಪ್‌ನಲ್ಲಿ ನಾನಿದ್ದೇನೆ ಎಂದು ಸನ್ನಿ ಹೇಳಿದ್ದಾರೆ.

57
Sunny Leone

ನೀವು ಡೇಟಿಂಗ್ ಮಾಡಲು ಇಚ್ಚಿಸುತ್ತೀರಾ ಎಂದು  ಸನ್ನಿ ಲಿಯೋನ್ ಅಭಿಮಾನಿಗಳನ್ನು ಕೇಳಿದ್ದಾರೆ. ಹಾಗಾದರೆ ನಾನು ವಿಂಗ್ ವುಮೆನ್ ಆಗುತ್ತೇನೆ ಎಂದು ಸನ್ನಿ ಲಿಯೋನ್ ಹೇಳಿದ್ದಾರೆ.

67

ಅಸಲಿಗೆ ಇದು ಜಾಹೀರಾತು.  ಆದರೆ  ಈ ಆ್ಯಪ್‌ನಲ್ಲಿ ಖುದ್ದು ಸನ್ನಿ ಲಿಯೋನ್ ಸೇರಿಕೊಂಡಿರುವುದು ಮಾತ್ರ ಸತ್ಯ. ಸನ್ನಿ ಡೇಟಿಂಗ್ ಆ್ಯಪ್ ಸೇರಿದ ಬೆನ್ನಲ್ಲೇ ಲಕ್ಷಾಂತರ ಮಂದಿ ಈ ಡೇಟಿಂಗ್ ಆ್ಯಪ್ ಸೇರಿದ್ದಾರೆ.

77

ಸನ್ನಿ ಲಿಯೋನ್‌ಗೆ ದೇಶದ ಮೂಲೆ ಮೂಲೆಯಲ್ಲಿ ಅಭಿಮಾನಿಗಳಿದ್ದಾರೆ. ಜಾತ್ರೆ ಸೇರಿದಂತೆ ಊರ ಹಬ್ಬಗಳಲ್ಲೂ ಸನ್ನಿ ಲಿಯೋನ್ ಅಭಿಮಾನಿಗಳ ಬಳಗ ಬ್ಯಾನರ್ ಹಾಕಿ ಸಂಭ್ರಮ ಪಡುತ್ತಾರೆ.

Read more Photos on
click me!

Recommended Stories