ದೀಪಿಕಾ ಪಡುಕೋಣೆ ಬಿಟ್ರೆ ಬಾಲಿವುಡ್‌ನಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟಿ ಯಾರು?

First Published | Sep 14, 2023, 5:19 PM IST

ಈ ದಿನಗಳ್ಲಲಿ ದಕ್ಷಿಣದ ನಟಿ ನಯನಾತಾರಾ (Nayanthara) ಅವರು ಸಖತ್‌ ಸದ್ದು ಮಾಡುತ್ತಿದ್ದಾರೆ. ಶಾರುಖ್‌ ಖಾನ್‌ (Shah Rukh Khan) ಸಿನಿಮಾ ಜವಾನ್‌ (Jawan) ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ನಯನತಾರಾ, ಈ ಸಿನಿಮಾಕ್ಕೆ ಪಡೆದ ಸಂಭಾವನೆ ಕಾರಣದಿಂದ ನ್ಯೂಸ್‌ ಆಗಿದ್ದಾರೆ. ಪ್ರಸ್ತುತ  ನಯನತಾರಾ ಅವರು  ದೀಪಿಕಾ ಪಡುಕೋಣೆ (Deepika Padukone) ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಭಾರತೀಯ ನಟಿ ಎಂಬ ಖ್ಯಾತಿ ಪಡೆದಿದ್ದಾರೆ. ಅಷ್ಟಕ್ಕೂ ದಕ್ಷಿಣದ ಈ ನಟಿ ಪಡೆದ ಮೊತ್ತವೇಷ್ಟು?. 

ಲೇಡಿ ಸೂಪರ್‌ಸ್ಟಾರ್ ಎಂದೂ ಕರೆಯಲ್ಪಡುವ ನಯನತಾರಾ ತಮ್ಮ ವಿವಿಧ ಪಾತ್ರಕ್ಕಾಗಿ ಹೆಚ್ಚು ಪರಿಗಣಿಸಲ್ಪಟ್ಟಿದ್ದಾರೆ. ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರೂ ಒಬ್ಬರು.

ನಯನತಾರಾ  'ಜವಾನ್' ಮೂಲಕ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

Tap to resize

ಶಾರುಖ್ ಖಾನ್ ಅವರ ಹೊಸ ಚಿತ್ರಕ್ಕಾಗಿ ಮೆಚ್ಚುಗೆ ಪಡೆಯುತ್ತಿರುವಾಗ, ಚಿತ್ರದ ಪ್ರಮುಖ ಭಾಗವಾಗಿರುವ ಸೌತ್‌ ನಟಿ ನಯನತಾರಾ ಸಹ ಹಿಂದೆ ಬಿದ್ದಿಲ್ಲ ಪ್ರಶಂಸೆಗೆ ಒಳಗಾಗಿದ್ದಾರೆ.  

ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ  ನರ್ಮದಾ ರೈ ಪಾತ್ರದಲ್ಲಿ ನಟಿಸಿದ್ದಾರೆ  ಮತ್ತು ಚಿತ್ರದಲ್ಲಿನ ಪಾತ್ರಕ್ಕಾಗಿ ನಟಿ 10 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಈ ಮೂಲಕ ದೀಪಿಕಾ ಪಡುಕೋಣೆ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುವ ಎರಡನೇ ಭಾರತೀಯ ನಟಿಯಾಗಿ ನಯನತಾರಾ ಗುರುತಿಸಲ್ಪಟ್ಟಿದ್ದಾರೆ
 

ಬಾಲಿವುಡ್ ಚಿತ್ರ 'ಜವಾನ್' ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಸಾಕಷ್ಟು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚಿತ್ರದಲ್ಲಿ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಜಾಫರ್ ಸಾದಿಕ್, ಯೋಗಿ ಬಾಬು, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ.

ಜವಾನ್' ಅಟ್ಲೀ ಅವರ ಚೊಚ್ಚಲ ನಿರ್ದೇಶನವನ್ನು ಸೂಚಿಸುತ್ತದೆ ಮತ್ತುಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. 

ಜವಾನ್' ಸಿನಿಮಾ ಹೊರತು ಪಡಿಸಿ, ನಯನತಾರಾ ತಮಿಳು ಚಿತ್ರ 'ಇರೈವನ್' ಅನ್ನು ಜಯಂ ರವಿಯೊಂದಿಗೆ ಹೊಂದಿದ್ದಾರೆ, ಇದು ಸೆಪ್ಟೆಂಬರ್ 28 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Latest Videos

click me!