1.15 ಲಕ್ಷ ರೂ. ಸೀರೆ ಧರಿಸಿ ಮಿಂಚಿದ ಶ್ರೀದೇವಿ ಮಗಳು ಜಾನ್ವಿ ಕಪೂರ್!

First Published | Aug 16, 2024, 4:45 PM IST

ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಕಡುಗೆಂಪು ಬಣ್ಣದ ಆರ್ಗನ್ಜಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.  ನ್ನು ಧರಿಸಿ ಕಾಣಿಸಿಕೊಂಡರು. ಟೊರಾನಿ ಡಿಸೈನರ್ ಲೇಬಲ್‌ನ ಸೀರೆಯ ಬೆಲೆ 1.15 ಲಕ್ಷ ರೂ. ಆದರೆ ಬ್ಲೌಸ್‌ನ ಬೆಲೆಯೇ 46,500 ರೂ.ಇಷ್ಟು ದುಬಾರಿ ಆಗಿರೋ ಜಾನ್ವಿ ಉಟ್ಟಿರೋ ಸೀರೆಯಲ್ಲಿ ಅಂಥದ್ದೇನಿದೆ ವಿಶೇಷತೆ? 

ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಅದ್ಭುತ ಕಡುಗೆಂಪು ಸೀರೆಯುಟ್ಟು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. 1.15 ಲಕ್ಷ ರೂ.ಮೊಲ್ಯದ ಆರ್ಗನ್ಜಾ ಸೀರೆಯಲ್ಲಿ ಬೆರಗುಗೊಳಿಸುವಂತೆ ಕಾಣುತ್ತಿದ್ದರು ಬಾಲಿವುಡ್ ಎವರ್‌ಗ್ರೀನ್ ಬ್ಯೂಟಿ ಶ್ರೀದೇವಿ ಮಗಳು. 46,500 ರೂ.ಬೆಲೆಯ ಟೀಲ್ ಬ್ಲೌಸ್‌ಸಹ ಅದ್ಭುತವಾಗಿತ್ತು. 

ಜಾನ್ವಿ ಬಹಳ ಇಷ್ಟಪಡುವ ಮನೀಶ್ ಮಲ್ಹೋತ್ರಾ ಅವರ ಡಿಸೈನ್‌ ಮಾಡಿರುವ ಈ ಸೀರೆಯಲ್ಲಿ ಜಾನ್ವಿ ಸೌಂದರ್ಯ ಇಮ್ಮಡಿಗೊಂಡಿತ್ತು. ಅದೂ ಕೆಂಪು-ಹಸಿರು ಮಿಶ್ರಿತ ಉಡುಗೆ ಎಂಥವರನ್ನು ಬೇಕಾದರೂ ಬೆರಗುಗೊಳಿಸುವಂತೆ ಮಾಡುತ್ತಿದೆ. 
 

Tap to resize

ಈ ಸೀರೆ 'ಸರೋಜ ರಮಣಿ ಸೀರೆ' ವಿನ್ಯಾಸಕಾರರ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಲಕ್ಷಗಟ್ಟಲೆ ಬೆಲೆ ಬಾಳುತ್ತದೆ. ಜಾನ್ವಿಗಂತೂ ಸರಿಯಾಗಿ ಒಪ್ಪುವಂತಿದೆ ಈ ಸೀರೆಯ ಬಣ್ಣ, ಕ್ವಾಲಿಟಿ ಎಲ್ಲವೂ. 

ಮುತ್ತಿನ ಕಸೂತಿ ಮತ್ತು ಸೂಕ್ಷ್ಮ ಜರಿ ಮತ್ತು ಡೋರಿ ಕರಕುಶಲತೆಯಿಂದ ಈ ಬೆಲೆ ಬಾಳುವ ಸೀರೆಯನ್ನು ತಯಾರಿಸಲಾಗಿದೆ. ಅತ್ಯುತ್ತಮ ಆರ್ಗನ್ಜಾ ಬಟ್ಟೆಯಿಂದ ಮಾಡಿದ್ದು, ಪಾರಂಪರಿಕ ಲುಕ್ ಕೊಡುತ್ತಿದೆ. ಬಾಲ್ಡಾ ಲೇಸ್‌ನೊಂದಿಗೆ ದಪ್ಪ ಗಡಿ ಆರು-ಗಜ ಈ ಸೀರೆಯ ಮತ್ತೊಂದು ವೈಶಿಷ್ಟ್ಯ. 

ಕೆಂಪು ಸೀರೆಯೊಂದಿಗೆ ಅದ್ಭುತವಾಗಿ ಕಾಣುವ ಬ್ಲೌಸ್ ವಿನ್ಯಾಸಕಾರರ ವೆಬ್‌ಸೈಟ್‌ನಲ್ಲಿ 'ಮಯೂರಿ ರಮಣಿ ಬ್ಲೌಸ್' ಎಂದು ಲಭ್ಯವಿದೆ. ಇದು ಬಟರ್‌ಫ್ಲೈ ನೆಟ್ ಫ್ಯಾಬ್ರಿಕ್‌ನಿಂದ ನಿರ್ಮಿಸಲ್ಪಟ್ಟಿದ್ದು, ಡಬ್ಕಾ ತಂತ್ರದಲ್ಲಿ ಕೈಯಿಂದಲೇ ಕಸೂತಿ ಮಾಡಲಾಗಿದೆ.

ಬರೀ, ಸೀರೆ-ಬ್ಲೌಸ್‌ನಿಂದ ಮಾತ್ರ ಜಾನ್ವಿ ಸೌಂದರ್ಯ ಇಮ್ಮಡಿಗೊಂಡಿದ್ದಲ್ಲ. ಬದಲಾಗಿ ಅವರು ಧರಿಸಿರುವ ಆಭರಣವೂ ಅವರಿಗೆ ಹೇಳಿ ಮಾಡಿಸಿದಂತಿದೆ. ನೆಕ್‌ಲೆಸ್ ಹಾಗೂ ಓಲೆ ಜೊತೆಗೆ ಹೈಲ್ ಸ್ಟೈಲ್ ಸಹ ಜಾನ್ವಿ ಸಾಂಪ್ರಾದಾಯಿಕ ಲುಕ್ ಅನ್ನು ಹೆಚ್ಚಿಸುವಂತೆ ಮಾಡಿದೆ. ಕಿವಿ ಸರಣಿ ಹಾಕಿದ್ದಂತೂ ಮತ್ತೂ ಸೌಂದರ್ಯ ಹೆಚ್ಚಿಸುವಂತೆ ಮಾಡಿದೆ. ಮೂಗೂತಿಯೊಂದಿ, ಕಡುಗೆಂಪು ಬಣ್ಣದ ಬಿಂದಿಯೊಂದಿಗೆ ತಮ್ಮ ಮೇಕಪ್ ಪರಿಪೂರ್ಣಗೊಳಿಸಿದ್ದಾರೆ ಜಾನ್ವಿ ಕಪೂರ್. 

ಜಾನ್ವಿಯವರ ಬೆಸ್ಟ್ ಡ್ರೆಸ್ ಎಂದು ಫಾಷನ್ ಪ್ರಿಯರು ಮಾತನಾಡಿ ಕೊಳ್ಳುತ್ತಿದ್ದಾರೆ. ಸಾಂಪ್ರಾದಾಯಿಕ ಉಡುಗೆಯಲ್ಲಿ, ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆಂದು ಇನ್‌ಸ್ಟಾಗ್ರಾಮ್ ಪೋಸ್ಟಿಗೆ ಕಮೆಂಟ್ಸ್ ಬರುತ್ತಿವೆ. ನಿಮಗೂ ಹಾಗೆ ಅನಿಸಿದರೆ ಕಮೆಂಟ್ಸ್ ಮಾಡಿ. 

ಮಿ. ಆ್ಯಂಡ್ ಮಿಸಸ್ ಮಹಿ ಚಿತ್ರದ ನಾಯಕಿ ಈ ಹೊಸ ಸೀರೆ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದು, ನಿಮಗೆ ಇಂಥ ಟ್ರೆಡಿಷನಲ್ ಸೀರೆಯೇ ಚಂದ ಕಾಣಿಸೋದೆಂದು ಹೇಳುತ್ತಿದ್ದಾರೆ. ಅಮ್ಮ ಶ್ರೀದೇವಿಯ ಸೀರೆ ಲುಕ್ ಅನ್ನೂ ಮೆಲಕು ಹಾಕುತ್ತಿದ್ದಾರೆ. 

ಬಾಲಿವುಡ್ ತಾರೆಯರೂ ಇಂಥ ಟ್ರೆಡಿಷನಲ್ ಸೀರೆಯಲ್ಲಿ ಇಷ್ಟು ಮುದ್ದಾಗಿ ಕಾಣಿಸೋದು ಅಂತ ಈಗಲೇ ಗೊತ್ತಾಗಿದ್ದು ಎಂದೂ ಹೇಳುತ್ತಿರುವ ನೆಟ್ಟಿಗರೂ, ಸದಾ ನಿಮ್ಮನ್ನು ಹೀಗೇ ನೋಡಲು ಬಯಸುವುದಾಗಿಯೂ ಹೇಳುತ್ತಿದ್ದಾರೆ. 

ಅಷ್ಟೇ ಅಲ್ಲ ವರ್ಣರಂಜಿತ ಆಭರಗಳ ಜೊತೆಗೆ ಇಟ್ಟಿರೋ ಬಿಂದಿಯೂ ಧಡಕ್ ನಟಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಇಂಥ ಉಡುಗೆ ತೊಡುಗೆಯಲ್ಲಿಯೇ ನಿಮ್ಮನ್ನು ನೋಡಲು ಬಯಸುವುದಾಗಿ ಅಭಿಮಾನಿಗಳು ಹೇಳುತ್ತಿದ್ದಾರೆ. 

Latest Videos

click me!