ರವೀನಾ ಮಗಳು ಅನಾಮಿಕನೊಂದಿಗೆ ಪಾರ್ಟಿಯಲ್ಲಿ, ತಮನ್ನಾ-ವಿಜಯ್ ವರ್ಮಾ: ಮುಂಬೈನಲ್ಲಿ ಪ್ರೇಮಿಗಳ ಕಲರವ

First Published | Aug 16, 2024, 1:43 PM IST

ಬಾಲಿವುಡ್‌ನಲ್ಲಿ ರವೀನಾ ತಂಡನ್ ಮಗಳು ರಾಶಾ ಥಡಾನಿ ಸಕತ್ತೂ ಸದ್ದು ಮಾಡುತ್ತಿದ್ದಾಳೆ. ಬಾಂದ್ರಾದಲ್ಲಿ ಮಧ್ಯರಾತ್ರಿ ಕಾಣಿಸಿಕೊಂಡು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟರೆ, ಮಧ್ಯರಾತ್ರಿಯಲ್ಲಿ ಆ ಮಿಸ್ಟರಿ ಮ್ಯಾನ್ ಯಾರೆಂಬ ಕುತೂಹಲ ಹುಟ್ಟಿಕೊಂಡಿದೆ. ಜೊತೆಗೆ ಲಸ್ಟ್ ಸ್ಟೊರೀಸ್ ಖ್ಯಾತಿಯ ವಿಜಯ್ ವರ್ಮಾ, ತಮ್ಮನ್ನಾ ಸಹ ತಮ್ಮದೇ ಶೈಲಿಯಲ್ಲಿ ಸದ್ದು ಮಾಡುತ್ತಿದ್ದಾರೆ. 

ರಾತ್ರಿ ಪಾರ್ಟಿಯಲ್ಲಿ ರವೀನಾ ಪುತ್ರಿ

ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಬಾಂದ್ರಾದಲ್ಲಿ ನಶೆ ಏರಿಸಿಕೊಂಡಂತೆ ಕಾಣಿಸಿಕೊಂಡಿದ್ದು, ಸದ್ದು ಮಾಡುತ್ತಿದೆ. ಅದೇ ಸಮಯದಲ್ಲಿ, ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ರಾತ್ರಿ ಹೊರಗೆ ತಿರುಗಾಡುತ್ತಿದ್ದು, ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. 

ಪತಿಯೊಂದಿಗೆ ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರೊಂದಿಗೆ ಬಾಂದ್ರಾದಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಸಖತ್ ಸ್ಟೈಲಿಶ್ ಆಗಿದ್ದ ಶಿಲ್ಪಾ ಲುಕ್ ಸದ್ದು ಮಾಡುತ್ತಿದೆ.

Tap to resize

ಕೈ ಕೈ ಹಿಡಿದ ಪ್ರೇಮಿಗಳು

ವಿಜಯ್ ವರ್ಮಾ ಮತ್ತು ತಮನ್ನಾ ಭಾಟಿಯಾ ಕೈ ಕೈ ಹಿಡಿದು ಬಾಂದ್ರಾದಲ್ಲಿ ಕಾಣಿಸಿಕೊಂಡರು. ಛಾಯಾಗ್ರಾಹಕರು ಇಬ್ಬರ ಫೋಟೋಗಳನ್ನು ಕ್ಲಿಕ್ ಮಾಡಿ, ಲಸ್ಟ್ ಸ್ಟೋರಿಯಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಮತ್ತೊಮ್ಮೆ ರೀ ಕಾಲ್ ಮಾಡಿಕೊಳ್ಳುವಂತೆ ಮಾಡಿದ್ದಾರೆ.

ಸ್ಟುಡಿಯೋದಲ್ಲಿ ರಾಜ್‌ಕುಮಾರ್

ರಾಜ್‌ಕುಮಾರ್ ರಾವ್ ಇತ್ತೀಚೆಗೆ ತಮ್ಮ ಸಿನಿಮಾ ಸ್ತ್ರೀ 2 ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ಬಾಂದ್ರಾದ ಸ್ಟುಡಿಯೊವೊಂದರ ಬಳಿ ಕಾಣಿಸಿಕೊಂಡಿದ್ದು, ಈ ಚಿತ್ರದ ಬಗ್ಗೆ ಅಪಾರ ಕುತೂಹಲ ಹುಟ್ಟಿಸುವಂತೆ ಮಾಡಿದೆ. 

ಜಿಮ್‌ನಲ್ಲಿ ಅನನ್ಯಾ ಪಾಂಡೆ

ಅನನ್ಯಾ ಪಾಂಡೆ. ಬೆವರು ಸುರಿಯುವಂತೆ ವರ್ಕ್ ಔಟ್ ಮಾಡಿ, ಜಿಮ್‌‌ನಿಂದ ಹೊರ ಬಂದ ದಿಶಾ ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಆಗ ತೊಟ್ಟ ಉಡುಗೆ ಬಗ್ಗೆ ಅಲ್ಲಲ್ಲ ಚರ್ಚೆಯಾಗುತ್ತಿದೆ. 

ಹೊಸ ಕಾರಲ್ಲಿ ಖುಷಿ

ಖುಷಿ ಕಪೂರ್ ಇತ್ತೀಚೆಗೆ ಹೊಸ ಮರ್ಸಿಡಿಸ್ ಖರೀದಿಸಿದ್ದಾರೆ. ಅವರು ತಮ್ಮ ಹೊಸ ಕಾರಿನಲ್ಲಿ ಜಿಮ್‌ ಹೊರಗೆ ಕಾಣಿಸಿಕೊಂಡು, ಎಲ್ಲರಿಗೂ ಖುಷಿ ಕೊಟ್ಟಿದ್ದಾರೆ.

ಸರಳ ಲುಕ್ಕಲ್ಲಿ ಕರೀನಾ

ಕರೀನಾ ಕಪೂರ್ ಸರಳ ಲುಕ್‌ನಲ್ಲಿ ಡಬ್ಬಿಂಗ್ ಸ್ಟುಡಿಯೋ ಬಳಿ ಕಾಣಿಸಿಕೊಂಡಿದ್ದು, ಕೂದಲನ್ನು ಬಿಗಿಯಾಗಿ ಕಟ್ಟಿದ್ದರು.  ಒಮ್ಮೆ ಅಜ್ಜಿ ಲುಕ್ ಬಂತು ಅಂತ ಕಮೆಂಟ್ ಮಾಡಿದ್ದ ನೆಟ್ಟಿಗರು, ಇದೀಗ ವಾವ್ ಎಂದು ಹೇಳುತ್ತಿದ್ದಾರೆ. 

Latest Videos

click me!