ದಕ್ಷಿಣದ ನಟಿ ಜೊತೆ ಪ್ರಿಯಾಂಕಾ ಚೋಪ್ರಾ ತಮ್ಮ ಸಿದ್ಧಾರ್ಥ್‌ ನಿಶ್ಚಿತಾರ್ಥ; ಫೋಟೋ ವೈರಲ್‌!

Published : Apr 03, 2024, 05:17 PM IST

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ನೀಲಂ ಉಪಾಧ್ಯಾಯ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಪಿಸಿ ತಮ್ಮ ಇತ್ತೀಚಿನ ಭಾರತದ ಭೇಟಿಯ ಸಂದರ್ಭದಲ್ಲಿ ಪತಿ ನಿಕ್ ಜೋನಾಸ್  ಜೊತೆ ರೋಕಾ ಸೆರೆಮನಿಯಲ್ಲಿ ಭಾಗವಹಿಸಿದ್ದರು. ಈ ಸಮಯದ ಫೋಟೋಗಳು ಸಖತ್‌ ವೈರಲ್‌ ಆಗಿವೆ.

PREV
19
ದಕ್ಷಿಣದ ನಟಿ ಜೊತೆ  ಪ್ರಿಯಾಂಕಾ ಚೋಪ್ರಾ ತಮ್ಮ ಸಿದ್ಧಾರ್ಥ್‌  ನಿಶ್ಚಿತಾರ್ಥ; ಫೋಟೋ ವೈರಲ್‌!

ಪ್ರಿಯಾಂಕಾ ಚೋಪ್ರಾ ಅವರ ಕಿರಿಯ ಸಹೋದರ ಸಿದ್ಧಾರ್ಥ್ ಚೋಪ್ರಾ ಮತ್ತು ನೀಲಂ ಉಪಾಧ್ಯಾಯ ಅವರು ನಿಕಟ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

29

ಸಿದ್ಧಾರ್ಥ್ ಚೋಪ್ರಾ ಮತ್ತು ನೀಲಂ ಉಪಾಧ್ಯಾಯ ಅವರ ಸರಳ ರೋಕಾ ಸಮಾರಂಭದ ಫೋಟೋಗಳನ್ನು ಮಂಗಳವಾರ, ಈ ಜೋಡಿ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದಾರೆ.

39

ಪ್ರಿಯಾಂಕಾ ಚೋಪ್ರಾ ತಮ್ಮ ಇತ್ತೀಚಿನ ಭಾರತದ ಭೇಟಿಯ ಸಮಯದಲ್ಲಿ ಸಹೋದರ ಸಿದ್ಧಾರ್ಥ್‌ ನಿಶ್ಚಿತಾರ್ಥದಲ್ಲಿ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿ ಜೊತೆ ಭಾಗವಹಿಸಿದ್ದರು. 

49

ದಕ್ಷಿಣದ ನಟಿ ನೀಲಂ ಉಪಾಧ್ಯಾಯ ನೇರಳೆ ಬಣ್ಣದ ಶರರಾದಲ್ಲಿ ಸುಂದರವಾಗಿ ಕಾಣುತ್ತಿದ್ದರು. ಅದೇ ಸಮಯದಲ್ಲಿ ಸಿದ್ಧಾರ್ಥ್ ಫ್ಲೋರಲ್ ಕುರ್ತಾವನ್ನು ಸ್ಲೀವ್‌ಲೆಸ್ ಜಾಕೆಟ್‌ನೊಂದಿಗೆ ಧರಿಸಿರುವುದನ್ನು ಕಾಣಬಹುದು

59

ಪ್ರಿಯಾಂಕಾ, ನಿಕ್ ಜೋನಾಸ್ ಮತ್ತು ಅವರ ಮಗಳು ಮಾಲ್ತಿ ಸಾಂಪ್ರದಾಯಿಕ ಉಡುಗೆಯಲ್ಲಿ  ಕುಟುಂಬದ ಫೋಟೋಗಳಿಗೆ ಪೋಸ್ ನೀಡಿದರು.

69

ಪ್ರಿಯಾಂಕಾ ಕೆಂಪು ಸೀರೆ ಮತ್ತು ಅದಕ್ಕೆ ಹೊಂದಿಕೆಯಾಗುವ ತೋಳುಗಳಿಲ್ಲದ ಕುಪ್ಪಸವನ್ನು ಧರಿಸಿದ್ದಾರೆ,  ನಿಕ್ ಬಿಳಿ ಕುರ್ತಾ-ಪೈಜಾಮಾ ಸೆಟ್ ಅನ್ನು ಧರಿಸಿದ್ದು ಜಾಕೆಟ್‌ನೊಂದಿಗೆ ಪೇರ್‌ ಮಾಡಿಕೊಂಡಿದ್ದರು 

79
Siddharth Chopra and Neelam Upadhyaya

ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ನಿಕ್‌ ಸಿದ್ಧಾರ್ಥ್ ಮತ್ತು ನೀಲಂ ಅವರೊಂದಿಗಿನ ಎಂಗೇಜ್‌ಮೆಂಟ್ ಸಮಾರಂಭದ ಫೋಟೋವನ್ನು ಹಂಚಿಕೊಂಡಿದ್ದಾರೆ.

89

ಪ್ರಿಯಾಂಕಾರ  ತಾಯಿ ಮಧು ಚೋಪ್ರಾ, ಸೋದರ ಸಂಬಂಧಿ ಮನ್ನಾರಾ ಚೋಪ್ರಾ ಮತ್ತು ಆತ್ಮೀಯ ಸ್ನೇಹಿತೆ ತಮನ್ನಾ ದತ್  ಅವರನ್ನು ಫೋಟೋದಲ್ಲಿ ಕಾಣಬಹುದು.

99

ಸಿದ್ಧಾರ್ಥ್ ಚೋಪ್ರಾ ಈ ಹಿಂದೆ ಇಶಿತಾ ಕುಮಾರ್ ಜೊತೆ  ಅದ್ಧೂರಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ, ಅವರ ವಿವಾಹವನ್ನು ರದ್ದುಗೊಳಿಸಲಾಯಿತು..

Read more Photos on
click me!

Recommended Stories