ದಿನದಲ್ಲಿ 8 ರಿಂದ 10 ಸಲ ಪತ್ನಿ ಫೋನ್ ಕಾಲ್; ಎಷ್ಟೇ ದುಡ್ಡಿದ್ದರೂ ಶಾರುಖ್ ಖಾನ್‌ಗೆ ಅನುಮಾನ?

Published : Apr 03, 2024, 01:09 PM ISTUpdated : Apr 03, 2024, 01:14 PM IST

ಪತ್ನಿಗೆ ಪದೇ ಪದೇ ಕರೆ ಮಾಡಿದರೆ ಅದು ಅನುಮಾನವೇ? ಶಾರುಖ್ ಖಾನ್ ಮಾತುಗಳನ್ನು ಕೇಳಿ ಎಲ್ಲರೂ ಶಾಕ್....

PREV
17
ದಿನದಲ್ಲಿ 8 ರಿಂದ 10 ಸಲ ಪತ್ನಿ ಫೋನ್ ಕಾಲ್; ಎಷ್ಟೇ ದುಡ್ಡಿದ್ದರೂ ಶಾರುಖ್ ಖಾನ್‌ಗೆ ಅನುಮಾನ?

 ಬಾಲಿವುಡ್ ನಟ ಶಾರುಖ್ ಖಾನ್ ಗಂಡನಾಗಿ ತುಂಬಾನೇ ಪೊಸೆಸಿವ್ ಎಂದು ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣವೇ ಆ ಒಂದು ಫೋನ್ ಕಾಲ್.

27

ಹೌದು! ಶಾರುಣ್ ಖಾನ್ ತಮ್ಮ ಪತ್ನಿಗೆ ದಿನಕ್ಕೆ ಏನಿಲ್ಲ ಅಂದ್ರೂ 8 ರಿಂದ 10 ಸಲ ಕಾಲ್ ಮಾಡುತ್ತಾರಂತೆ ಎನ್ನುವ ವಿಚಾರ ಹರಿದಾಡುತ್ತಿದೆ.

37

ಹಳೆ ಸಂದರ್ಶನ ಒಂದರಲ್ಲಿ ಇದರ ಬಗ್ಗೆ ನಿರೂಪಕನು ಪ್ರಶ್ನೆ ಮಾಡಿದ್ದ. ಆಗ ಕಿಂಗ್ ಕೊಟ್ಟ ಉತ್ತರ ತುಂಬಾನೇ ಕೂಲ್ ಆಗಿತ್ತು..ಹಾಗೂ ಎಲ್ಲರೂ ಇರಲಿ ಬಿಡಿ ಎನ್ನಲು ಶುರು ಮಾಡಿದ್ದರು.

47

ಫೋನ್​ ಮಾಡಿದರೆ ಏನಂತೆ? ಆಕೆಯ ನೆನಪಾದಾಗಲೆಲ್ಲಾ ಫೋನ್​ ಮಾಡ್ತೇನೆ. ಕೆಲವೊಮ್ಮೆ ಐದು ನಿಮಿಷಕ್ಕೇ ಕಾಲ್​ ಮಾಡ್ತೇನೆ. ನನ್ನ ಪತ್ನಿಗೆ ತಾನೆ ಕಾಲ್​ ಮಾಡೋದು, ಪಕ್ಕದ ಮನೆಯ ಪತ್ನಿಗಲ್ವಲ್ಲಾ ಎಂದರು.
 

57

ಈ ವಿಡಿಯೋ ವೈರಲ್ ಆಗುತ್ತಿದ್ದು ಪತ್ನಿಯ ಮೇಲೆ ಭಯವಲ್ಲ, ಆಕೆಯ ಮೇಲೆ ಡೌಟ್​ ಪಡ್ತಿರಬೇಕು ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

67

ಅಲ್ಲದೆ ಮದುವೆಯಾದ ಆರಂಭದಲ್ಲಿ ಗೌರಿ ಖಾನ್ ಯಾವ ಕಾರಣಕ್ಕೆ ಬಿಳಿ ಬಣ್ಣದ ಡ್ರೆಸ್‌ ಧರಿಸುವಂತೆ ಇಲ್ಲ ಎಂದು ಶಾರುಖ್ ಕಂಡಿಷನ್ ಹಾಕಿಬಿಟ್ಟಿದ್ದರು.

77

ವೈಟ್ ಬಟ್ಟೆ ತುಂಬಾ ಟ್ರಾನ್ಸ್‌ಪರೆಂಟ್ ಆಗಿರುತ್ತದೆ ಎನ್ನುವ ಕಾರಣಕ್ಕೆ ಅಂತೆ. ಇದಕ್ಕೆ ತಲೆ ಕೆಡಿಸಿಕೊಳ್ಳದೆ ಗೌರಿ ಇಷ್ಟ ಪಟ್ಟಂತೆ ಇದ್ದರಂತೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories