ಬೇಬಿ ಬಂಪ್ ಮುಚ್ಚಲು ಗಂಡನ ಬ್ಲೇಜರ್ ಕದ್ರಾ; ಅಲಿಯಾ ಕಾಲೆಳೆದ ನೆಟ್ಟಿಗರು

Published : Jul 30, 2022, 01:26 PM IST

ಬೇಬಿ ಬಂಪ್ ಮುಚ್ಚಲು ಆಲಿಯಾ ತರಹೇವಾರಿ ಡ್ರೆಸ್ ನಲ್ಲಿ ಕಾಣಿಸುತ್ತಿದ್ದಾರೆ. ಬೇಬಿ ಬಂಪ್ ಕಾಣದ ಹಾಗೆ ಬಟ್ಟೆ ಧರಿಸಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಹಳದಿ ಬಣ್ಣದ ಶಾರ್ಟ್ ಸಡಿಲ ಬಟ್ಟೆ ಧರಿಸಿದ್ದ ಅಲಿಯಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಲಿಯಾ ಮತ್ತೊಂದು ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

PREV
17
ಬೇಬಿ ಬಂಪ್ ಮುಚ್ಚಲು ಗಂಡನ ಬ್ಲೇಜರ್ ಕದ್ರಾ; ಅಲಿಯಾ ಕಾಲೆಳೆದ ನೆಟ್ಟಿಗರು


ಬಾಲಿವುಡ್ ನಟಿ ಅಲಿಯಾ ಭಟ್ ತಾಯಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಗರ್ಭಿಣಿಯಾಗಿರುವ ವಿಚಾರ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಅಲಿಯಾ ಭಟ್ ಗರ್ಭಿಣಿ ಆಗಿದ್ದರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಶೂಟಿಂಗ್, ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. 

27


ಇತ್ತೀಚಿಗಷ್ಟೆ ಹಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರೀಕರಣ ಮುಗಿಸಿ ಭಾರತಕ್ಕೆ ವಾಪಾಸ್ ಆಗಿರುವ ನಟಿ ಅಲಿಯಾ ಭಟ್ ಇಲ್ಲಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಗರ್ಭಿಣಿ ಅಲಿಯಾ ತನ್ನ ಮುಂದಿನ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 
 

37

ಬೇಬಿ ಬಂಪ್ ಮುಚ್ಚಲು ಆಲಿಯಾ ತರಹೇವಾರಿ ಡ್ರೆಸ್ ನಲ್ಲಿ ಕಾಣಿಸುತ್ತಿದ್ದಾರೆ. ಬೇಬಿ ಬಂಪ್ ಕಾಣದ ಹಾಗೆ ಬಟ್ಟೆ ಧರಿಸಿ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಇತ್ತೀಚಿಗಷ್ಟೆ ಹಳದಿ ಬಣ್ಣದ ಶಾರ್ಟ್ ಸಡಿಲ ಬಟ್ಟೆ ಧರಿಸಿದ್ದ ಅಲಿಯಾ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಅಲಿಯಾ ಮತ್ತೊಂದು ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
 

47

ಅಲಿಯಾ ಸದ್ಯ ಡಾರ್ಲಿಂಗ್ ಸಿನಿಮಾ ಪ್ರಮೋಷನ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಡಾರ್ಲಿಂಗ್ ಸಿನಿಮಾ ಆಗಸ್ಟ್ 5ಕ್ಕೆ ನೆಟ್ ಫ್ಲಿಕ್ಸ್ ನಲ್ಲಿ ಸ್ಟೀಮಿಂಗ್ ಆಗುತ್ತಿದೆ. ಹಾಗಾಗಿ ಗರ್ಭಿಣಿ ಆಗಿದ್ದರು ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 

57

ಅಲಿಯಾ ಮುಖದಲ್ಲಿ ಈಗಾಗಲೇ ಗರ್ಭಿಣಿ ಕಳೆ ಕಾಣುತ್ತಿದೆ. ಕೊಂಚ ದಪ್ಪ ಕೂಡ ಆಗಿದ್ದಾರೆ.  ಅಲ್ಲದೇ ಬೇಬಿ ಬಂಪ್ ಕಾಣದ ಹಾಗೆ ಬಟ್ಟೆ ಧರಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಶಾರ್ಟ್ ಡ್ರೆಸ್ ಮೇಲೆ ಬ್ಲೇಜರ್‌  ಧರಿಸಿ ಕಾಣಿಸಿಕೊಂಡಿದ್ದರು. ತನ್ನ ಹೊಟ್ಟೆಯ ಭಾಗವನ್ನು ಬ್ಲೇಜರ್ ನಿಂದ ಮುಚ್ಚಿದ್ದರು. ಹಾಗಾಗಿ ನೆಟ್ಟಿಗರು ಪತಿ ಬ್ಲೇಜರ್ ಕದ್ದು ಹಾಕುತ್ತಿದ್ದೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

67

ರಣಬೀರ್ ಕಪೂರ್ ಸದ್ಯ ಅನಿಮಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಪಂಜಾಬಿನಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಅಲಿಯಾ ಮುಂಬೈನಲ್ಲಿ ಪ್ರಮೋಷನಲ್ಲಿದ್ದಾರೆ. ಹಾಗಾಗಿ ಅಭಿಮಾನಿಗಳು ರಣಬೀರ್ ಶೂಟಿಂಗ್ ಹೋಗಿದ್ದಾರೆ ಎಂದು ಅವರ ಬಟ್ಟೆ ಕದ್ದು ಹಾಕುತ್ತಿದ್ದೀರಾ ಎಂದು ಕಾಳೆಯುತ್ತಿದ್ದಾರೆ. 
 

77

ಡಾರ್ಲಿಂಗ್ ಸಿನಿಮಾ ಆಗಸ್ಟ್ 5ರಂದು ರಿಲೀಸ್ ಆಗುತ್ತಿದೆ. ಅಲಿಯಾ ಮೊದಲ ಬಾರಿಗೆ ಶಾರುಖ್ ನಿರ್ಮಾಣದ ರೆಡ್ ಚಿಲ್ಲಿಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಡಾರ್ಲಿಂಗ್ ಸಿನಿಮಾ ಜೊತೆಗೆ ಬ್ರಹ್ಮಾಸ್ತ್ರ ಸಿನಿಮಾದ ಚಿತ್ರೀಕರಣ ಮುಗಿಸಿ ರಿಲೀಸ್‌ಗೆ ಕಾಯುತ್ತಿದ್ದಾರೆ. ಇನ್ನು ಕರಣ್ ಜೋಹರ್ ನಿರ್ದೇಶನದ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮಾಡಬೇಕಿದೆ.

Read more Photos on
click me!

Recommended Stories