ಅನಿಮಲ್ ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಕಡು ನೇರಳೆ ಬಣ್ಣದ ಸೀರೆಯುಟ್ಟು ಮಿಂಚಿದ್ದಾರೆ. ಆಕರ್ಷಕವಾಗಿ ಸೀರೆಯುಟ್ಟ ನಟಿ ಕ್ಯೂಟಾಗಿ ಸ್ಮೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಝರಿ ಸೀರೆಗೆ ಆಕರ್ಷಕವಾಗಿ ಆಭರಣವನ್ನೂ ಧರಿಸಿಕೊಂಡು ಪಕ್ಕಾ ದೇಸಿ ಬ್ರೈಡಲ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೆರಗಿಗೆ ಪಿನ್ ಮಾಡಿಕೊಂಡು ಧರಿಸಿ ಸೌತ್ ಇಂಡಿಯನ್ ವಧುವಿನಂತೆ ಕಾಣಿಸಿದ್ದಾರೆ.
ರಶ್ಮಿಕಾ ಮಂದಣ್ಣ ಆಕರ್ಷಕ ಲುಕ್ ನೋಡಿ ಅವರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದು, ಸೂಪರ್, ಬ್ಯೂಟಿಫುಲ್, ನ್ಯಾಷ್‌ನಲ್ ಕ್ರಶ್ಮಿಕಾ, ವಿಜಯ ದೇವರಕೊಂಡ ಜೊತೆಗೆ ಮದ್ವೆ ಫಿಕ್ಸ್ ಆಯ್ತಾ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.
ನಟಿ ಖಾಸಗಿ ಬಟ್ಟೆ ಬ್ರ್ಯಾಂಡ್ ಒಂದರ ಪ್ರಮೋಷನ್ಗಾಗಿ ಸೀರೆಯುಟ್ಟಿದ್ದಾರೆ. ಜೊತೆಗೆ ಸ್ಮೈಲ್ ಮಾಡಿಕೊಂಡು ಆಕರ್ಷಕವಾಗಿ ಸೊಂಟದ ಮೇಲೆ ಕೈ ಇಟ್ಟು ಪೋಸ್ ಕೊಟ್ಟಿರುವ ಲುಕ್ ತುಂಬಾ ಆಕರ್ಷಕವಾಗಿದೆ.
ನಟಿ ರಶ್ಮಿಕಾ ಮಂದಣ್ಣ, ರಣಬೀರ್ ಕಪೂರ್ ಜೊತೆ ನಟಿಸಿರುವ ಅನಿಮಲ್ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್ನಲ್ಲೂ ಸಖತ್ ಸೌಂಡ್ ಮಾಡ್ತಿದೆ. ರಶ್ಮಿಕಾ ಮಂದಣ್ಣ ಅನಿಮಲ್ ಸಿನಿಮಾ ಸಕ್ಸಸ್ ಖುಷಿಯಲ್ಲಿ ತೇಲಾಡುತ್ತಿದ್ದಾರೆ.
ಅನಿಮಲ್ ಸಿನಿಮಾದಲ್ಲಿ ನಟಿ ರಶ್ಮಿಕಾ ಮಂದಣ್ಣ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಕಿಸ್ಸಿಂಗ್ ವಿಡಿಯೋ, ಇಂಟಿಮೆಂಟ್ ಸೀನ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದೀಗ ಬಾಲಿವುಡ್ ನಟಿ ಅನಿಮಲ್ ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದಾರೆ. ಅನಿಮಲ್ ಸಿನಿಮಾ ಬಳಿಕ ರಶ್ಮಿಕಾ ಮಂದಣ್ಣ, ಬಾಲಿವುಡ್ ಟಾಪ್ ನಟಿಯರ ಲಿಸ್ಟ್ ಸೇರಿಕೊಂಡಿದ್ದಾರೆ.