ತುಂಬಾ ಓವರ್ ಮೇಕಪ್‌ ಯಾಕೆ, ನೀವು ಮಲಗುವಾಗಲೂ ಹೀಗೆನಾ ಎಂದ ನೆಟ್ಟಿಗರು: ಡಿ-ಬಾಸ್ ಬೆಡಗಿ ಊರ್ವಶಿ ಟ್ರೋಲ್!

Published : Dec 25, 2023, 09:02 AM IST

ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮೂಲಕ ಕನ್ನಡದ ಸಿನಿಪ್ರಿಯರಿಗೆ ಪರಿಚಯವಾದ ಬಹುಭಾಷಾ ನಟಿ ಊರ್ವಶಿ ರೌಟೇಲಾ ಹೊಸ ಫೋಟೋಶೂಟ್‌ ಮಾಡಿಸಿ, ಅದರಲ್ಲಿನ ಓವರ್‌ ಮೇಕಪ್‌ನಿಂದ ಸಖತ್‌ ಟ್ರೋಲ್‌ಗೆ ಒಳಗಾಗಿದ್ದಾರೆ.  

PREV
17
ತುಂಬಾ ಓವರ್ ಮೇಕಪ್‌ ಯಾಕೆ, ನೀವು ಮಲಗುವಾಗಲೂ ಹೀಗೆನಾ ಎಂದ ನೆಟ್ಟಿಗರು: ಡಿ-ಬಾಸ್ ಬೆಡಗಿ ಊರ್ವಶಿ  ಟ್ರೋಲ್!

‘ಐರಾವತ’ ಬೆಡಗಿ ಊರ್ವಶಿ ರೌಟೇಲಾ ಅವರು ಇದೀಗ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಹೊಸ ಫೋಟೋದಲ್ಲಿನ ಊರ್ವಶಿ ಓವರ್ ಮೇಕಪ್ ನೋಡಿ ನೆಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ. 

27

ಇದೀಗ ನಟಿಯ ನಯಾ ಲುಕ್ ಸಖತ್ ವೈರಲ್ ಆಗುತ್ತಿದೆ. ಸದಾ ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ಊರ್ವಶಿ ರೌಟೇಲಾ ಸದ್ದು ಮಾಡುತ್ತಲೇ ಇರುತ್ತಾರೆ. ಈಗ ಸುಂದರವಾದ ಮಿನುಗುವ ಡ್ರೆಸ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ನಟಿ ಪೋಸ್ ನೀಡಿದ್ದಾರೆ. 

37

ಫೋಟೋಶೂಟ್‌ನಲ್ಲಿ ಗ್ಲ್ಯಾಮರಸ್ ಆಗಿ ಊರ್ವಶಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಫೋಟೋ ಶೇರ್ ಮಾಡ್ತಿದ್ದಂತೆ ಐರಾವತ ನಟಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಓವರ್ ಮೇಕಪ್ ಮಾಡಿಕೊಳ್ಳಬೇಡಿ. ಮಲಗುವಾಗಲೂ ಮೇಕಪ್ ತೆಗೆಯಲ್ಲ ಅನಿಸುತ್ತೆ ಎಂದೆಲ್ಲಾ ನೆಟ್ಟಿಗರು ಬಗೆ ಬಗೆಯ ಕಾಮೆಂಟ್ ಮಾಡಿದ್ದಾರೆ. 

47

ಊರ್ವಶಿ ಹೊಸ ಲುಕ್ ಟ್ರೋಲಿಗರ  ಬಾಯಿಗೆ ಆಹಾರವಾಗಿದೆ. ಊರ್ವಶಿ ಸುಂದರವಾಗಿ ರೆಡಿಯಾಗಿದ್ದಾರೆ. ಅವರ ಓವರ್ ಮೇಕಪ್‌ಗೆ ಟ್ರೋಲ್ ಆಗ್ತಿದ್ದಾರೆ. ಅವರಿಗೆ ಟ್ರೋಲ್ ಆಗೋದು ಇದೇ ಮೊದಲ ಬಾರಿ ಏನೇನಲ್ಲ.‌ 

57

ಬೋಲ್ಡ್ ಆಗಿ ಗ್ಲಾಮರಸ್ ಆಗಿ ಡ್ರೆಸ್ ಮಾಡಿಕೊಂಡು ಬರೀ ಇವೆಂಟ್​ಗಳಲ್ಲಿ ಶೈನ್ ಆಗುವ ಊರ್ವಶಿ ರೌಟೇಲಾ ಅವರ ಕೈಯಲ್ಲಿ ಸಿನಿಮಾ ಅವಕಾಶಗಳಿಲ್ವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

67

ಊರ್ವಶಿ ಮಾಡೆಲಿಂಗ್ ಮಾಡುತ್ತಲೇ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಅದರ ಭಾಗವಾಗಿ ತೆಲುಗಿನಲ್ಲಿ ಚಿರಂಜೀವಿ ನಾಯಕನಾಗಿರುವ ವಾಲ್ತೇರು ವೀರಯ್ಯ ಚಿತ್ರದಲ್ಲಿ ಐಟಂ ಸಾಂಗ್‌ನಲ್ಲಿ ನಟಿಸಿದ್ದಾರೆ.

77

‘ಐರಾವತ’ ನಟಿ ಊರ್ವಶಿ ಕನ್ನಡ, ತೆಲುಗು, ಹಿಂದಿ ಸೇರಿದಂತೆ ಬಹುಭಾಷಾ ನಟಿಯಾಗಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೂಡ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories