'ನನ್ನಂತ ರೆಬಲ್ ಇಲ್ಲ.. 15ನೇ ವಯಸ್ಸಿನಲ್ಲಿ ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದೆ'

First Published | Feb 20, 2021, 8:29 PM IST

ಮುಂಬೈ( ಫೆ.  20)  ಬಾಲಿವುಡ್ ನ ರೆಬಲ್ ನಟಿ ಯಾರು ಎಂದು ಪ್ರಶ್ನೆ ಮಾಡಿದರೆ ಮೊದಲ ಬರುವ ಹೆಸರು ಕಂಗನಾ ರಣಾವತ್. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಕಂಗನಾ ತಂದೆ ವಿರುದ್ಧವೇ ತಿರುಗಿ ಬಿದ್ದಿದ್ದ ಘಟನೆಯನ್ನು ಹಂಚಿಕೊಂಡಿದ್ದಾರೆ. ಹಾಗಾದರೆ  ಕಂಗನಾ ಹೇಳಿರುವ ಹೊಸ ವಿಚಾರ ಏನು?

ತಂದೆಗೆ ತಿರುಗಿಬಿದ್ದ ಘಟನೆಯನ್ನು ಕಂಗನಾ ವಿವರಿಸುತ್ತ ಹೋಗುತ್ತಾರೆ.
15 ನೇ ವಯಸ್ಸಿನಲ್ಲಿ ತಿರುಗಿಬಿದ್ದ ಮೊದಲ ರಜಪೂತ ಮಹಿಳೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.
Tap to resize

'ನನ್ನನ್ನು ಜಗತ್ತಿನ ಬೆಸ್ಟ್‌ ಡಾಕ್ಟರ್‌ರನ್ನಾಗಿ ಮಾಡಬೇಕು ಎಂಬುದು ಅಪ್ಪನ ಆಸೆ ಆಗಿತ್ತು. ನನಗೆ ಉತ್ತಮವಾದ ಶಾಲೆಗೆ ಕಳಿಸಿ ತಾನೊಬ್ಬ ಕ್ರಾಂತಿಕಾರಿ ತಂದೆ ಎನಿಸಿಕೊಳ್ಳಬೇಕು ಎಂಬುದು ಅವರ ಆಲೋಚನೆ ಆಗಿತ್ತು.
ಆದರೆ ನಾನು ಶಾಲೆಗೆ ಹೋಗಲು ಒಪ್ಪಲಿಲ್ಲ. ಆಗ ಅವರು ನನಗೆ ಹೊಡೆಯಲು ಬಂದರು.
ಈ ವೇಳೆ ನೀವು ನನಗೆ ಹೊಡೆದರೆ ನಾನು ನಿಮಗೆ ತಿರುಗಿಸಿ ಹೊಡೆಯುತ್ತೇನೆ ಅಂತ ಎಚ್ಚರಿಕೆ ನೀಡಿದ್ದೆ. ಅದೇ ದಿನ ನಮ್ಮಿಬ್ಬರ ಸಂಬಂಧ ಅಂತ್ಯವಾಯ್ತು ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
ಇಲ್ಲಿಂದ ಅವರು ನನ್ನನ್ನು ನೋಡುವ ದೃಷ್ಟಿ ಬೇರೆಯಾಯಿತು. ಅಲ್ಲಿಂದ ಹೊರ ನಡೆದ ತಂದೆ ನನ್ನನ್ನು ಮತ್ತು ಅಮ್ಮನ್ನನ್ನು ಒಂದು ಕ್ಷಣ ನೋಡಿದರು.
ನಾನು ಮಿತಿ ಮೀರಿದ್ದೆ ಎಂಬುದು ಗೊತ್ತಿತ್ತು ಎಂಬುದನ್ನು ಕಂಗನಾ ಹೇಳಿಕೊಂಡಿದ್ದಾರೆ.
ನಾನು ಹಠಮಾರಿ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದು ಕಂಗನಾ ವಿವರಣೆ ನೀಡಿದ್ದಾರೆ.
ನನಗೆ ಅಮಲು ಏರಿದೆ ಎಂದು ಕೆಲವರು ಭಾವಿಸಿದಂತೆ ಇದೆ..ಸ್ವಾತಂತ್ರ್ಯಕ್ಕಾಗಿ ನಾನು ಯಾವ ಮಟ್ಟಕ್ಕೂ ಇಳಿಯಲು ಸಿದ್ಧ ಎಂದು ಕಂಗನಾ ಪುನರ್ ಉಚ್ಚಾರ ಮಾಡಿದ್ದಾರೆ.ಸರಣಿ ಟ್ವೀಟ್ ಮಾಡಿರುವ ಕಂಗನಾ ಒಂದೊಂದೆ ವಿಚಾರಗಳನ್ನು ಹೇಳಿಕೊಂಡಿದ್ದಾರೆ .

Latest Videos

click me!