ಕೆಜಿಎಫ್‌ ಬೆಡಗಿ ಫೋಟೋಗೆ ಟ್ರೋಲ್‌ ಮಾಡುತ್ತಿರುವ ನೆಟಿಜನ್ಸ್‌!

Suvarna News   | Asianet News
Published : Feb 20, 2021, 12:01 PM IST

ಕೆಜಿಎಫ್‌ ಬೆಡಗಿ ಮೌನಿ ರಾಯ್‌ ಹಿಂದಿ ಟಿವಿ ಜಗತ್ತಿನ ಹಾಟ್‌ ನಟಿಯರಲ್ಲಿ ಒಬ್ಬರು. ಕೆಲವು ದಿನಗಳ ಹಿಂದೆ ಮೌನಿ ತಮ್ಮ ಡ್ಯಾನ್ಸ್‌ ಕ್ಲಾಸ್‌ ಹೊರಗೆ ಕಾಣಿಸಿಕೊಂಡಿದ್ದರು. ಈ ಸಮಯದಲ್ಲಿ, ಮೌನಿ ಕಪ್ಪು ಉಡುಪಿನಲ್ಲಿ ತುಂಬಾ ಸ್ಲಿಮ್ ಆಗಿ ಕಾಣಿಸುತ್ತಿದ್ದರು. ಕೂದಲನ್ನು ಓಪನ್‌ ಇಟ್ಟು ಗಾಗಲ್ಸ್ ಧರಿಸಿದ್ದ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಬ್ಲಾಕ್‌ ಸ್ಕೀನ್‌ ಟೈಟ್‌ ಡ್ರೆಸ್‌ನಲ್ಲಿರುವ ಮೌನಿಯ ಫೋಟೋ ಸಖತ್‌ ವೈರಲ್‌ ಆಗಿದೆ. ನೆಟ್ಟಿಗರು ಕೆಲವರು ನಟಿಯ ಈ ಲುಕ್‌ಗೆ ಹೊಗಳಿದರೆ, ಮತ್ತಷ್ಟು ಜನ ಇವರನ್ನೂ ಟ್ರೋಲ್‌ ಮಾಡಿದ್ದಾರೆ.   

PREV
110
ಕೆಜಿಎಫ್‌ ಬೆಡಗಿ ಫೋಟೋಗೆ ಟ್ರೋಲ್‌ ಮಾಡುತ್ತಿರುವ ನೆಟಿಜನ್ಸ್‌!

ಮೌನಿಯ ಫೋಟೋಗೆ ಪ್ರತಿಕ್ರಿಯಿಸುತ್ತಾ  ವ್ಯಕ್ತಿಯೊಬ್ಬರೂ, 'ಪ್ಲಾಸ್ಟಿಕ್ ಅನ್ನು ನಿಷೇಧಿಸಿ' ಎಂದು ಬರೆದರೆ, ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿ  'ದೇಸಿ ಫೀಮೇಲ್‌ ಮೈಕೆಲ್ ಜಾಕ್ಸನ್' ಎಂದು ಕಾಮೆಂಟ್‌ ಮಾಡಿದ್ದಾರೆ.

210

ನಟಿಯ ಜೀರೋ ಫಿಗರ್‌ ನೋಡಿ  'ಸೋದರಿ ಏನಾದರೂ ತಿನ್ನಿರಿ ' ಎಂದು ಒಬ್ಬರು ಹೇಳಿದರೆ, 'ಇನೊಬ್ಬರು ಗಾಳಿಗೆ ಹಾರಿಹೋಗುತ್ತಾರೆ' ಎಂದು ಬರೆದಿದ್ದಾರೆ. 

310

ಅಂದಹಾಗೆ,  ಮೌನಿ ರಾಯ್ ಅವರನ್ನು ಟ್ರೋಲ್ ಮಾಡುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 2019 ರಲ್ಲಿ ಸಲ್ಮಾನ್ ಅವರ 'ಭಾರತ್' ಚಿತ್ರದ ಪ್ರೀಮಿಯಮ್‌ನಲ್ಲಿ ಬ್ಲ್ಯಾಕ್ ಡ್ರೆಸ್ ಜೊತೆ ನಿಯಾನ್ ಗ್ರೀನ್ ಕಲರ್ ಜಾಕೆಟ್ ಮತ್ತು ಕಪ್ಪು ಸ್ನೀಕರ್ಸ್ ಧರಿಸಿದ್ದರು. 

410

ಮೌನಿಯ ಉಡುಪನ್ನು ನೋಡಿದ ಸೋಷಿಯಲ್ ಮೀಡಿಯಾ ಬಳಕೆದಾರರು ಆಕೆಯನ್ನು ಪ್ಲಾಸ್ಟಿಕ್‌ಗೆ ಹೋಲಿಸಿದ್ದಾರೆ. 'ಪ್ಲಾಸ್ಟಿಕ್ ಸರ್ಜರಿ ವಿಷಯದಲ್ಲಿ ಇವರು ಇನ್ನೊಬ್ಬ ರಾಖಿ ಸಾವಂತ್ ಆಗಿದ್ದಾರೆ ಎಂದು ಟ್ರೋಲ್‌ ಮಾಡಿದ್ದರು. 

510

ಮೌನಿ ರಾಯ್  ಟಿವಿ ಧಾರಾವಾಹಿ 'ದೇವೊನ್ ಕೆ ದೇವ್ ... ಮೂಲಕ ಗುರುತಿಸಲ್ಪಟ್ಟರು. ಅದರಲ್ಲಿ ಮಾತಾ ಸತಿ ಪಾತ್ರವನ್ನ ನಿರ್ವಹಿಸಿದ್ದಾರೆ. ಈ ಕಾರ್ಯಕ್ರಮದ ಸೆಟ್‌ನಲ್ಲಿ ಮೋಹಿತ್ ಮತ್ತು ಮೌನಿ ನಡುವೆ ಸಂಬಂಧ ಪ್ರಾರಂಭವಾಯಿತು ಎಂದು ಹೇಳಲಾಗಿದೆ.  

610

ಮೌನಿ ಮತ್ತು ಮೋಹಿತ್ ರೈನಾ ಅವರು ಕೆಲವು ವರ್ಷಗಳ ಸಂಬಂಧದ ನಂತರ 2018ರಲ್ಲಿ ಬೇರೆಯಾದರು. 'ನಾನು ಸಿಂಗಲ್‌ ಮತ್ತು ಬಹಳ ಸಮಯದಿಂದ ಈ ರೀತಿ ಬದುಕುತ್ತಿದ್ದೇನೆ. ಮೋಹಿತ್ ಮತ್ತು ನಾನು ಇನ್ನು ಮುಂದೆ ಸ್ನೇಹಿತರಲ್ಲ ಮತ್ತು ಈಗ ನಮ್ಮ ನಡುವೆ ಏನೂ ಇಲ್ಲ,' ಎಂದು  ಸಂದರ್ಶನವೊಂದರಲ್ಲಿ ಸ್ವತಃ ಮೌನಿ ಹೇಳಿದರು 

710

ಮೌನಿ ಟಿವಿ ನಟ ಗೌರವ್ ಚೋಪ್ರಾ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದರು. ಗೌರವ್ ಚೋಪ್ರಾ ನಾರಾಯಣಿ ಶಾಸ್ತ್ರಿಯೊಂದಿಗೆ ಬ್ರೇಕಪ್‌ ಆದ ನಂತರ ಕೆಜಿಎಫ್‌ ನಟಿಗೆ ಹತ್ತಿರವಾಗಿದ್ದರು. ಗೌರವ್ ಮತ್ತು ಮೌನಿ 'ಪತಿ ಪತ್ನಿ ಔರ್ ವೋ' ಎಂಬ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಆದರೆ ಕೆಲವು ವರ್ಷಗಳ ನಂತರ ಇವರು ಬೇರ್ಪಟ್ಟರು.
 
810

ಸೆಪ್ಟೆಂಬರ್ 8, 1985ರಂದು ಪಶ್ಚಿಮ ಬಂಗಾಳದಲ್ಲಿ ಜನಿಸಿದ ಮೌನಿ, ಕೂಚ್ ಬೆಹಾರ್‌ನ ಕೇಂದ್ರೀಯ ವಿದ್ಯಾಲಯದಲ್ಲಿ 12 ನೇ ತರಗತಿವರೆಗೆ ಅಧ್ಯಯನ ಮಾಡಿದ್ದಾರೆ. 

910

ನಂತರ ದೆಹಲಿಯ ಮಿರಾಂಡಾ ಹೌಸ್‌ನಿಂದ ಇಂಗ್ಲಿಷ್ ಸಾಹಿತ್ಯದಿಂದ ಪದವಿ ಪಡೆಯಲು ಬಯಸಿದ್ದರು. ಅವರ ಪೋಷಕರು ಮಗಳು ಪತ್ರಕರ್ತೆಯಾಗಬೇಕೆಂದು ಆಸೆಪಟ್ಟರು. ಈ ಕಾರಣದಿಂದ ಮೌನಿ ದೆಹಲಿಯ ಜಾಮಿಯಾ-ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ ಕಮ್ಯುನಿಕೇಷನ್‌ ಕೋರ್ಸ್‌ಗೆ ಪ್ರವೇಶ ಪಡೆದರು. ಆದರೆ ಮೌನಿ ರಾಯ್ ನಟನೆಗೊಸ್ಕರ ಮಧ್ಯದಲ್ಲೇ ಶಿಕ್ಷಣ ತೊರೆದರು,  

1010

'ಕ್ಯೂಕಿ ಸಾಸ್ ಭಿ ಕಭಿ ಬಹು ಥಿ', 'ಕಸ್ತೂರಿ', ದೇವೊನ್ ಕೆ ದೇವ್ ಮಹಾದೇವ್', 'ನಾಗಿನ್', ನಾಗಿನ್ 2 ', 'ಜಲಕ್ ದಿಖ್ಲಾ ಜಾ 7', 'ತಶಾನ್ ಎ ಇಶ್ಕ್', 'ಜಲಕ್ ದಿಖ್ಲಾ ಜಾ 9', 'ಲಿಪ್ ಸಿಂಗ್ ಬ್ಯಾಟಲ್' 'ಎಂಟರ್ಟೈನ್ಮೆಂಟ್ ಕಿ ರಾತ್' ಮುಂತಾದ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಇದಲ್ಲದೆ ಮೌನಿ ಅಕ್ಷಯ್ ಕುಮಾರ್ ಜೊತೆ 'ಗೋಲ್ಡ್' ಹಾಗೂ ಕನ್ನಡದ ಸೂಪರ್‌ಹಿಟ್‌ ಸಿನಿಮಾ ಕೆಜಿಎಫ್‌ನ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

click me!

Recommended Stories