ನಿರ್ದೇಶಕ ಅನುರಾಗ್ ಕಶ್ಯಪ್ ಮಗಳು ಆಲಿಯಾ ಕಶ್ಯಪ್ ನೊಂದು ಅನೇಕ ಮಾತುಗಳನ್ನಾಡಿದ್ದಾರೆ.
ಒಳಉಡುಪಿನ ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಆ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ಆಲಿಯಾ ಟ್ರೋಲ್ ಗೆ ಗುರಿಯಾಗಿದ್ದರು.
ಟ್ರೋಲ್ ಗಳಿಂದ ನನಗೆ ತುಂಬಾ ಹಿಂಸೆಯಾಗಿದೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ.
ಆಲಿಯಾ ಕಶ್ಯಪ್ ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
20 ವರ್ಷದ ಆಲಿಯಾ ಅತ್ಯಾಚಾರ, ಕೊಲೆ ಬೆದರಿಕೆಗಳು ಬಂದಿವೆ.
ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ಸಣ್ಣ ಸಣ್ಣ ವಿಚಾರಗಳು ಸಹ ನನಗೆ ದೊಡ್ಡ ಪರಿಣಾಮ ಬೀರುತ್ತೆ. ನನಗೆ ನಿದ್ರೆಯೇ ಬರದ ಸ್ಥಿತಿ ಬಂದಿದೆ ಎಂದು ನೊಂದು ನುಡಿದಿದ್ದಾರೆ.
ನನಗೂ ಬಾಲಿವುಡ್ ಗೂ ಸಂಬಂಧವೇ ಇಲ್ಲ. ನನ್ನ ತಂದೆ ಅಲ್ಲಿ ಇರಬಹುದು ನನ್ನದು ಬೇರೆಯೇ ಪ್ರಪಂಚ ಎಂದಿದ್ದಾರೆ.
ನನ್ನನ್ನು ವೇಶ್ಯೆ ಎಂದು ಕರೆದರು. ನನ್ನ ಬೆಲೆ ಎಷ್ಟು ಎಂದು ಕೇಳಿದರು. ಕೊಲೆ ಬೆದರಿಕೆ ಕಳುಹಿಸಿದ್ದರು. ಇದೆಲ್ಲವೂ ನನಗೆ ಮನಸ್ಸಿಗೆ ತುಂಬಾ ಘಾಸಿ ಮಾಡಿತು ಎಂದು ಹೇಳಿಕೊಂಡಿದ್ದಾರೆ.
ನೆಗೆಟಿವಿಟಿಗೆ ನನ್ನ ಬಳಿ ಜಾಗವಿಲ್ಲ. ಕೆಟ್ಟದಾಗಿ ಮಾತನಾಡುವವರನ್ನು ಎಲ್ಲಿಯೋ ಕುಳಿತುಕೊಂಡು ಕಮೆಂಟ್ ಮಾಡುವವರನ್ನು ಮುಲಾಜಿಲ್ಲದೆ ಬ್ಲಾಕ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ 1997ರಲ್ಲಿ ಸಿನಿಮಾ ಎಡಿಟರ್ ಆರತಿ ಬಜಾಜ್ ಅವರನ್ನು ವಿವಾಹವಾಗುತ್ತಾರೆ. ಅನುರಾಗ್ ಮತ್ತು ಆರತಿ ಅವರಿಗೆ ಜನಿಸದ ಮಗಳು ಆಲಿಯಾ.
ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಅನುರಾಗ್ ಮತ್ತು ಆರತಿ ಇಬ್ಬರು ಬೇರೆ ಬೇರೆ ಆಗುತ್ತಾರೆ.
ಒಳಉಡುಪಿನ ಪೋಟೋ ಶೇರ್ ಮಾಡಿಕೊಂಡ ನಿರ್ದೇಶಕನ ಮಗಳಿಗೆ ಟ್ರೋಲಿಗರ ಕಾಟ