ಒಂದೊಂದು ರೂಪಾಯಿಗೂ ಕಷ್ಟ ಪಡ್ತಿದ್ದ ಇವರು ಇಂದು ಬಾಲಿವುಡ್ ನ ಸೂಪರ್ ಸ್ಟಾರ್ ನಟರು

First Published | Aug 2, 2024, 3:39 PM IST

ದೇವ್ ಆನಂದ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಮಿಥುನ್ ಚಕ್ರವರ್ತಿ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಖ್ಯಾತಿಯನ್ನು ಗಳಿಸುವ ಮೊದಲು ತುಂಬಾನೆ ಕಷ್ಟಗಳನ್ನ ಅನುಭವಿಸಿದ್ದರು. ಕೆಲವು ನಟರ ಬಳಿ ಮನೆಯೇ ಇರಲಿಲ್ಲ. 
 

ಬಾಲಿವುಡ್‌ನಲ್ಲಿ ಇಂದು ಮಿಂಚುತ್ತಿರುವ ಸೂಪರ್ ಸ್ಟಾರ್ ನಟರು ಹೀರೋ ಆಗುವ ಮುನ್ನ ತುಂಬಾ ಕಷ್ಟಗಳನ್ನ ಅನುಭವಿಸಿದ್ದಾರೆ, ಕೆಲವರ ಬಳಿ ಹಣ ಇರಲಿಲ್ಲ, ಕೆಲವರ ಬಳಿ ಮನೆಯೇ ಇರಲಿಲ್ಲ. ಮುಂದೆ ಪರಿಶ್ರಮದಿಂದ ಮೇಲೆ ಬಂದು ಇಂದು ಸಿನಿಮಾರಂಗವನ್ನೇ ಆಳುತ್ತಿದ್ದಾರೆ.

ದೇವಾನಂದ್  (Devanand)
ಲೆಜೆಂಡರಿ ನಟ ದೇವಾನಂದ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ಆರ್ಥಿಕ ಸಮಸ್ಯೆಗಳು, ಮನೆ ಇಲ್ಲದೆ ಪರದಾಟ ಸೇರಿದಂತೆ ಸಾಕಷ್ಟು ತೊಂದರೆಗಳನ್ನು ಎದುರಿಸಿದರು. ಈ ಸವಾಲುಗಳ ಹೊರತಾಗಿಯೂ, ನಟನೆಯ ಮೇಲಿನ ಅವರ ಉತ್ಸಾಹವು ಎಲ್ಲಾ ಕಷ್ಟಗಳನ್ನ ಮೆಟ್ಟಿ ನಿಂತು ಬಾಲಿವುಡ್ ಸಿನಿಮಾದ ಲೆಜೆಂಡರಿ ನಾಯಕನಾಗಿ ಬೆಳೆಯೋದಕ್ಕೆ ಸಾಧ್ಯಮಾಡಿತು. 

Tap to resize

ಅಮಿತಾಭ್ ಬಚ್ಚನ್ (Amitabh Bacchan)
ಬಾಲಿವುಡ್ ಶೇನ್ ಶಾ ಆಗಿ ಮೆರೆಯುತ್ತಿರುವ ನಟ ಅಮಿತಾಭ್ ಬಚ್ಚನ್ ಕೂಡ ಹಿಂದೆ ಅಂದರೆ ಕರಿಯರ್ ನ ಆರಂಭದ ದಿನಗಳಲ್ಲಿ ತುಂಬಾನೆ ಹಣಕಾಸಿನ ಸಮಸ್ಯೆಗಳನ್ನ ಎದುರಿಸಿದ್ದರು, ಅಷ್ಟೇ ಅಲ್ಲ ಸ್ವಂತ ಮನೆ ಇಲ್ಲದೇ ಇವರೂ ಕಷ್ಟಪಟ್ಟಿದ್ದರು. ಬಾಲಿವುಡ್ ನಲ್ಲಿ ಯಶಸ್ಸನ್ನು ಪಡೆಯೋದಕ್ಕೂ ಮುನ್ನ ಅವರು ಭಾರಿ ರಿಜೆಕ್ಷನ್ ಗಳನ್ನ ಎದುರಿಸಬೇಕಾಗಿ ಬಂದಿತ್ತು. 

ಮಿಥುನ್ ಚಕ್ರವರ್ತಿ (Mithun Chakravarthy)
ಪ್ರಸಿದ್ಧ ನಟ ಮಿಥುನ್ ಚಕ್ರವರ್ತಿ ಅವರು ಮೊದಲು ಮುಂಬೈಗೆ ಬಂದಾಗ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ದರು, ಅವರಿಗೆ ಉಳಿದುಕೊಳ್ಳಲು ಮನೆ ಸಹ ಇರಲಿಲ್ಲವಂತೆ. ಚಲನಚಿತ್ರೋದ್ಯಮದಲ್ಲಿ ತಮ್ಮನ್ನು ತಾವು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಅವರು ಸಣ್ಣ, ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು, ಕೊನೆಗೆ ಅವರ ಶ್ರಮದಿಂದ ಸೂಪರ್ ಸ್ಟಾರ್ ಆಗಿ ಮೆರೆದರು. 
 

ಶಾರುಖ್ ಖಾನ್ (Sharukh Khan)
ಶಾರುಖ್ ಖಾನ್ ಸಹ ಅಷ್ಟು ಸುಲಭವಾಗಿ ಬಾಲಿವುಡ್ ಬಾದ್‌ಷಾ ಆಗಿಲ್ಲ. ಅವರು ಹಣಕಾಸಿನ ಸಮಸ್ಯೆಗಳಿತ್ತು. ಆರಂಭದಲ್ಲಿ ಶಾರುಖ್ ತಮ್ಮ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ನಟಿಸಲು ಅವಕಾಶಕ್ಕಾಗಿ ಅಲೆಯುತ್ತಿದ್ದಾಗ, ಸ್ನೇಹಿತರ ಮನೆಯಲ್ಲಿ ನೆಲದ ಮೇಲೆ ಮಲಗಿದ್ದೂ ಇದೆ. ಇಂದು ಅಂತ ನಟ ಚಿನ್ನದ ಸ್ಪೂನ್ ನಲ್ಲಿ ತಿನ್ನುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. 

ಅಕ್ಷಯ್ ಕುಮಾರ್ (Akshay Kumar)
ಅಕ್ಷಯ್ ಕುಮಾರ್ ಸಹ ಸ್ಟಾರ್ ಆಗೋ ಮುನ್ನ ಅನೇಕ ಅಡೆತಡೆಗಳನ್ನು ಎದುರಿಸಿದರು. ಅವರು ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಮತ್ತು ಸಿನಿಮಾದಲ್ಲಿ ಅವಕಾಶ ಸಿಗೋ ಮೊದಲು ಇವರು ಸಣ್ಣಪುಟ್ಟ ಕೆಲಸಗಳನ್ನ ಮಾಡಿ, ತಮ್ಮ ಖರ್ಚು ನಿರ್ವಹಿಸುತ್ತಿದ್ದರು.  ಅವರ ದೃಢನಿಶ್ಚಯ ಮತ್ತು ಡೆಡಿಕೇಶನ್ ಫಲವಾಗಿ ಇಂದು ಬಹು ದೊಡ್ಡ ನಟರಾಗಿ ಮೆರೆಯುತ್ತಿದ್ದಾರೆ. 

ಅನಿಲ್ ಕಪೂರ್ (Anil Kapoor)
ಬಾಲಿವುಡ್ ನಟನಾಗುವ ಮೊದಲು, ಅನಿಲ್ ಕಪೂರ್ ಹಲವಾರು ಚಾಲೆಂಜಸ್ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸಿದ್ದರು. ಪಾತ್ರಗಳನ್ನು ನಿರ್ವಹಿಸಲು ಕಷ್ಟಪಟ್ಟು ಕೆಲಸ ಮಾಡುವಾಗ ಅವರು ತುಂಬಾನೆ ಸರಳ ಜೀವನ ನಡೆಸುತ್ತಿದ್ದರು. ಸಣ್ಣದೊಂದು ಮನೆಯಲ್ಲಿ ವಾಸಿಸುತ್ತಿದ್ದರಂತೆ. ಇವತ್ತು ಸ್ಟಾರ್ ನಟ ಆಗಿ ಗುರುತಿಸಿಕೊಂಡಿದ್ದಾರೆ. 
 

ನವಾಜುದ್ದೀನ್ ಸಿದ್ದಿಕಿ (Navazuddin Siddiquie)
ನವಾಜುದ್ದೀನ್ ಸಿದ್ದಿಕಿ ಅವರ ಜನಪ್ರಿಯತೆ ಜರ್ನಿ ತುಂಬಾನೆ ತಿರುವುಗಳನ್ನು ಹೊಂದಿದೆ. ತೀವ್ರ ಬಡತನ, ಮನೆ ಮಠ ಇಲ್ಲದ ಪರಿಸ್ಥಿತಿ ನವಾಜುದ್ದೀನ್ ಸಿದ್ದಿಕಿಯದು. ಅವರು ಮುಂಬೈನಲ್ಲಿ ಸಣ್ಣ, ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು ಮತ್ತು ನಟನೆಯ ಅವಕಾಶಗಳಿಗಾಗಿ ಕಾಯುತ್ತಿರುವಾಗ ಹಣಕಾಸಿನ ಸಮಸ್ಯೆಗಳನ್ನು ಸಹ ಎದುರಿಸಿದರು. ಅವರ ಕಠಿಣ ಪರಿಶ್ರಮ ಮತ್ತು ಪ್ರತಿಭೆಯಿಂದಾಗಿ ಇದೀಗ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. 

Latest Videos

click me!