ಸಿನಿಮಾ ಆಫರ್ ಕೊಟ್ಟು, 2 ತಿಂಗಳು ನನ್ನ ಜೊತೆ….! ತೆಲುಗು ನಿರ್ದೇಶಕನಿಂದಾದ ಕಾಸ್ಟಿಂಗ್ ಕೌಚ್ ಅನುಭವ ಬಿಚ್ಚಿಟ್ಟ ಬಾಲಿವುಡ್ ನಟಿ

First Published | Aug 1, 2024, 4:52 PM IST

ಬಾಲಿವುಡ್ ನಟಿ ಮಿತಾ ವಷಿಷ್ಠ ತೆಲುಗು ನಿರ್ದೇಶಕನಿಂದ ತಮಗಾದ ಕಾಸ್ಟಿಂಗ್ ಕೌಚ್ ನ ಭಯಾನಕ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 
 

ಮಿತಾ ವಷಿಷ್ಠ (Mita Vashisht) ಬಾಲಿವುಡ್ ನ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಇವರು ಕಳೆದ 30 ವರ್ಷಗಳಿಂದ ಹಿಂದಿ, ತಮಿಳು, ತೆಲುಗು, ಮರಾಠಿ, ಬಂಗಾಳಿ ಸಿನಿಮಾ ಮತ್ತು ಸೀರಿಯಲ್‌ಗಳಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. 

ಮಿತಾ ವಶಿಷ್ಠ ಅವರಿಗೆ ಬಾಲಿವುಡ್‌ನಲ್ಲಿ (Bollywood) ದೊಡ್ಡ ಹೆಸರೂ ಇದೆ. ಅವರು ಅನೇಕ ಹಿಟ್ ಚಿತ್ರಗಳ ಭಾಗವಾಗಿದ್ದಾರೆ. 1987 ರಿಂದ ಇಂದಿನವರೆಗೂ ಹಲವು ಹಿಟ್ ಸಿನಿಮಾಗಳಲ್ಲೂ ನಟಿಸಿದ ಅನುಭವ ಇವರಿಗೆ. ನಟಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಅವರು ತಮ್ಮೊಂದಿಗೆ ಆದಂತಹ ಕಾಸ್ಟಿಂಗ್ ಕೌಚ್ ಬಗ್ಗೆ ಹೇಳಿದರು.

Tap to resize

ಜನಪ್ರಿಯ ನಿರ್ದೇಶಕರಿಂದ ತಮಗಾದ ಕೆಟ್ಟ ಅನುಭವವನ್ನು ಬಿಚ್ಚಿಟ್ಟ ನಟಿ ಮಿತಾ, ಅದೇ ಸಮಯದಲ್ಲಿ, ಆ ಘಟನೆಯ ನಂತರ ತಾನು ಹೇಗೆ ಇನ್ನಷ್ಟು ಸ್ಟ್ರಾಂಗ್ ಆದೆ ಅನ್ನೋದನ್ನು ಸಹ ಮಿತಾ ಬಹಿರಂಗಪಡಿಸಿದ್ದಾರೆ.

ಮಿತಾ ವಶಿಷ್ಠ ಬಾಲಿವುಡ್‌ನಲ್ಲಿ ತನ್ನ ನಿಷ್ಕಳಂಕ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ತನ್ನೊಂದಿಗೆ ನಡೆದ ಕಾಸ್ಟಿಂಗ್ ಕೌಚ್  (casting couch) ಘಟನೆಯನ್ನು ನೆನಪಿಸಿಕೊಂಡ ಹಿತಾ 'ತೆಲುಗು ಫಿಲಂಮೇಕರ್ ಒಬ್ಬರು ನನಗೆ ಸಿನಿಮಾ ಆಫರ್ ನೀಡಿ, ಅವರ ಜೊತೆ ಇರುವಂತೆ ಹೇಳಿರೋದಾಗಿ ತಿಳಿಸಿದ್ದಾರೆ. 

ಈ ಕುರಿತು ಮಾತನಾಡಿದ ಮಿತಾ ಆ ದಿನಗಳಲ್ಲಿ ನಾನು ಚೆನ್ನೈ ಫಿಲಂ ಫೆಸ್ಟಿವಲ್‌ನಲ್ಲಿ ಭಾಗಿಯಾಗಲು ತೆರಳಿದ್ದೆ. ತೆಲುಗು ನಿರ್ದೇಶಕರೊಬ್ಬರು ನನಗೆ ತೆಲುಗು ಚಿತ್ರದಲ್ಲಿ ಲೀಡ್ ರೋಲ್ ನೀಡುವ ಅವಕಾಶ ನೀಡಿದರು. ಅವರ ಕೊನೆಯ ಚಿತ್ರದಲ್ಲಿ ಅವರೊಂದಿಗೆ ಕೆಲಸ ಮಾಡಿದ ನಟಿ ರಾಷ್ಟ್ರ ಪ್ರಶಸ್ತಿಯನ್ನು (national award) ಸಹ ಗೆದ್ದಿದ್ದರು. ಹಾಗಾಗಿ ನಾನು ಖುಷಿಯಾಗಿದ್ದೆ. 

ಆದರೆ ನನಗೆ ಲೀಡ್ ರೋಲ್ ಆಫರ್ ನೀಡಿದ ನಿರ್ದೇಶಕರು, ನಾನು ಅವರೊಂದಿಗೆ ಎರಡು ತಿಂಗಳು ಇರಬೇಕು ಎಂದು ಕೇಳಿದರು. ಒಂದು ಕ್ಷಣ ಅವರ ಇಂಗ್ಲಿಷ್ ವೀಕ್ ಆಗಿರಬಹುದು, ಅದಕ್ಕೆ ಹಾಗೆ ಹೇಳಿರಬಹುದು, ಅವರ ಸಿನಿಮಾದ ಪಾತ್ರದ ತಯಾರಿಗಾಗಿ ನಾನು ಅವರ ಮನೆಗೆ ಹೋಗಬೇಕಾಗುತ್ತೆ ಎಂದು ಅವರು ಹೇಳಿದ್ದಾರೆ ಎಂದು ಅಂದುಕೊಂಡೆ.  ಆದರೆ ನಿರ್ದೇಶಕರು ತಮ್ಮ ಮಾತನ್ನು ಮತ್ತೆ ಮತ್ತೆ ಒತ್ತಿ ಹೇಳಿದರು. ಅವರ ಜೊತೆ ಎರಡು ತಿಂಗಳು ಇರಬೇಕು ಎಂದು ಹೇಳಿದಾಗ ಶಾಕ್ ಆಗಿ ಅಲ್ಲಿಂದ ಎದ್ದು ಬಂದೆ ಎಂದಿದ್ದಾರೆ ಮಿತಾ ವಷಿಷ್ಠ. 

ಅಷ್ಟೇ ಅಲ್ಲ ನಟಿ ಅಲ್ಲಿಂದ ಎದ್ದು ಹೊರಡೋದಕ್ಕೆ ಸಿದ್ಧವಾಗ ಆ ನಿರ್ದೇಶಕರು (director) ಬಾಗಿಲಿಗೆ ಅಡ್ಡ ನಿಂತು ಹೊರಗೆ ಹೋಗೋದನ್ನು ತಡೆದರಂತೆ. ಆದರೆ ನಟಿ ಏನೋ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ತಮ್ಮ ಸ್ನೇಹಿತರಿದ್ದ ರೂಮಿಗೆ ಓಡಿ ಹೋದರು ಎಂದು ಸಂದರ್ಶನದಲ್ಲಿ ನಟಿ ಹೇಳಿದ್ದಾರೆ. 

ನೇರ ದಿಟ್ಟ ಮಾತಿನ ಮಿತಾ ವಷಿಷ್ಠ ಸಿನಿಮಾ ಆರಂಭಕ್ಕೂ ಮುನ್ನವೇ ಒಂದು ಸಿನಿಮಾಗಾಗಿ ತಾನು ಯಾರೊಂದಿಗೂ ಮಲಗೋದಿಲ್ಲ ಎಂದು ನಿರ್ದೇಶಕರಿಗೆ ದೃಢವಾಗಿ ಹೇಳುತ್ತಿದ್ದರಂತೆ. ಇದನ್ನು ಕೇಳಿದ ನಂತರ ಕೆಲವರು ನಟಿಯನ್ನು ಚಿತ್ರದಿಂದ ಹೊರಹಾಕಿದರೆ, ಕೆಲವರು ಗೌರವದಿಂದ ಇವರಿಗೆ ಅವಕಾಶ ಕೊಟ್ಟರು. 

Latest Videos

click me!