ಹೀರೋಗಳಿಗಿಂತೆ ಬಲು ದುಬಾರಿ ವಿಲನ್ಸ್, ಅತ್ಯಂತ ಕಾಸ್ಟ್ಲಿ ವಿಲನ್ ಯಾರು ಗೊತ್ತಾ?

Published : Aug 02, 2024, 12:10 PM IST

ಸಿನಿಮಾದಲ್ಲಿ ಹೀರೋಗಳು ಎಷ್ಟು ಪ್ರಾಮುಖ್ಯವು ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ವಿಲನ್ಸ್ ಸಹ ಇಂಪಾರ್ಟಂಟ್. ಹಾಗಾಗಿ ಈವಾಗ ಭಾರತದಲ್ಲಿ ವಿಲನ್ ಗಳು ತುಂಬಾ ದುಬಾರಿಯಾಗಿದ್ದಾರೆ.   

PREV
110
ಹೀರೋಗಳಿಗಿಂತೆ ಬಲು ದುಬಾರಿ ವಿಲನ್ಸ್, ಅತ್ಯಂತ ಕಾಸ್ಟ್ಲಿ ವಿಲನ್ ಯಾರು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೂಪರ್ ಹಿಟ್ ಆಗೋದಕ್ಕೆ ಹೀರೋಗಳಿಗಿಂತಲೂ ವಿಲನ್ ರೋಲ್ ಮಾಡುವವರೇ ಕಾರಣ ಆಗ್ತಿದ್ದಾರೆ. ಹಾಗಾಗಿ ಸಿನಿಮಾಗೆ ವಿಲನ್ ಆಗಿ ದಿಗ್ಗಜ ನಟರನ್ನೇ ತರ್ತಿದ್ದಾರೆ. ಈಗಂತೂ ಟಾಪ್ ಹೀರೋಗಳೆಲ್ಲ ವಿಲನ್ ಆಗ್ತಿದ್ದಾರೆ. ನಮ್ಮ ಸಿನಿಮಾ ರಂಗದ ದುಬಾರಿ ವಿಲನ್ ಗಳು (highest paid villain) ಯಾರ್ಯಾರು ಅನ್ನೋದನ್ನ ನೋಡೋಣ. 
 

210

ಸೈಫ್ ಆಲಿ ಖಾನ್ (Saif Ali Khan)
ಸೈಫ್ ಆಲಿ ಖಾನ್ ಈಗಾಗಲೇ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಮುಂಬರುವ ದೇವರಾ ಸಿನಿಮಾದಲ್ಲೂ ಸೈಫ್ ವಿಲನ್ ಆಗಿ ನಟಿಸುತ್ತಿದ್ದಾರೆ. ಇವರ ಫೀಸ್ ಬರೋಬ್ಬರಿ 8 ಕೋಟಿ. 

310

ಸಂಜಯ್ ದತ್ (Sanjay Dutt)
ಸಂಜಯ್ ದತ್ ಹಲವು ವರ್ಷಗಳಿಂದ ವಿಲನ್ ಪಾತ್ರ ಮಾಡುತ್ತಲೇ ಬಂದಿದ್ದಾರೆ. ಇವರ ಮುಂಬರುವ ಸಿನಿಮಾ ಡಬಲ್ ಐಸ್ಮಾರ್ಟ್, ಕೆಡಿ ಡೆವಿಲ್. ಇದರಲ್ಲೂ ಅವರು ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್ ಫೀಸ್ 10 ಕೋಟಿ.  

410

ವಿಜಯ್ ಸೇತುಪತಿ (Vijay Sethupathi)
ವಿಜಯ್ ಸೇತುಪತಿ ಹೆಚ್ಚಾಗಿ ವಿಲನ್ ಆಗಿಯೇ ನಟಿಸುತ್ತಿದ್ದು, ಇವರೊಬ್ಬ ಬೆಸ್ಟ್ ನಟ ಕೂಡ ಹೌದು. ವಿಜಯ್ ಸೇತುಪತಿ ಇದ್ರೆ ಫಿಲಂ ಹಿಟ್ ಅಂತಾನೂ ಹೇಳಬಹುದು. ಅಂತ ನಟ ಒಂದು ಸಿನಿಮಾಗೆ ತೆಗೆದುಕೊಳ್ಳುವ ಫೀಸ್ 21 ಕೋಟಿ. 

510

ಬಾಬಿ ಡಿಯೋಲ್  (Bobby Deol)
ಬಾಬಿ ಡಿಯೋಲ್ ಸಿನಿಮಾ ಇಂಡಷ್ಟ್ರಿಗೆ ಈಗಷ್ಟೇ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇವರ ಮುಂದಿನ ಸಿನಿಮಾ ಕಂಗುವಾ, ದೇವರಾ, ಹರಿಹರವೀರ ಮಲ್ಲು. ಈ ಸಿನಿಮಾಗಳಲ್ಲಿ ವಿಲನ್ ಆಗೋದಕ್ಕೆ ನಟ 8 ಕೋಟಿ ಚಾರ್ಜ್ ಮಾಡಿದ್ದಾರೆ. 

610

ಕಮಲ್ ಹಾಸನ್ (Kamal Hasan)
ಕಮಲ್ ಹಾಸನ್ ಭಾರತೀಯ ಸಿನಿಮಾ ಇತಿಹಾಸದ ತುಂಬಾ ದುಬಾರಿ ವಿಲನ್. ಇತ್ತಿಚೆಗೆ ಬಂದ ಕಲ್ಕಿ 2898 ಎಡಿ ಸಿನಿಮಾಕ್ಕಾಗಿ ಕಮಲ್ 25 ಕೋಟಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. 

710

ಇಮ್ರಾನ್ ಹಶ್ಮಿ (Imran Hashmi)
ಹಲವಾರು ಸಿನಿಮಾಗಳಲ್ಲಿ ಹೀರೋ ಆಗಿ ಗುರುತಿಸಿಕೊಂಡ ನಟ ಇಮ್ರಾನ್ ಹಶ್ಮಿ, ಇತ್ತೀಚಿಗೆ ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ. ಇವರ ಮುಂದಿನ ಚಿತ್ರ ಒಜಿ. ಇದಕ್ಕಾಗಿ ನಟ 8 ಕೋಟಿ ಪಡೆಯುತ್ತಿದ್ದಾರೆ. 

810

ನವಾಝುದ್ದೀನ್ ಸಿದ್ದಿಕಿ (nawazuddin Siddique)
ಇವರು ಹೆಚ್ಚಾಗಿ ವಿಲನ್ ಆಗಿಯೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಮುಂಬರುವ ಸಿನಿಮಾ ಫೋಭಿಯಾ 2, ದ ಮಾಯಾ ಟೇಪ್, ಹಡ್ಡಿ ಇತ್ಯಾದಿ. ಇವರು ಸಹ ಒಂದು ಸಿನಿಮಾಗೆ 8 ಕೋಟಿ ಚಾರ್ಜ್ ಮಾಡುತ್ತಿದ್ದಾರೆ. 

910

ಫಾಹದ್ ಫಾಜಿಲ್ (Fahad Fazil)
ಪುಷ್ಪಾ 2 ಸಿನಿಮಾದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಿರುವ ಫಾಹದ್ ಫಾಜಿಲ್ ಒಂದು ಸಿನಿಮಾಗೆ ತೆಗೆದು ಕೊಳ್ಳುವ ಫೀಸ್ 8 ಕೋಟಿ. 

1010

ಎ. ಜೆ ಸೂರ್ಯ  (A.J Suryah)
ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸುವ ಎ. ಜೆ ಸೂರ್ಯ ಒಂದು ಸಿನಿಮಾಗೆ 21 ಕೋಟಿ ಪಡೆಯುತ್ತಾರೆ ಎನ್ನಲಾಗುತ್ತದೆ. ಇವರು ರಾಮ್ ಚರಣ್ ನಟಿಸಲಿರುವ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸಲಿದ್ದಾರೆ. 
 

Read more Photos on
click me!

Recommended Stories