ಮಲಗಿದ್ರೂ ಬಿಡ್ತಿಲ್ಲ 'ಅದನ್ನು ಮಾಡು ಅಂತಾರೆ': ದಡೂತಿ ಗಂಡನ ಈ ಒಂದು ಅಭ್ಯಾಸಕ್ಕೆ ನಟಿ ಮಹಾಲಕ್ಷ್ಮಿ ಕಣ್ಣೀರು!

Published : Dec 10, 2023, 01:30 AM IST

ಕಾಲಿವುಡ್‌ನ ಫ್ಯಾಟ್‌ ಮ್ಯಾನ್‌ ರವೀಂದರ್‌ ಚಂದ್ರಶೇಖರನ್‌ ಆಗಾಗ ಒಂದಿಲ್ಲೊಂದು ವಿಚಾರಕ್ಕೆ ಮುನ್ನೆಲೆಗೆ ಬರುತ್ತಿರುತ್ತಾರೆ. ಇದೀಗ ಪತಿಯ ಈ ಕಾಟದಿಂದ ಬೇಸತ್ತಿದ್ದೇನೆ ಎಂದು ಪತ್ನಿ ಮಹಾಲಕ್ಷ್ಮೀ ಸಂದರ್ಶನದಲ್ಲಿ ಹೇಳಿಕೊಂಡು ಅಳಲು ತೋಡಿಕೊಂಡಿದ್ದಾರೆ.

PREV
17
ಮಲಗಿದ್ರೂ ಬಿಡ್ತಿಲ್ಲ 'ಅದನ್ನು ಮಾಡು ಅಂತಾರೆ': ದಡೂತಿ ಗಂಡನ ಈ ಒಂದು ಅಭ್ಯಾಸಕ್ಕೆ ನಟಿ ಮಹಾಲಕ್ಷ್ಮಿ ಕಣ್ಣೀರು!

ಕಾಲಿವುಡ್‌ ನಿರ್ಮಾಪಕ ರವಿಂದರ್‌ ಚಂದ್ರಶೇಖರನ್‌ ಜೊತೆ ಕಿರುತೆರೆ ನಟಿ ಮಹಾಲಕ್ಷ್ಮೀ ಶಂಕರ್‌ 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದು ಮಹಾಲಕ್ಷ್ಮೀ ಅವರಿಗೆ ಎರಡನೇ ಮದುವೆ. ಆದ್ರೆ ಎರಡನೇ ಮದುವೆಗಿಂತ ಹೆಚ್ಚು ಸುದ್ದಿಯಾಗಿದ್ದು ಈ ಜೋಡಿಯ ದೇಹದಾಡ್ಯ. 

27

ರವೀಂದರ್  ದಡೂತಿ ದೇಹವನ್ನು ಹೊಂದಿದ್ದಾರೆ. ಇದೇ ಕಾರಣದಿಂದ ಮದುವೆ ಸಂದರ್ಭದಲ್ಲಿ ಈ ಜೋಡಿ ಟ್ರೋಲ್‌ಗೆ ತುತ್ತಾಗಿತ್ತು. ಇದೀಗ ಮಹಾಲಕ್ಷ್ಮೀ ಅವರು ತಮ್ಮ ಪತಿಯ ಡಯಟಿಂಗ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. 

37

ತಮ್ಮ ಕೆಲಸದ ನಡುವೆಯೂ ಗಂಡನ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸುತ್ತಿದ್ದಾರೆ ಮಹಾಲಕ್ಷ್ಮೀ. ಆದರೆ ಪತಿಯ ತೂಕ ಇಳಿಸುವ ಭರದಲ್ಲಿ ತಮ್ಮ ತೂಕವನ್ನೇ ಹೆಚ್ಚಿಸಿಕೊಳ್ಳುತ್ತಿದ್ದಾರಂತೆ. ಈ ವಿಚಾರವನ್ನು  ಸಂದರ್ಶನವೊಂದರಲ್ಲಿ ಹೇಳಿರುವ ಮಹಾಲಕ್ಷ್ಮೀ ಅಳಲು ತೋಡಿಕೊಂಡಿದ್ದಾರೆ. 

47

ರವೀಂದರ್ ಅವರ ತೂಕ ಕಡಿಮೆ ಮಾಡಲು ಎಷ್ಟೇ ಪ್ರಯತ್ನಿಸುತ್ತಿದ್ದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ನಾನು ಅವರ ಜೊತೆ ಇದ್ರೆ ನನ್ನ ಡಯೆಟ್ ಕೂಡ ಮಿಸ್ ಆಗುತ್ತಿದೆ. ನಾನು ಮಲಗಿದ್ದರೂ ಸಹ ನನ್ನನ್ನು ಎಬ್ಬಿಸಿ ತಿನ್ನು ಎಂದು ಒತ್ತಾಯ ಮಾಡುತ್ತಾರೆ. 

57

ತಿನ್ನಲು ಶುರು ಮಾಡಿದ್ರೆ ಹೊಟ್ಟೆ ತುಂಬಾ ತಿನ್ನುತ್ತಿದ್ದೇನೆ. ಹೀಗಾಗಿ ನನ್ನ ನಿದ್ರೆಯೂ ಹಾಳಾಗುತ್ತಿದೆ, ಜೊತೆಗೆ ತೂಕವೂ ಹೆಚ್ಚಾಗುತ್ತಿದೆ. ಮುಂದೊಂದು ದಿನ ರವೀಂದರ್ ಅವರಂತೆ ಆದರೂ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

67

ತಮಿಳು ಸಿನಿಮಾ ನಿರ್ಮಾಪಕ ರವೀಂದರ್‌ ಮತ್ತು ಮಹಾಲಕ್ಷ್ಮೀ ಜೋಡಿ ಕಳೆದ ವರ್ಷದ ಸೆ. 1ರಂದು ತಿರುಪತಿಯಲ್ಲಿ ಅದ್ದೂರಿ ಮದುವೆಯಾಗಿತ್ತು. ಈ ಜೋಡಿಗೆ ಶುಭಾಶಯಗಳಿಗಿಂತ ನೆಗೆಟಿವ್‌ ಮಾತುಗಳೇ ಕೇಳಿಬಂದಿದ್ದವು. ಈ ಜೋಡಿ ಬಗ್ಗೆ ಕಟುವಾಗಿ ಕಾಮೆಂಟ್‌ ಮಾಡಿದವರೇ ಹೆಚ್ಚು. 

77

ಅದ್ಯಾವ ಮಟ್ಟಿಗೆ ಎಂದರೆ, ಈ ಜೋಡಿ ಮೂರು ತಿಂಗಳ ಬಾಳಿಕೆ ಬಂದರೆ ಹೆಚ್ಚು ಎಂದಿದ್ದರು. ಹಾಗೇ ಕೆಟ್ಟ ಮಾತುಗಳನ್ನಾಡಿರುವವರಿಗೆ ಮೊದಲ ವಿವಾಹ ವಾರ್ಷಿಕೋತ್ಸವದ ದಿನವೇ, ಪತ್ನಿಯ ಬಗ್ಗೆ ಸುದೀರ್ಘ ಪತ್ರ ಬರೆದು ತಮ್ಮ ಪ್ರೀತಿಯನ್ನು ಹೊರಗೆಡವಿದ್ದರು.

Read more Photos on
click me!

Recommended Stories