ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮತ್ತು ಮನಾರ ಲವ್‌ ಸ್ಟೋರಿ

Suvarna News   | Asianet News
Published : May 06, 2020, 07:04 PM ISTUpdated : May 07, 2020, 02:52 PM IST

ಕೊರೋನಾ ಲಾಕ್‌ಡೌನ್ ಮಧ್ಯೆ ಬಾಲಿವುಡ್ ಖ್ಯಾತನಾಮರು ತಮ್ಮ ಸ್ಮರಣೀಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸುನಿಲ್ ಶೆಟ್ಟಿ ಕುಟುಂಬದ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಪತ್ನಿ ಮಾನಾ, ಮಗಳು ಅಥಿಯಾ ಮತ್ತು ಮಗ ಅಹಾನ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸುನಿಲ್ ಶೆಟ್ಟಿ 29 ವರ್ಷಗಳ ಹಿಂದೆ 1991ರಲ್ಲಿ ಮನಾ ಖಾದ್ರಿ ಅವರನ್ನು ವಿವಾಹವಾದರು. ಮನಾಳನ್ನು ಮದುವೆಯಾಗಲು ಸುನಿಲ್ ಶೆಟ್ಟಿ ಸಾಕಷ್ಟು ಸೈಕಲ್‌ ಹೊಡೆಯಬೇಕಾಗಿತ್ತು. ಸುನಿಲ್ ಶೆಟ್ಟಿ ಮನಾ ಅವರ ತಂದೆ ತಾಯಿಯ ಅವರನ್ನು ಒಪ್ಪಿಸಲು  9 ವರ್ಷಗಳನ್ನು ತೆಗೆದು ಕೊಂಡಿದ್ದರಂತೆ.

PREV
113
ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಮತ್ತು ಮನಾರ ಲವ್‌ ಸ್ಟೋರಿ

ಕರ್ನಾಟಕದ ಕರಾವಳಿ ನಂಟಿನ ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ ಅಣ್ಣ ಎಂದೇ ಫೇಮಸ್‌.

213

ಕರ್ನಾಟಕದ ಕರಾವಳಿಯ ಸುನಿಲ್ ಶೆಟ್ಟಿ ಮದುವೆಯಾಗಿದ್ದು ಗುಜರಾತ್‌ನ ಮುಸ್ಲಿಂ ಕುಟುಂಬಕ್ಕೆ ಸೇರಿದ  ಮನಾ ಖಾದ್ರಿ ಅವರನ್ನು. ಸುನಿಲ್ ಶೆಟ್ಟಿಯವರ ಪ್ರೇಮಕಥೆ ಪೇಸ್ಟ್ರಿ ಅಂಗಡಿಯಿಂದ ಪ್ರಾರಂಭವಾಯಿತು. ಮನಾರನ್ನು ನೋಡಿದ ಫಸ್ಟ್‌ ಟೈಮ್‌ಗೆ ಬೋಲ್ಡ್‌ ಆದರಂತೆ ಸುನೀಲ್‌.

313

ಹೇಗಾದರೂ, ಮನಾಳ ಹೃದಯವನ್ನು ತಲುಪಲು, ಸುನಿಲ್ ಮೊದಲಿಗೆ ಆಕೆಯ ಸಹೋದರಿಯೊಂದಿಗೆ ಸ್ನೇಹ ಬೆಳೆಸಿದರು. ಇದರ ನಂತರ, ಮೊದಲ ಮೀಟಿಂಗ್‌ನಲ್ಲೇ ತಡಮಾಡದೆ ಪ್ರಪೋಸ್‌ ಮಾಡಿದ್ದರಂತೆ ಬಾಲಿವುಡ್‌ನ ನಟ,  ಮನಾ ಕೂಡ ತಕ್ಷಣ ಎಸ್‌ ಅಂದರಂತೆ.

413

ಆದರೆ ನಿಜವಾದ ಟ್ವೀಸ್ಟ್‌ ಎಂದರೆ ಇಬ್ಬರ ಧರ್ಮ ಬೇರೆಯಾಗಿದದ್ದು, ಆ ಕಾರಣದಿಂದ ಇಬ್ಬರ ಪೋಷಕರು ಮದುವೆಗೆ ಸಿದ್ಧರಾಗಿರಲಿಲ್ಲ. ಪೋಷಕರು ನಿರಾಕರಿಸಿದ ನಂತರವೂ ಇಬ್ಬರ ಪ್ರೀತಿ ಮಾತ್ರ ಕಡಿಮೆಯಾಗಲಿಲ್ಲ.  

513

ಇಬ್ಬರೂ ತಮ್ಮ ಕುಟುಂಬಗಳನ್ನು ಮನವೊಲಿಸಲು  ನಿರಂತರವಾಗಿ  ಪ್ರಯತ್ನವನ್ನು ಮಾಡುತ್ತಲೇ ಇದ್ದರು. ಅಂತಿಮವಾಗಿ 9 ವರ್ಷಗಳ ನಂತರ, ಕುಟುಂಬವು ಅವರ ಪ್ರೀತಿಗೆ ತಲೆಬಾಗಬೇಕಾಯಿತು ಮತ್ತು 1991ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

613

ದಂಪತಿಗೆ ಅಥಿಯಾ ಮತ್ತು ಅಹಾನ್ ಶೆಟ್ಟಿ ಎಂಬ ಇಬ್ಬರು ಮಕ್ಕಳಿದ್ದಾರೆ. ಅಥಿಯಾ ಬಾಲಿವುಡ್‌ಗೆ ಕಾಲಿಟ್ಟರೆ, ಅಹಾನ್ ಆ  ತಯಾರಿಯಲ್ಲಿದ್ದಾರೆ.

713

ಸುನೀಲ್‌ ಶೆಟ್ಟಿಯ ಫ್ಯಾಮಿಲಿ ಫೋಟೋ.

ಸುನೀಲ್‌ ಶೆಟ್ಟಿಯ ಫ್ಯಾಮಿಲಿ ಫೋಟೋ.

813

ಸುನೀಲ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಮದುವೆಯ ನಂತರ 1992ರಲ್ಲಿ ಬಾಲ್ವಾನ್ ಸಿನಿಮಾದ ಮೂಲಕ.

913

ಸುನೀಲ್ ಶೆಟ್ಟಿ ಅವರ ಪತ್ನಿ ಮನಾ ಮುಂಬೈನ ವರ್ಲಿಯಲ್ಲಿ  ತನ್ನದೇ ಆದ ಇಂಟಿರೀಯರ್‌ ಶೋ ರೂಂ ನಡೆಸುತ್ತಿದ್ದರೆ, ಸುನೀಲ್ ತನ್ನದೇ ಆದ ಹೋಟೆಲ್ ಉದ್ಯಮದ ವ್ಯವಹಾರವನ್ನು ಹೊಂದಿದ್ದಾರೆ.

1013

ಯಶಸ್ವಿ ನಟ ಹಾಗೂ ಯಶಸ್ವಿ ಉದ್ಯಮಿ ಸಾಲಿಗೆ ಸೇರುವ ಇವರು ನಟನೆಯೊಂದಿಗೆ ಸ್ವಂತ ವ್ಯವಹಾರವನ್ನು ಮಾಡುವ ಟ್ರೆಂಡ್‌ ಪ್ರಾರಂಭಿಸಿದವರು.

1113

ಕ್ರಿಕೆಟ್ ಜೊತೆಗೆ, ಕಿಕ್ ಬಾಕ್ಸಿಂಗ್  ಚೆನ್ನಾಗಿ ಮಾಡುವ ಕನ್ನಡ ಮೂಲದ ಈ ಬಾಲಿವುಡ್‌ ನಟ ಕರಾಟೆ ಬ್ಲ್ಯಾಕ್‌ ಬೆಲ್ಟ್‌ ಹೋಲ್ಡರ್‌ ಕೂಡ ಹೌದು.

1213

ಕೇವಲ ನಮ್ಮ ಕರಾವಳಿಯ ನಂಟು ಮಾತ್ರ ಹೊಂದಿರುವುದು ಮಾತ್ರವಲ್ಲ ಕನ್ನಡದ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ. ನಮ್ಮ ಕಿಚ್ಚ ಸುದೀಪ್‌ ಜೊತೆ ಪೈಲ್ವಾನ್‌ ಚಿತ್ರದಲ್ಲಿ ನಟಿಸಿರುವ ಅಣ್ಣ.

1313

ಮೋಹರಾ, ಹೇರಾ ಫೇರಿ, ಧಡಕ್, ಬ್ಲ್ಯಾಕ್ಮೇಲ್ ಸುನೀಲ್‌ ನಟಿಸಿದ ಪ್ರಮುಖ ಚಿತ್ರಗಳಲ್ಲಿ ಕೆಲವು.

click me!

Recommended Stories