ಮನರಂಜನೆ, ಸಮಾಜಕ್ಕೆ ಸ್ಪಂದನೆ: ಮಾಧವನ್ ಎಂಬ ನಟನ ವಿಶೇಷ ಸಾಧನೆ

First Published | May 6, 2020, 4:43 PM IST

ವಿಭಿನ್ನ ಪಾತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಮ್ಯಾಡಿ ಅಲಿಯಾಸ್ ಮಾಧವನ್ ಮುದ್ದು ಮುಖಕ್ಕೆ ಬೀಳದವರು ಯಾರು ಹೇಳಿ? ನಗು ಮುಖದ ಈ ಸಿನಿಮಾ ಹೀರೋ, ನಿಜ ಜೀವನದಲ್ಲಿಯೂ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇವರ ಟೆಡ್ ಟಾಕ್ ಸಹ ಅಮೋಘ. ಇಂತ ಮಾದವನ್ ಬಗ್ಗೆ ಮತ್ತೊಂದಿಷ್ಟು ತಿಳಿಯದ ವಿಷಯಗಳು ಇಲ್ಲಿವೆ...

ತಮಿಳು ಬ್ರಾಹ್ಮಣ ಕುಟುಂಬದಲ್ಲಿ 1970 , ಜೂನ್ 1 ರಂದು ಮಾಧವನ್ ಜನಿಸಿದರು
ಮಾಧವನ್ ಅವರು ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಪದವೀಧರ.
Tap to resize

ಬ್ರಿಟಿಷ್ ಸೇನೆ, ರಾಯಲ್ ನೌಕಾ ಸಂಸ್ಥೆ ಮತ್ತು ವಾಯುಸೇನಾ ಸಂಸ್ಥೆಯಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದಾರೆ .
ಸಂತೋಷ್ ಶಿವನ್ ನಿರ್ದೇಶನದ ಸ್ಯಾಂಡಲ್ವುಡ್ ಟಾಕ್ ಎಂಬ ಜಾಹೀರಾತಿನಲ್ಲಿ ಮೊದಲಬಾರಿಗೆ ಬಣ್ಣ ಹಚ್ಚಿದರು.
ಆರಂಭದ ದಿನಗಳಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಮ್ ಅವರ ನಿರ್ದೇಶನದ ಇರುವರ್ ಸಿನಿಮಾದಿಂದ ತಿರಸ್ಕೃತಗೊಂಡಿದ್ದರು .
1997 ರಲ್ಲಿ ಫ್ರೆಡ್ ಒಲೆನ್ ರೇಯ್ ಎಂಬ ಹಾಲಿವುಡ್ ಚಿತ್ರದಲ್ಲಿ ಭಾರತೀಯ ಪೊಲೀಸ್ ಆಫೀಸರ್ ಆಗಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು .
ಕನ್ನಡದ ಶಾಂತಿ ಶಾಂತಿ ಶಾಂತಿ ಚಿತ್ರದಲ್ಲಿ ಅಬ್ಬಾಸ್ ಅವರ ಜೊತೆ ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.ಆದರೆ ಈ ಸಿನಿಮಾ ಜನಮನ್ನಣೆ ಗಳಿಸುವಲ್ಲಿ ವಿಫಲವಾಯಿತು .
1999 ರಲ್ಲಿ ಮಣಿರತ್ನಮ್ ಅವರು ತಮ್ಮ ಅಲೆಯುಪಾಯುತೆ ಸಿನಿಮಾಕ್ಕೆ ಮಾಧವನ್ ಅವರನ್ನು ನಾಯಕನನ್ನಾಗಿ ಅವಕಾಶ ಕೊಟ್ಟರು.ಈ ಸಿನಿಮಾ ಮಾಧವನ್ ಅವರಿಗೆ ಉತ್ತಮ ಪ್ರಶಂಸೆ ಮತ್ತು ಯಶಸ್ಸು ತಂದುಕೊಟ್ಟಿತು .
ನಟ ಆರ್ ಮಾಧವನ್ ಪುತ್ರ ವೇದಾಂತ್ ಈಗ ಅಂತಾರಾಷ್ಟ್ರೀಯ ಈಜು ಚಾಂಪಿಯನ್!
ಕಮಲ್ ಹಾಸನ್ ಸೇರಿದಂತೆ ಅನೇಕ ಸ್ಟಾರ್ ನಂತರ ಜೊತೆ ಮಾಧವನ್ ಅಭಿನಯಿಸಿದ್ದಾರೆ.ಅಲ್ಲಿಂದ ಇಲ್ಲಿಯವರೆಗೂ ಮಾಧವನ್ ವಿಭಿನ್ನ , ವಿಶೇಷ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ .
ಈವರೆಗೂ ನಾಲ್ಕು ಫಿಲಂ ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಪೇಟ ಎಂಬ ಸಂಸ್ಥೆಯ ಮೂಲಕ ಸಸ್ಯಾಹಾರದ ಬಗ್ಗೆ ಜಾಗೃತಿ ಮೂಡಿಸುತ್ತಾ ಅನೇಕ ಸಮಾಜಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ .

Latest Videos

click me!