ವರ್ಷಕ್ಕೆ ಒಂದೇ ಅನ್ನೋ ಸಿನಿಮಾ ಅನ್ನೋರ ನಡುವೆ ಈ ನಟನ 6 ಚಿತ್ರ ರಿಲೀಸ್ ಆಗಲಿವೆ ಈ ವರ್ಷ

Published : May 01, 2025, 12:55 PM ISTUpdated : May 01, 2025, 01:06 PM IST

ಬಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರಿರುವ ನಟರ ಸಿನಿಮಾಗಳು ವರ್ಷಕ್ಕೆ ಒಂದೇ ರಿಲೀಸ್ ಆಗುತ್ತವೆ. ಇಂದು ನಾವು ಹೇಳುತ್ತಿರುವ ನಟನ 6 ಸಿನಿಮಾಗಳು ಈ ವರ್ಷ ಬಿಡುಗಡೆಯಾಗುತ್ತಿವೆ.

PREV
17
ವರ್ಷಕ್ಕೆ ಒಂದೇ ಅನ್ನೋ ಸಿನಿಮಾ ಅನ್ನೋರ ನಡುವೆ ಈ ನಟನ 6 ಚಿತ್ರ ರಿಲೀಸ್ ಆಗಲಿವೆ ಈ ವರ್ಷ

ಭೂತನಿ

ಸಿದ್ಧಾಂತ್ ಸಚ್ದೇವ್ ನಿರ್ದೇಶನದ ಹಾರರ್ ಕಾಮಿಡಿ ಚಿತ್ರ ಮೇ 1ಕ್ಕೆ ಬಿಡುಗಡೆಯಾಗಿದೆ. ಸಂಜು ದಾದಾ ಜೊತೆ ಮೌನಿ ರಾಯ್, ಸನ್ನಿ ಸಿಂಗ್ ಸೇರಿದಂತೆ ಹಲವು ಕಲಾವಿದರ ಈ ಚಿತ್ರದಲ್ಲಿ ನಟಿಸಿದ್ದಾರೆ.

27

ಹೌಸ್‌ಫುಲ್ 5

ಇಂದ್ರ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್‌ಮುಖ್ ಸೇರಿದಂತೆ ದೊಡ್ಡ ತಾರಾಗಣವಿದೆ. ಜೂನ್ 6, 2025ರಂದು ಸಿನಿಮಾ ಬಿಡುಗಡೆಯಾಗಲಿದೆ.

37

ಸನ್ ಆಫ್ ಸರ್ದಾರ್ 2

2012ರ ಸನ್ ಆಫ್ ಸರ್ದಾರ್‌ನ ಭಾಗ 2. ಸಂಜು ದಾದಾ ಜೊತೆ ಅಜಯ್ ದೇವಗನ್ ನಟಿಸಿದ್ದಾರೆ. ಆಗಸ್ಟ್ 15, 2025ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. 

47

ಬಾಗಿ 4

ಟೈಗರ್ ಶ್ರಾಫ್ ನಟನೆಯ ಬಾಗಿ ಸರಣಿಯ ನಾಲ್ಕನೇ ಚಿತ್ರ. ಸಂಜು ದಾದಾ ಖಳನಾಯಕ. ಸೆಪ್ಟೆಂಬರ್ 5, 2025ಕ್ಕೆ ಚಿತ್ರಮಂದಿರಗಳಿಗೆ ಪ್ರವೇಶ ನೀಡಲಿದೆ.

57

ವೆಲ್ಕಮ್ ಟು ದಿ ಜಂಗಲ್

ವೆಲ್ಕಮ್ ಸರಣಿಯ ಮೂರನೇ ಚಿತ್ರ ಇದಾಗಿದೆ. ಅಕ್ಷಯ್ ಕುಮಾರ್, ಸಂಜಯ್ ದತ್ ಜೊತೆಗೆ ನಟಿಸಿದ್ದಾರೆ. ಈ ಸಿನಿಮಾವೂ ಇದೇ ವರ್ಷ ತೆರೆಗೆ ಅಪ್ಪಳಿಸಲಿದೆ. ದಿನಾಂಕ ಇನ್ನು ಅಂತಿಮಗೊಂಡಿಲ್ಲ.

67

ಶೇರಾಂ ದಿ ಕೌಮ್ ಪಂಜಾಬ್

ಸಂಜಯ ದತ್ ನಟಿಸಿರುವ ಪಂಜಾಬಿ ಸಿನಿಮಾ ಇದಾಗಿ. ಗಿಪ್ಪಿ ಗ್ರೆವಾಲ್ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದ್ದು, ಇದೇ ವರ್ಷ ಶೇರಾಂ ದಿ ಕೌಮ್ ಪಂಜಾಬ್ ಬಿಡುಗಡೆಯಾಗಲಿದೆ.

77

ಕೆಡಿ ಮತ್ತು ಬಾಪ್ ಸಿನಿಮಾಗಳು ಕೂಡ ಈ ವರ್ಷ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಖಚಿತ ಮಾಹಿತಿ ಇಲ್ಲ. ಈ ವರ್ಷ ಸಂಜಯ್ ದತ್ ನಟನೆಯ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories