ಆಲಿಯಾ ಜೊತೆ New Year Celebration ಮುಗಿಸಿದ ರಣಬೀರ್‌ ಡಲ್ ಇರುವುದೇಕೋ?

Suvarna News   | Asianet News
Published : Jan 03, 2022, 07:57 PM IST

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ (Alia Bhatt) ಹೊಸ ವರ್ಷವನ್ನು ಆಚರಿಸಿದ ನಂತರ ಸೋಮವಾರ ಬೆಳಿಗ್ಗೆ ಮುಂಬೈಗೆ ತಲುಪಿದ್ದಾರೆ. ಇಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಈ ಸಮಯದಲ್ಲಿ ರಣಬೀರ್‌ ಕಪೂರ್‌ ಖುಷ್ ಖುಷಿಯಾಗಿರೋ ಬದಲು, ಡಲ್ ಆಗಿದ್ದರು. ಏನಾದರೂ ಜಗಳವಾಡಿದ್ರಾ ಆಲಿಯಾ ಜೊತೆ? 

PREV
19
ಆಲಿಯಾ ಜೊತೆ New Year Celebration ಮುಗಿಸಿದ ರಣಬೀರ್‌ ಡಲ್ ಇರುವುದೇಕೋ?

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಸೋಮವಾರ ಬೆಳಿಗ್ಗೆ ಮುಂಬೈಗೆ ಮರಳಿದರು. ಇಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ರಣಬೀರ್ ದುಃಖದಲ್ಲಿರುವಂತೆ ಕಾಣುತ್ತಿರುವುದು ಫೋಟೋಗಳಲ್ಲಿ ಕಂಡು ಬರುತ್ತಿದೆ

29

ಅವರು ತನ್ನ ತಲೆ ಬಗ್ಗಿಸಿ ನಡೆಯುತ್ತಿದ್ದರೆ. ಅದೇ ಸಮಯದಲ್ಲಿ, ಆಲಿಯಾ  ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡರು. ಈ ವೇಳೆ ಆಲಿಯಾ ಕಪ್ಪು ಡ್ರೆಸ್‌ ಧರಿಸಿದ್ದರು. ಇಬ್ಬರೂ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ನಡೆಯುತ್ತಿದ್ದರೂ, ಏನೋ ಮುಖ ಗಂಟು ಹಾಕಿ ಕೊಂಡಂತೆ ಕಾಣುತ್ತಿದ್ದರು.

39

ಆಲಿಯಾ ಕಪೂರ್ ಕುಟುಂಬದ ಸೊಸೆಯಾಗಲಿದ್ದಾರೆ. ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಬಗ್ಗೆ ಬಹಳ ದಿನಗಳಿಂದಲೂ ಸುದ್ದಿಯಾಗುತ್ತಲೇ ಇವೆ. ಅಂದಹಾಗೆ, ಈ ಜೋಡಿ 2021ರಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಗಳು ಬಂದಿದ್ದವು. ಆದರೆ ಕೆಲಸದ ಬದ್ಧತೆ ಕಾರಣ ಅದು ಸಾಧ್ಯವಾಗಲಿಲ್ಲ

49

ಈ ವರ್ಷ ಆಲಿಯಾ ಕಪೂರ್ ಕುಟುಂಬದ ಸೊಸೆಯಾಗಲಿದ್ದಾರೆ ಎಂಬ ಸುದ್ದಿ ಬಂದಿದೆ. ಆದರೆ, ಇವರಿಬ್ಬರ ಮದುವೆ ಯಾವಾಗ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಇಬ್ಬರೂ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳುವುದಿಲ್ಲ. ಮುಂಬೈನಲ್ಲೇ ಹಸೆಮಣೆ ಏರುತ್ತಾರೆ.

 

59

ಆಲಿಯಾ ಭಟ್ ಅವರ ತಂದೆ ಮಹೇಶ್ ಭಟ್ ಪ್ರಯಾಣಿಸುವ ಸ್ಥಿತಿಯಲ್ಲಿಲ್ಲ ಮತ್ತು ರಣಬೀರ್ ಕಪೂರ್ ಅವರ ಚಿಕ್ಕಪ್ಪ ರಣಧೀರ್ ಕಪೂರ್ ಅವರ ಸ್ಥಿತಿಯೂ ಚೆನ್ನಾಗಿಲ್ಲ. ಈ ಕಾರಣಕ್ಕಾಗಿ ಇಬ್ಬರೂ ಮುಂಬೈನಲ್ಲಿಯೇ ಮದುವೆಯಾಗಲು ನಿರ್ಧರಿಸಿದ್ದಾರಂತೆ.

69

ತಾಜ್ ಲ್ಯಾಂಡ್ಸ್ ಎಂಡ್ ನಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಎಲ್ಲವೂ ಅಂತಿಮಗೊಂಡಿದೆಯಂತೆ. ಈ ದಿನಗಳಲ್ಲಿ ರಣಬೀರ್ ಕೂಡ ತನಗಾಗಿ ಹೊಸ ಮನೆಯನ್ನು ನಿರ್ಮಿಸುತ್ತಿದ್ದಾರೆ. ಅದರಲ್ಲಿ ಅವರು ಮದುವೆಯ ನಂತರ ಇರುತ್ತಾರಂತೆ. 

79

ಆಧಾರ್ ಜೈನ್ ಮತ್ತು ತಾರಾ ಸುತಾರಿಯಾ ಅವರು ರಣಬೀರ್ ಕಪೂರ್‌ಗಿಂತ ಮೊದಲು ಮದುವೆಯಾಗಬಹುದು, ಈ ಕಾರಣದಿಂದಾಗಿ ರಣಬೀರ್ ತನ್ನ ಮದುವೆಯನ್ನು ಮುಂದೆ ಹಾಕಬೇಕಾಗಿದೆ ಎಂಬ ರೂಮರ್‌ ಹರಿಡಿತ್ತು. 2022ರ ಏಪ್ರಿಲ್‌ನಲ್ಲಿ ಇಬ್ಬರೂ ಮದುವೆಯಾಗುವ ಸಾಧ್ಯತೆಯಿದೆ.

89

ಆಲಿಯಾ ಮತ್ತು ರಣಬೀರ್ ಶೀಘ್ರದಲ್ಲೇ ಅಯಾನ್ ಮುಖರ್ಜಿ ಅವರ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಲ್ಲದೆ, ಅಮಿತಾಬ್ ಬಚ್ಚನ್, ಡಿಂಪಲ್ ಕಪಾಡಿಯಾ, ನಾಗಾರ್ಜುನ ಅಕ್ಕಿನೇನಿ ಮತ್ತು ಮೌನಿ ರಾಯ್ ಕೂಡ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 

99

ಇದಲ್ಲದೇ ಶಂಶೇರಾ, ಅನಿಮಲ್ ಚಿತ್ರಗಳಲ್ಲೂ ರಣಬೀರ್ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಆಲಿಯಾ ಭಟ್ ಸಂಜಯ್ ಲೀಲಾ ಬನ್ಸಾಲಿ ಅವರ ಗಂಗೂಬಾಯಿ ಕಥಿಯಾವಾಡಿ, ಎಸ್ಎಸ್ ರಾಜಮೌಳಿ ಅವರ RRR ಮತ್ತು ಕರಣ್ ಜೋಹರ್ ಅವರ ತಖ್ತ್ ಮತ್ತು ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಥಾ ಸಿನಿಮಾಗಳಲ್ಲೂ ಕೆಲಸ ಮಾಡುತ್ತಿದ್ದಾರೆ.

Read more Photos on
click me!

Recommended Stories