ಕರೀನಾ - ಜಾನ್‌ ಅಬ್ರಹಾಂ : ಕೋವಿಡ್‌ಗೆ ತುತ್ತಾಗಿರುವ Bollywood ಸೆಲೆಬ್ರೆಟಿಗಳು!

First Published | Jan 3, 2022, 7:34 PM IST

ಭಾರತದಲ್ಲಿ ಕೋವಿಡ್ ಪ್ರಕರಮಗಳು ಪ್ರತಿದಿನವೂ ಏರಿಕೆಯಾಗುತ್ತಿವೆ. ಇತ್ತೀಚೆಗೆ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳೂ ಈ ವೈರಸ್ ವಕ್ಕರಿಸಿತ್ತು. ಕರೀನಾ ಕಪೂರ್‌ (Kareena Kapoor) ಜಾನ್ ಅಬ್ರಹಾಂ (John Abraham ), ಮೃಣಾಲ್ ಠಾಕೂರ್ (Mrunal Thakur), ನೋರಾ ಫತೇಹಿ ( Nora Fatehi) ಮತ್ತು ಇನ್ನೂ ಅನೇಕ ಬಾಲಿವುಡ್ ತಾರೆಯರು ಇತ್ತೀಚೆಗೆ ಕೋವಿಡ್ -19 ಪಾಸಿಟಿವ್ ಆಗಿದ್ದಾರೆ 
 

ಜಾನ್ ಅಬ್ರಹಾಂ: 
Instagram ನಲ್ಲಿ ಜಾನ್ ಅಬ್ರಹಾಂ ತಾವು ಕೋವಿಡ್ ಪಾಸಿಟಿವ್ ಆಗಿರುವುದಾಗಿ ಹೇಳಿದರು.'ಸತ್ಯಮೇವ ಜಯತೇ 2' ನಟ ತಾನು ಮೂರು ದಿನಗಳ ಹಿಂದೆ ಒಬ್ಬ ವ್ಯಕ್ತಿಯನ್ನು ಭೇಟಿಯಾಗಿದ್ದೆ, ನಂತರ ಆ ವ್ಯಕ್ತಿ ಕೋವಿಡ್ -19 ಎಂದು ನಟನಿಗೆ ತಿಳಿಯಿತು, ಎಂದಿದ್ದಾರೆ. ಪತ್ನಿ ಪ್ರಿಯಾ ಕೂಡ ಕೋರೊನಾ ಪಾಸಿಟಿವ್ ಆಗಿದ್ದಾರೆ.

Image: Instagram

ಮೃಣಾಲ್ ಠಾಕೂರ್: 
ಇತ್ತೀಚೆಗಷ್ಟೇ ಮೃಣಾಲ್ ಠಾಕೂರ್ ಕೂಡ ಪಾಸಿಟಿವ್ ಆಗಿದ್ದರು. ಶಾಹಿದ್ ಕಪೂರ್ ನಾಯಕನಾಗಿ ನಟಿಸಿರುವ ತನ್ನ ಬಾಲಿವುಡ್ ಚೊಚ್ಚಲ 'ಜೆರ್ಸಿ' ಪ್ರಚಾರದಲ್ಲಿ ಮೃಣಾಲ್ ನಿರತರಾಗಿದ್ದರು. ಮೊದಲು ಈ ಸಿನಿಮಾವನ್ನು ಡಿಸೆಂಬರ್ 31ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್ -19 ಹರಡುವಿಕೆಯಿಂದಾಗಿ ವಿಳಂಬವಾಗಿದೆ.

Tap to resize

Image: Instagram

ನೋರಾ ಫತೇಹಿ: 
'ಕುಸು ಕುಸು' ಗರ್ಲ್‌ ನೋರಾ ಫತೇಹಿಗೂ ಇತ್ತೀಚೆಗೆ ಕೋರೊನಾ ವೈರಸ್‌ ತಗುಲಿತ್ತು. ನೋರಾ ಅವರ ಇತ್ತೀಚಿನ ಸಂಗೀತ ವೀಡಿಯೊ 'ಡ್ಯಾನ್ಸ್ ಮೇರಿ ರಾಣಿ' ನಲ್ಲಿ ಗುರು ರಾಂಧವ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ವಂಚಕ ಸುಕೇಶ್ ಚಂದ್ರಶೇಖರ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಕಳೆದ ವರ್ಷವೂ ಸುದ್ದಿಯಲ್ಲಿದ್ದರು.

ಕರೀನಾ ಕಪೂರ್ ಖಾನ್:
 ಬೆಬೋ, ಕರೀನಾ ಕಪೂರ್ ಖಾನ್, ಡಿಸೆಂಬರ್ ಮೊದಲ ವಾರದಲ್ಲಿ ಕೋವಿಡ್ -19  ಪಾಸಿಟಿವ್‌ ಎಂದು ವರದಿಯಾಗಿತ್ತು. ನಟಿಯ ಕೋವಿಡ್ -19 ಟೆಸ್ಟ್‌ ಫಲಿತಾಂಶವನ್ನು ಮೊದಲು BMC ದೃಢಪಡಿಸಿತು ಹಾಗೂ  ನಟಿ ಕೋವಿಡ್ -19 ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಸಹ  BMC ಆರೋಪಿಸಿತ್ತು.

Image: Instagram

ಅರ್ಜುನ್ ಕಪೂರ್: 
ಮಲೈಕಾ ಅರೋರಾ ಅವರ ಬಾಯ್‌ಫ್ರೆಂಡ್‌  ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ಕೋರೊನಾ ಪಾಸಿಟಿವ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಕೋವಿಡ್-19 ಪ್ರೋಟೋಕಾಲ್‌ಗಳನ್ನು ಅನುಸರಿಸಿ ನಟನ ಕಟ್ಟಡವನ್ನು  ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸೀಲ್ ಮಾಡಿದೆ.

Image: Instagram

ಅಂಶುಲಾ ಕಪೂರ್ :
ಅರ್ಜುನ್ ಕಪೂರ್ ಜೊತೆಗೆ, ನಟನ ಕಿರಿಯ ಸಹೋದರಿ, ಅಂಶುಲಾ ಕಪೂರ್ ಕೂಡ ವೈರಸ್‌ಗೆ ತುತ್ತಾಗಿದ್ದಾರೆ. ಸದ್ಯ  ಅಂಶುಲಾ ಕಪೂರ್  ಕೂಡ ವೈರಸ್‌ನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

Image: Instagram

ಅಮೃತಾ ಅರೋರಾ:

ಕರೀನಾ ಕಪೂರ್ ಖಾನ್ ಜೊತೆಗೆ ಮಲೈಕಾ ಅರೋರಾ ಅವರ ಸಹೋದರಿ, ನಟ ಅಮೃತಾ ಅರೋರಾ ಅವರಿಗೆ ಕೂಡ ಇರುವುದು ತಿಳಿದು ಬಂದಿತ್ತು. ಕರೀನಾರಂತೆ ಅಮೃತಾ ಕೂಡ ಹಲವಾರು ಪಾರ್ಟಿಗಳಿಗೆ ಹಾಜರಾಗುವ ಮೂಲಕ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು BMC ಆರೋಪಿಸಿದೆ.

ಶನಯಾ ಕಪೂರ್: 
ಅನಿಲ್‌ ಕಪೂರ್‌ ಸಹೋದರ ನಟ ಸಂಜಯ್ ಕಪೂರ್ ಅವರ ಮಗಳು, ಶನಯಾ ಕಪೂರ್ ಅವರು ಕೋವಿಡ್ -19 ವಕ್ಕರಿಸಿತ್ತು. ಇದನ್ನು ತಮ್ಮ ಫಾಲೋಯರ್ಸ್ ಗೆ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದರು.

Image: Instagram

ಮಹೀಪ್ ಕಪೂರ್:
ಕಳೆದ ತಿಂಗಳು ಡಿಸೆಂಬರ್‌ನಲ್ಲಿ ಶನಯಾ ಕಪೂರ್ ಅವರ ತಾಯಿ ಮಹೀಪ್ ಕಪೂರ್ ಕೂಡ ಕೋವಿಡ್ -19  ಪಾಸಿಟಿವ್‌ ಬಂದಿತ್ತು. ತಾಯಿ-ಮಗಳು ಇದೀಗ ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.

ಸೀಮಾ ಖಾನ್:
ಸೊಹೈಲ್ ಖಾನ್ ಅವರ ಪತ್ನಿ ಸೀಮಾ ಖಾನ್ ಮತ್ತು ಅವರ 10 ವರ್ಷದ ಮಗ ಇಬ್ಬರೂ ಕೋವಿಡ್‌ ಪಾಸಿಟಿವ್. ಸೀಮಾ, ಮಹೀಪ್ ಮತ್ತು ಇತರರು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ನಿವಾಸದಲ್ಲಿ ಖಾಸಗಿ ಔತಣಕೂಟದಲ್ಲಿ ಭಾಗವಹಿಸಿದ್ದರು. ನಂತರ ಅವರು ಪಾಸಿಟಿವ್‌ ರಿಸೆಲ್ಟ್‌ ಬಂದಿದೆ.

Latest Videos

click me!