ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ಸಿನಿ ಜಗತ್ತಿನ ಪಯಣ ಮುಗಿಸಿದ್ದಾರೆ. ಕರ್ನಾಟಕದೊಂದಿಗೂ ಖಾನ್ ನಂಟು ಇಟ್ಟುಕೊಂಡಿದ್ದರು. ಹಿರಿಯ ರಂಗಕರ್ಮಿ ಅವರ ಶಿಷ್ಯರು ಸಹ ಹೌದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪ್ರಸನ್ನ ಅವರ ಶಿಷ್ಯರಾಗಿ ಖಾನ್ ಇದ್ದರು. ನನಗೆ ನಟನೆಯಲಿ ಸ್ಪಷ್ಟತೆ ಬಂದಿದ್ದೇ ಗುರುಗಳಾದ ಪ್ರಸನ್ನ ಅವರಿಂದ ಅಂತಾ ಇರ್ಫಾನ್ ಹಲವು ಸಾರಿ ಹೇಳಿದ್ದಾರೆ ಕೈಮಗ್ಗ ಉಳಿಸಲು ಪ್ರಸನ್ನ ಸತ್ಯಾಗ್ರಹ ನಿರತರಾಗಿದ್ದರು. ಈ ವೇಳೆ ರಾಗಿ ಅಂಬಲಿ ಕುಡಿದು ಮೈಸೂರಿನಲ್ಲಿ ಉಳಿದಿದ್ದರು ನಟ ಇರ್ಫಾನ್ ಖಾನ್ ಮೈಸೂರಿನ ಬದನವಾಳು ಗ್ರಾಮದಲ್ಲಿ ನಡೆದ ಕೈ ಮಗ್ಗ ಉಳಿವು, ಸುಸ್ಥಿರ ಅಭಿವೃದ್ಧಿ ಹೋರಾಟದಲ್ಲಿ ಖಾನ್ ಭಾಗಿಯಾಗಿದ್ದರು. 2015 ರಲ್ಲಿ ನಡೆದ ಈ ಹೋರಾಟದಲ್ಲಿ ಬದನವಾಳು ಗ್ರಾಮದಲ್ಲಿ ಇರ್ಫಾನ್ ಉಳಿದಿದ್ದರು.. ಇರ್ಫಾನ್ ಖಾನ್ ಜೊತೆಗೆ ಪತ್ನಿ ಸುಪತಾ ಸಿಕ್ದಾರ್ ಕೂಡ ಇದ್ದರು ಹೋರಾಟ ಆರಂಭಕ್ಕೂ ಮುನ್ನವೇ ಖಾನ್ ಸ್ಟಾರ್ ಆಗಿದ್ದರೂ ತಮ್ಮ ಗುರುಗಳೊಂದಿಗೆ ಸೇರಿ ಸರಳತೆಗೆ ಅರ್ಥ ನೀಡಿದ್ದರು. ಸ್ಟಾರ್ ಆದ ಮೇಲೂ ರಾಗಿ ಅಂಬಲಿ ಮಾಡಿಕೊಂಡು ಮೈಸೂರಿನಲ್ಲೇ ಉಳಿದಿದ್ದ ಖಾನ್! Bollywood Actor Irfan khan Link with Karnataka Bollywood actor Irrfan Khan, who passed away on Wednesday, had participated in the Badanavalu movement in Nanjangud, and had visited Mysuru a couple of times, in the recent past. In 2015, the actor had visited Badanavalu, a village near Nanjangud.