Arbaaz Khan & Sshura Khan: ಮಗನಿಗೆ 22 ವರ್ಷ; ಎರಡನೇ ಮಗು ನಿರೀಕ್ಷೆಯಲ್ಲಿ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್

Published : Jun 05, 2025, 01:17 PM ISTUpdated : Jun 05, 2025, 01:23 PM IST

ನಟ ಸಲ್ಮಾನ್‌ ಖಾನ್‌ ಸಹೋದರ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಈ ಜೋಡಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಕೆಲ ದಿನಗಳಿಂದ ಇವರು ಆಗಾಗ ಆಸ್ಪತ್ರೆಗೆ ಬರುತ್ತಿದ್ದಾರೆ.

PREV
17

ಶುರಾ ಖಾನ್‌ ಅವರು ಗರ್ಭಿಣಿಯಾಗಿರುವ ಬಗ್ಗೆ ಕಳೆದ ಕೆಲವು ದಿನಗಳಿಂದ ವದಂತಿಗಳು ಹರಡುತ್ತಿವೆ.  ಈ ಜೋಡಿ ಈ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. ಆದರೆ ಕೆಲ ದಿನಗಳಿಂದ ಇವರು ಆಗಾಗ ಆಸ್ಪತ್ರೆಗೆ ಬರುತ್ತಿದ್ದಾರೆ.

27

ಮುಂಬೈನಲ್ಲಿ ಇತ್ತೀಚಿಗೆ ತಮ್ಮ ಪತ್ನಿಯೊಂದಿಗೆ ಕಾಣಿಸಿಕೊಂಡಾಗ ಅರ್ಬಾಜ್ ಖಾನ್‌ ಅವರು ಪರೋಕ್ಷವಾಗಿ ಈ ಬಗ್ಗೆ ಮಾತನಾಡಿದಂತಿದೆ. ಡಿನ್ನರ್‌ ಡೇಟ್‌ ಬಳಿಕ ಪಾಪರಾಜಿಗಳಿಗೆ ಪೋಸ್ ನೀಡುವಾಗ, ಅರ್ಬಾಜ್‌ ಖಾನ್‌ಗೆ ಫೋಟೋಗ್ರಾಫರ್ಸ್‌ ಶುಭಾಶಯಗಳನ್ನು ತಿಳಿಸಿದರು, ಆಗ ಈ ಜೋಡಿ ನಾಚಿಕೊಳ್ಳುತ್ತ ನಕ್ಕಿದೆ.

37

ಒಂದು ಕಡೆ ಅರ್ಬಾಜ್‌ ಖಾನ್‌, ಫೋಟೋಗ್ರಾಫರ್ಸ್‌ಗೆ ಸುಮ್ಮನಿರುವಂತೆ ಹೇಳಿದ್ದಾರೆ. ಇನ್ನು ಈ ಜೋಡಿ ಸ್ಥಳದಿಂದ ಹೊರಡಲು ರೆಡಿಯಾದಾಗ, ಓರ್ವ ಫೋಟೋಗ್ರಾಫರ್, “ಅವರನ್ನು ಹೋಗಲು ಬಿಡಿ” ಎಂದಿದ್ದಾರೆ. ಆಗ ಅರ್ಬಾಜ್ ಖಾನ್ ನಗುತ್ತಾ, “ನೀವೂ ಸಹ ಬಿಟ್ಟುಬಿಡಿ. ಸ್ವಲ್ಪ ಅರ್ಥ ಮಾಡಿಕೊಳ್ಳಿ” ಎಂದು ಹೇಳಿದರು.

47

ಅರ್ಬಾಜ್ ಖಾನ್ ಅಥವಾ ಶುರಾ‌ ಖಾನ್‌ ತಾವು ಪ್ರಗ್ನೆಂಟ್‌ ಎನ್ನೋದನ್ನು ಅಧಿಕೃತವಾಗಿ ದೃಢಪಡಿಸಲಿಲ್ಲ ಅಥವಾ ನಿರಾಕರಿಸಲಿಲ್ಲ, ಆದರೆ ಈ ವಿಡಿಯೋ ವದಂತಿಗಳಿಗೆ ಮತ್ತಷ್ಟು ಒತ್ತು ನೀಡಿದೆ.

57

“ಶುರಾ ಖಾನ್ ತುಂಬಾ ನಾಚಿಕೆಯಿಂದ‌ ಇರುವಂತೆ ಕಾಣುತ್ತಾಳೆ, ಪ್ರಗ್ನೆನ್ಸಿ ಅವಳನ್ನು ತುಂಬಾ ಸುಂದರವಾಗಿ, ಕಾಂತಿಯುಕ್ತವಾಗಿ ಕಾಣುವಂತೆ ಮಾಡಿದೆ” ಎಂದು ಒಬ್ಬ ಅಭಿಮಾನಿ ಈ ವಿಡಿಯೋಕ್ಕೆ ಕಾಮೆಂಟ್‌ ಮಾಡಿದ್ದಾರೆ. ಇನ್ನೋರ್ವ “ಅರ್ಬಾಜ್‌ ಈಗ ತಂದೆಯಾಗಲಿದ್ದಾನೆ” ಎಂದು ಬರೆದುಕೊಂಡಿದ್ದಾರೆ.

67

ಡಿಸೆಂಬರ್ 24, 2023 ರಂದು ಅರ್ಬಾಜ್ ಮತ್ತು ಶುರಾ ಖಾನ್‌ ಅವರು ಅರ್ಪಿತಾ ಖಾನ್ ಶರ್ಮಾ ಅವರ ಮುಂಬೈನ ಮನೆಯಲ್ಲಿ ಖಾಸಗಿಯಾಗಿ ಮದುವೆಯಾದರು.

77

ಈ ಹಿಂದೆ ಅರ್ಬಾಜ್ ಖಾನ್‌ ಅವರು ನಟಿ ಮಲೈಕಾ ಅರೋರಾರನ್ನು ಮದುವೆಯಾದರು. ಈ ಜೋಡಿಗೆ ಅರ್ಹಾನ್‌ ಖಾನ್‌ ಎಂಬ 22 ವರ್ಷದ ಮಗನಿದ್ದಾನೆ. 2016 ರಲ್ಲಿ ಈ ಜೋಡಿ ಬೇರ್ಪಟ್ಟು 2017 ರಲ್ಲಿ ಅಧಿಕೃತವಾಗಿ ಡಿವೋರ್ಸ್‌ ಪಡೆದಿದ್ದಾರೆ. ಶುರಾಳನ್ನು ಮದುವೆಯಾಗೋ ಮೊದಲು ಜಾರ್ಜಿಯಾ ಆಂಡ್ರಿಯಾನಿ ಜೊತೆ ಅರ್ಬಾಜ್‌ ಖಾನ್ ಡೇಟಿಂಗ್ ಮಾಡಿದ್ದರು.‌ ಅಂದಹಾಗೆ ಮಲೈಕಾ ಅರೋರ ಕೂಡ ಅರ್ಜುನ್‌ ಕಪೂರ್‌ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದು, ಈಗ ಬೇರ್ಪಟ್ಟಿದ್ದಾರೆ.

Read more Photos on
click me!

Recommended Stories